Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!

Posted on January 6, 2024 By Admin No Comments on ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!

 

ಸೆಂಚುರಿ ಸ್ಟಾರ್ ಶಿವಣ್ಣ (Century Star Shivanna) ಕನ್ನಡ ಮಾತ್ರವಲ್ಲದೆ ಈಗ ಕಾಲಿವುಡ್ ನಲ್ಲಿ (Kollywood) ಕೂಡ ಬಹಳ ಬೇಡಿಕೆ ನಟನಾಗಿದ್ದಾರೆ. ಜೈಲರ್ ಸಿನಿಮಾದಲ್ಲಿ (Share screen with Rajanikanth at Jailor Movie) ರಜನಿಕಾಂತ್ ಅವರೊಂದಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದ ಶಿವಣ್ಣನ ಕ್ರೇಜ್ ಗೆ ಪರಭಾಷಿಕರು ಸೋತು ಹೋಗಿದ್ದರು.

ಇದಾದ ಬೆನ್ನಲೇ ಬ್ಯಾಕ್ ಟು ಬ್ಯಾಕ್ ಶಿವಣ್ಣನಿಗೆ ಬೇರೆ ಭಾಷೆಗಳಿಂದ ಆಫರ್ಗಳು ಬರಲು ಶುಭವಾಗಿದ್ದು ಈಗ ರಜನಿ ಅಳಿಯ ಧನುಷ್ ಸಿನಿಮಾದಲ್ಲೂ (Danush) ಕೂಡ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಅರುಣ್ ಮಥೇಶ್ವರ್ ನಿರ್ದೇಶನದ ಧನುಶ್ ನಾಯಕ ನಟರಾಗಿರುವ ಕ್ಯಾಪ್ಟನ್ ಮಿಲ್ಲರ್‌ ಸಿನಿಮಾದಲ್ಲಿ (Captain Miller) ಶಿವಣ್ಣನ ಕೂಡ ನಟಿಸಿದ್ದು ಈಗಾಗಲೇ ಇವರ ಈರಪ್ಪನು ಸಾಂಗ್ (Erappanu Song) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿನಿಮಾ ಪ್ರಚಾರ ಕಾರ್ಯ ಅದ್ದೂರಿಯಾಗಿ ಸಾಗುತ್ತಿದ್ದು ಇದೇ ಸಂಕ್ರಾಂತಿಗೆ (release on Pongal) ಸಿನಿಮಾ ತೆರೆ ಮೇಲೆ ಅಬ್ಬರಿಸಲಿದೆ. ಸಿನಿಮಾದಲ್ಲಿ ಧನುಷ್ ಗೆ ಸಹೋದರನಾಗಿ ಶಿವಣ್ಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈನ ನೆಹರು ಸ್ಟೇಡಿಯಂ ನಲ್ಲಿ ಬಹಳ ಅದ್ದೂರಿಯಾಗಿ ಪ್ರಿ ರಿಲೀಸ್ ಇವೆಂಟ್ (pre release Event) ಕೂಡ ನಡೆದಿದೆ. ಗೀತಾ ಶಿವರಾಜ್ ಕುಮಾರ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶಿವಣ್ಣ ಹಾಗೂ ಧನುಷ್ ಅವರು ಈರಪ್ಪನು ಹಾಡಿಗೆ ಹೆಜ್ಜೆ ಹಾಕಿದ್ದರೂ ಶಿವಣ್ಣನ ಎನರ್ಜಿಗೆ ಅಲ್ಲಿ ನೆರೆದಿದ್ದವರು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ನೋಡಿದವರು ಕೂಡ ವಿಝಲ್ ಹಾಕುತ್ತಿದ್ದಾರೆ. ಇದೇ ಕಾರ್ಯಕ್ರಮದ ವೇದಿಕೆ ಮೇಲೆ ಧನುಷ್ ಸಿನಿಮಾ ಬಗ್ಗೆ ಮಾತನಾಡಿ ಶಿವಣ್ಣನ ಸರಳತೆಯನ್ನು ಮೆಚ್ಚಿ ಕೊಂಡಾಡಿದ್ದಾರೆ, ಶಿವಣ್ಣ ಜೊತೆ ಕಳೆದ ದಿನಗಳ ಅನುಭವ ಹಂಚಿಕೊಂಡಿದ್ದಾರೆ.

