ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಡೀ ದೇಶಕ್ಕೆ ರಾಖಿ ಭಾಯ್. KGF ಸಿನಿಮಾ ಮೂಲಕ ಮತ್ತೆ ರಾಕಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡ ಈತ ಇದಕ್ಕೂ ಮುನ್ನ ಇದೇ ಹೆಸರಿನಲ್ಲಿ ಸಿನಿಮಾ ಕೂಡ ಮಾಡಿದ್ದರು. ಅಷ್ಟಲ್ಲದೆ ಅದೇ ಅವರು ಸಂಪೂರ್ಣ ಪ್ರಮಾಣದಲ್ಲಿ ನಾಯಕನ ಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಆಗಿತ್ತು ಮತ್ತು ಈ ರಾಕಿ ಸಿನಿಮಾದ (Rocky) ನಿರ್ದೇಶಕ ನಾಗೇಂದ್ರ ಅರಸು, (Director Nagendra Uras) ಕನ್ನಡದ ಹೆಸರಾಂತ ಖಳನಾಯಕ ಸುಂದರ್ ಕೃಷ್ಣ ಅರಸ್ ಪುತ್ರ.
ಆ ರಾಕಿ ಇಂದ ರಾಕಿಂಗ್ ಸ್ಟಾರ್ ಮತ್ತು ಈಗ ರಾಕಿ ಭಾಯ್ ಆಗಿ ಯಶ್ ಯಶಸ್ಸು ಬದಲಾಗಿರುವುದರ ಬಗ್ಗೆ ಮತ್ತು ಅವರಿಗೆ ಹೇಗೆ ಇವರನ್ನೇ ಹೀರೋ ಆಗಿ ಹಾಕಿಕೊಳ್ಳಬೇಕು ಎನಿಸಿತು ಎನ್ನುವುದರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ನಿಜವಾಗಿಯೂ ನಾನು ರಾಕಿ ಸಿನಿಮಾ ವನ್ನು ಯಶ್ ಕಾಗಿ ಮಾಡಿರಲಿಲ್ಲ ಬೇರೆ ನಿರ್ಮಾಪಕರ ಮಗನಿಗಾಗಿ ಮಾಡಿದ್ದು ಆದರೆ ನನಗೂ ನಿರ್ಮಾಪಕರಿಗೂ ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಆಗದ ಕಾರಣ ಅವರ ಮಗನಿಗೆ ಆ ಸಿನಿಮಾ ಮಾಡಲಾಗಲಿಲ್ಲ.
ಅಕ್ಕ ಅಕ್ಕ ಅನ್ಕೊಂಡೆ ಸಂಗೀತಾಗೆ ಸ್ಕೆಚ್ ಹಾಕಿದ ಪ್ರತಾಪ್.! ಟಿಕೆಟ್ ಟೂ ಫೈನಲ್ ಗೇಮ್ ನಿಂದ ಹೊರ ಬಿದ್ದ ಸಂಗೀತಾ.!
ಹಿಂದೊಮ್ಮೆ ಎ.ಪಿ ಅರ್ಜುನ್ ಮನೆಗೆ ಹೋಗಿದ್ದೆ ಆ ಸಮಯದಲ್ಲಿ ನಂದಗೋಕುಲ ಸೀರಿಯಲ್ ನಡೆಯುತ್ತಿತ್ತು ಆ ಸೀರಿಯಲ್ ನಲ್ಲಿ ನೋಡಿ ಈ ಹುಡುಗ ಸಿನಿಮಾ ಇಂಡಸ್ಟ್ರಿಗೆ ಬಂದರೆ ಕ್ಲಿಕ್ ಆಗುತ್ತಾನೆ ಎಂದುಕೊಂಡಿದ್ದೆ. ಅದಾದ ಮೇಲೆ ಬಹಳ ತಿಂಗಳಾದ ನಂತರ ನನಗೆ ಅದು ಫ್ಲಾಶ್ ಆಯ್ತು ಆಗ ಅವನ ಹೆಸರು ಕೂಡ ಗೊತ್ತಿರ್ಲಿಲ್ಲ. ಧಾರವಾಹಿಯಲ್ಲಿ ಇದ್ದ ನನ್ನ ಕೆಲ ಗೆಳೆಯರ ಪ್ರಕಾರವಾಗಿ ಅವರ ಬಗ್ಗೆ ತಿಳಿದುಕೊಂಡು ಭೇಟಿ ಮಾಡಿದ್ದೆ.
ಆಗಷ್ಟೇ ಅವರು ಮೊಗ್ಗಿನ ಮನಸ್ಸು ಸಿನಿಮಾದಲ್ಲಿ (Moggina Manassu) ಕಾಣಿಸಿಕೊಂಡಿದ್ದರು, ಸಿನಿಮಾ ಪೂರ್ತಿ ಆಗಿತ್ತು ರಿಲೀಸ್ ಆಗಿರಲಿಲ್ಲ. ಅಷ್ಟರಲ್ಲಿಯೇ ನಾನು ಪೂರ್ಣ ಪ್ರಮಾಣದಲ್ಲಿ ನನ್ನ ಸಿನಿಮಾದಲ್ಲಿ ಹೀರೋ ಆಗುತ್ತೀಯ ಎಂದಾಗ ಅವರು ಬಹಳ ಖುಷಿ ಪಟ್ಟರು, ಧನ್ಯವಾದಗಳು ಹೇಳಿದರು. ಅಷ್ಟೇ ಲವಲವಿಕೆಯಿಂದ ಸಿನಿಮಾ ಪೂರ್ತಿ ಕಾಣಿಸಿಕೊಂಡರು.
