ಧಾರಾವಾಹಿ ಎನ್ನುವುದು ಬರಿ ಮನೋರಂಜನೆ ಅಲ್ಲ. ಗೃಹಿಣಿಯರ ಬದುಕಿನ ಒಂದು ಭಾಗ ಎಂದು ಹೇಳಬಹುದು. ಅದರಲ್ಲೂ ಹೆಣ್ಣು ಮಕ್ಕಳು ಮಾತ್ರ ಸೀರಿಯಲ್ ನೋಡುತ್ತಾರೆ ಎಂದು ಇದ್ದ ಜಮಾನ ಹೋಗಿ ಈಗ ಕೂತಲ್ಲಿ ನಿಂತಲ್ಲಿ ಕೈಯಲ್ಲಿರುವ ಮೊಬೈಲ್ ನಲ್ಲಿ ಸ್ಕ್ರೀನ್ ಮಾಡಿ ನೋಡುವ ಅವಕಾಶ ಸಿಕ್ಕಿರುವುದರಿಂದ ಕಾಲೇಜು ಮಕ್ಕಳಿಂದ ಹಿಡಿದು ಕೆಲಸಕ್ಕೆ ಹೋಗುವವರಿಗೆ ಪ್ರತಿಯೊಬ್ಬರು ಸೀರಿಯಲ್ ಬಗ್ಗೆ ಮಾತನಾಡುತ್ತಾರೆ.
ಆದರೆ ಪ್ರತಿನಿತ್ಯವೂ ಸೀರಿಯಲ್ ಪ್ರಸಾರವಾಗುವ ಸಮಯಕ್ಕೆ ಎಪಿಸೋಡ್ ನೋಡುವುದೇ ಒಂದು ಮಜಾ. ಇಂತಹ ಅಭ್ಯಾಸ ಬೆಳೆಸಿಕೊಂಡಿರುವವರಿಗೆ ದಾರಾವಾಹಿಯೊಂದು ಅಂತ್ಯ ಕಾಣುತ್ತದೆ ಎಂದರೆ ಅದೇನೋ ಕಳೆದುಕೊಂಡ ಸಂಕಟ ಎಷ್ಟು ಕೆಲಸವಿದ್ದರೂ ತಮ್ಮ ನೆಚ್ಚಿನ ಧಾರಾವಾಹಿ ಸಮಯಕ್ಕೆ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದವರಿಗೆ ತಮ್ಮ ನೆಚ್ಚಿನ ನಾಯಕ ನಟ ನಟಿಯರು ಇನ್ನು ಮುಂದೆ ಆ ಸಮಯಕ್ಕೆ ಬರಲಿಲ್ಲ ಎಂದರೆ ಏನೋ ಕ’ಸಿ’ವಿ’ಸಿ.
ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!
ಈಗ ಅಂತಹದ್ದೊಂದು ನೋವನ್ನು ನುಂಗುವ ಪರಿಸ್ಥಿತಿ ಗಟ್ಟಿಮೇಳ (Gattimela Serial) ಫ್ಯಾನ್ಸ್ ಗೆ ಬಂದಿದೆ. ಯಾಕೆಂದರೆ ಜೀ ಕನ್ನಡ ವಾಹಿನಿಯಲ್ಲಿ (Zee Kannada) 2019 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8:00 ಗಂಟೆಗೆ ಪ್ರಸಾರವಾಗುತ್ತಿದ್ದ ವೇದಾಂತ್ ಆಗಿ ರಕ್ಷ್ ಹಾಗೂ ಅಮೂಲ್ಯ ಆಗಿ ನಿಶಾ ರವಿಕೃಷ್ಣನ್ ಅವರು ಅಭಿನಯಿಸಿ ಮೋಡಿ ಮಾಡಿದ್ದ ಈ ಜೋಡಿಯ ಗಟ್ಟಿಮೇಳ ಸುಖಾಂತ್ಯ ಕಾಣುತ್ತಿದೆ.
ಜನವರಿ 5 ರಂದು ತನ್ನ ಕೊನೆಯ 1200 ಎಪಿಸೋಡ್ ಪ್ರಸಾರವಾಗುತ್ತಿದ್ದು ಕಳೆದ ನಾಲ್ಕುವರೆ ವರ್ಷಗಳಿಂದ ಪ್ರೇಕ್ಷಕರು ಮನ ಗೆದ್ದಿದ್ದ ಈ ಧಾರಾವಾಹಿ ಕನ್ನಡ ಹಿರಿತೆರೆ ನಟಿ ಶ್ವೇತಾ ಅವರ ಮುಖ್ಯಭೂಮಿಕೆಯ ಲಕ್ಷ್ಮೀ ನಿವಾಸ ಎನ್ನುವ ಹೊಸ ಧಾರವಾಹಿಗೆ ತನ್ನ ಸಮಯ ಬಿಟ್ಟು ಕೊಡುತ್ತಿದೆ.
ದರ್ಶನ್ ಕಾಟೇರ ಸಿನಿಮಾದಲ್ಲಿ ಧರಿಸಿದ ಶರ್ಟ್ ನಿಂದ ಲಕ್ಷ ಲಕ್ಷ ಹಣ ದುಡಿಯುತ್ತಿರುವ ಹುಡುಗ.!
ವೇದಾಂತ್ ಹಾಗೂ ಅಮೂಲ್ಯ ಕೆಮಿಸ್ಟ್ರಿ ನೋಡಿ ಅನೇಕರು ಗಟ್ಟಿಮೇಳ ಧಾರವಾಹಿಗೆ ಫಿದಾ ಆಗಿದ್ದರು, ಶುಂಠಿ ಶಂಕರ ಹಾಗೂ ಬಜಾರಿ ರೌಡಿ ಬೇಬಿ ತಮ್ಮ ನೈಜ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಧಾರಾವಾಹಿ ತುಂಬಾ ಲವಲವಿಕೆಯ ಪಾತ್ರಗಳಿದ್ದ ಕಾರಣ ಪ್ರತಿಯೊಬ್ಬರಿಗೂ ಈ ಧಾರಾವಾಹಿ ಇಷ್ಟವಾಗಿತ್ತು.
ಶಾಲಾ ಮಕ್ಕಳಿಂದ ಹಿಡಿದು ಮನೆಯಲ್ಲಿರುವ ಅಜ್ಜಿಯರಿಗೆ ಪ್ರತಿಯೊಬ್ಬರು ಈ ಧಾರಾವಾಹಿಯನ್ನು ಇಷ್ಟಪಡುತ್ತಿದ್ದರು. ಈಗ ಧಾರಾವಾಹಿ ಮುಕ್ತಾಯ ಆಗುತ್ತಿರುವುದರಿಂದ ಖಂಡಿತವಾಗಿ ಇದನ್ನು ಜನರ ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನಿರೀಕ್ಷಿಸಿರುವ ವಾಹಿನಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿಮ್ಮ ನೆಚ್ಚಿನ ಗಟ್ಟಿಮೇಳ ಸೀರಿಯಲ್ ಕ್ಲೈಮ್ಯಾಕ್ಸ್ ಹಂತದಲ್ಲಿದೆ ನೀವು ಏನನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ಕೇಳಿದೆ.
ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!
ಇದಕ್ಕೆ ನಿರೀಕ್ಷೆ ಮೀರಿದ ಉತ್ತರ ಬಂದಿದ್ದು ಕೆಲವರು ಒಂದು ಧಾರಾವಾಹಿ ಮುಗಿದ ತಕ್ಷಣ ಮತ್ತೊಂದು ಧಾರಾವಾಹಿಗೆ ಶಿಫ್ಟ್ ಆಗುವವರು ನಾವಲ್ಲ. ನಾವು ಎಂದೆಂದಿಗೂ ಗಟ್ಟಿಮೇಳ ಡೈ ಹಾರ್ಟ್ ಫ್ಯಾನ್ಸ್ ಎಂದು ಹೇಳಿದ್ದಾರೆ, ಇನ್ನು ಕೆಲವರು ಆರಂಭ ಇದ್ದ ಮೇಲೆ ಅಂತ್ಯ ಕೂಡ ನಿರೀಕ್ಷಿತವಾದ್ದದ್ದೇ.
ಕೆಲವೊಂದು ವಿದಾಯಗಳು ಕಠಿಣ ಆದರೆ ಅನಿವಾರ್ಯವಲ್ಲವೇ ಎಂದು ಕೇಳಿದ್ದಾರೆ ಮತ್ತೆ ಕೆಲವರು ಗಟ್ಟಿಮೇಳ ನಾವು ನೋಡಿದ ಸೀರಿಯಲ್ ಗಳಲ್ಲಿ ಅತ್ಯುತ್ತಮ ಇಷ್ಟು ಬೇಗ ಮುಗಿದಿದ್ದು ಬೇಜಾರಾಗುತ್ತಿದೆ ಖಂಡಿತವಾಗಿ ನಾವು ರೌಡಿ ಬೇಬಿ ಮತ್ತು ವೇದಾಂತ್ ನನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನೀವು ಕೂಡ ಗಟ್ಟಿಮೇಳ ಧಾರವಾಹಿ ಪ್ರೇಕ್ಷಕವಾಗಿದ್ದಾರೆ ಇನ್ನು ಮುಂದೆ ಏನನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ಕಮೆಂಟ್ ಮಾಡಿ ತಿಳಿಸಿ.