1008 ಅನಾಥ ಶ’ವಗಳ ಸಂಸ್ಕಾರ ಮಾಡಿ ವಿಶ್ವದಾಖಲೆ ಮಾಡಿದ ಸಮಾಜ ಸೇವಕನಿಗೆ ಆ್ಯಂಬುಲೆನ್ಸ್ ಗಿಫ್ಟ್ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್.!
ಆತನಿಗೆ ಡೈರೆಕ್ಟರ್ ಏನು ಹೇಳುತ್ತಾರೆ ಎನ್ನುವುದನ್ನು ಏಕಾಗ್ರತೆಯಿಂದ ಕೇಳಿ ಅರ್ಥೈಸಿಕೊಳ್ಳುವ ಗುಣವಿದೆ ಮತ್ತು ಆತ ತನ್ನ ಕಲ್ಪನೆಯಲ್ಲಿ ಆ ಪಾತ್ರವನ್ನು ಸೃಷ್ಟಿಸಿ ಕೊಳ್ಳುತ್ತಾನೆ ಮತ್ತು ಆ ಪಾತ್ರಕ್ಕೆ ಹೇಗೆ ನ್ಯಾಯ ಒದಗಿಸಬಹುದು ಎನ್ನುವುದನ್ನು ಹತ್ತಾರಃ ಆಯಾಮದಲ್ಲಿ ಯೋಚಿಸಿ ಅಭಿನಯಿಸಿ ಅಚ್ಚರಿ ಮೂಡಿಸುತ್ತಾನೆ ಅದೇ ಯಶ್ ಯಶಸ್ಸಿನ ಕೊಟ್ಟು. ನಾನು ಹೇಳುವುದು ಹೇಳಿ ಬಿಟ್ಟು ನನಗೆ ಗಾಬರಿಯಾಗುತ್ತಿತ್ತು
ಆದರೆ ನನ್ನ ನಿರೀಕ್ಷೆಗೂ ಮೀರಿ ಚೆನ್ನಾಗಿ ಮಾಡಿಕೊಂಡೆ ಬಂದರು. ಅದರಲ್ಲೂ ನನ್ನ ಸಿನಿಮಾದಲ್ಲಿ ಆರು ಹಾಡುಗಳು ಇದ್ದವು ಡ್ಯಾನ್ಸ್ ಮಾಡಬೇಕಿತ್ತು, ಈತ ಮಾಡ್ತಾನೋ ಇಲ್ಲವೋ ಎನ್ನುವ ಗೊಂದಲ ಇತ್ತು, ಅವರು ಅದ್ಭುತವಾಗಿ ನಡೆಸಿಕೊಟ್ಟರು.
ಸಿನಿಮಾ ಶೂಟಿಂಗ್ ಗಿಂತ ಹಾಡುಗಳ ಶೂಟಿಂಗ್ ನೋಡುವಾಗ ನಾನು ಆತನಿಗೆ ಹೇಳಿದ್ದೆ ಖಂಡಿತವಾಗಿಯೂ ಈ ಸಿನಿಮಾದಿಂದ ನಿನ್ನ ಅದೃಷ್ಟ ಬದಲಾಗುತ್ತದೆ, ನೀನು ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಆಗುತ್ತೀಯ ಎಂದಿದ್ದೆ ಆದರೆ ಆಗ ಅವರು ಲಾಂಚ್ ಆಗುತ್ತಿದ್ದ ಕಾರಣ ಆ ಟೈಟಲ್ ಬಳಸಲು ಆಗಲಿಲ್ಲ, ಅವರು ಇದೆಲ್ಲ ಸಾಧ್ಯವಾ ಬಿಡಿ ಸರ್ ಎನ್ನುತ್ತಿದ್ದರು.
ಕಷ್ಟದಲ್ಲಿ ಇದ್ದಾಗ ನನಗೆ ಸಹಾಯ ಮಾಡಿದ್ದು ದರ್ಶನ್ ಮಾತ್ರ.! ಭಾವುಕರಾದ ನಟ ಶ್ರೀಮುರುಳಿ
ಕೆಲವು ವರ್ಷಗಳು ಬಿಟ್ಟು ನೋಡಿದರೆ ಇಂದು ಇದೇ ಹೆಸರಿನ ಜಗತ್ಪ್ರಸಿದ್ಧ. ಬೇರೆ ಭಾಷೆಗಳ ಇಂಟರ್ವಿನಲ್ಲಿ ಈಗಿನ ರಾಕಿ ಬಾಯ್ ಹಾಗೂ ನನ್ನ ಹಳೆಯ ರಾಖಿ ಬಗ್ಗೆ ಪ್ರಶ್ನೆ ಕೇಳುವಾಗ, ಮಾತನಾಡುವಾಗ ಬಹಳ ಹೆಮ್ಮೆ ಅನಿಸುತ್ತದೆ. ಯಶ್ ಪಕ್ಕ ಹೀರೋ ಪ್ರೊಡಕ್ಟ್ ಎನ್ನುವುದು ನನಗೆ ಅವರು ಸೀರಿಯಲ್ ನೋಡಿಯೇ ಗೊತ್ತಾಯ್ತು ಎಂದಿದ್ದಾರೆ.