ನಿಮ್ಮ ಮನಸ್ಸಿಗೆ ನಿಮ್ಮ ಪ್ರೀತಿಗೆ ನಿಮ್ಮ ಬೆಂಬಲಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಅಕ್ಕರೆಗೆ ನಾನು ಬಹಳ ದೊಡ್ಡ ಅಭಿಮಾನಿ. ನೀವು ವೇದಿಕೆ ಏರಿ ನಗುತ್ತಾ ಮಾಡುತ್ತಿದ್ದರೆ ನಾನು ನಿಮ್ಮನ್ನು ನೋಡಿ ಖುಷಿಪಡುತ್ತಿದ್ದೆ. ಸುಮ್ಮನೆ ವೇದಿಕೆಯಲ್ಲಿ ಮಾತನಾಡಬೇಕು ಎಂದು ಮಾತನಾಡುತ್ತಿಲ್ಲ ನೀವು ನಕ್ಕಾಗ ನಿಮ್ಮ ಮುಖದಲ್ಲಿ ನಿಮ್ಮ ತಂದೆ ಕಾಣುತ್ತಾರೆ ನಿಮ್ಮ ತಮ್ಮ ಕೂಡ ಕಾಣಿಸುತ್ತಾರೆ, ಮೂವರು ಸೇರಿ ನಗುವಂತೆ ನನಗೆ ಕಾಣಿಸಿತು ಎಂದಿದ್ದಾರೆ.

ಈ ಮಾತಿಗೆ ಇಡೀ ಆಡಿಟೋರಿಯಂ ಚಪ್ಪಾಳೆಯ ಸುರಿಮಳೆಗೈದಿದೆ. ಅಪ್ಪನ ಹೆಸರು ಉಳಿಸುವುದು ಅಂದರೆ ಹೇಗೆ ಎಂದು ನಿಮ್ಮನ್ನು ನೋಡಿ ಕಲಿಯಬೇಕು ಸರ್, ನನಗೂ ಮಕ್ಕಳಿದ್ದಾರೆ ನಿಮ್ಮನ್ನು ನೋಡಿ ಕಲಿಯುತ್ತಾರೆ ಎಂದುಕೊಂಡಿದ್ದೇನೆ. ನನ್ನ ಮಕ್ಕಳೊಟ್ಟಿಗೆ ನೀವು ಕ್ರಿಕೆಟ್ ಆಡಿದ್ದು, ನಾವು ಹೋಗಿ ಒಟ್ಟಿಗೆ ಊಟ ಮಾಡಿದ್ದು ಜೀವನಪೂರ್ತಿ ನೆನಪಿರುತ್ತದೆ.

ನನಗೆ ಮನೆ ಊಟ ಸಿಗುತ್ತಿಲ್ಲ ಎಂದಾಗ ಹೆಚ್ಚೇನು ಸೌಕರ್ಯವಿಲ್ಲದ ಆ ರೂಮ್‌ನಲ್ಲಿ ಸಡನ್ ಆಗಿ ಒಂದು ಕಿಚನ್ ರೆಡಿ ಮಾಡಿ ಗೀತಾ ಮೇಡಂ, ಅಡುಗೆ ಮಾಡಿ ಹಾಕಿದ್ದಾರೆ ನಾನು ಅದನ್ನು ಎಂದಿಗೂ ನಿಮಗೆ ಧನ್ಯವಾದ ಎಂದು ಶಿವಣ್ಣನ ಬಗ್ಗೆ ನೋಡಿದಿದ್ದಾರೆ ಧನುಷ್ ಕ್ಯಾಪ್ಟನ್ ಮಿಲ್ಲರ್ ಸ್ವತಂತ್ರ ಪೂರ್ವದ ಕಥಹಾಂದರ ಹೊಂದಿದ್ದು ಹಳ್ಳಿ ಸೊಗಡಿನ ಕಥೆಯಾಗಿದೆ.

ಜೈಲರ್ ನರಸಿಂಹ ಪಾತ್ರಕ್ಕಿಂತ ಈ ಪಾತ್ರಕ್ಕೆ ಜನರು ಇನ್ನೂ ಹೆಚ್ಚು ಹತ್ತಿರವಾಗುತ್ತದೆ ಎನ್ನುವ ಭವಿಷ್ಯವನ್ನು ಸಿನಿಮಾ ತಂಡ ಹೇಳುತ್ತಿದೆ. ಸಿನಿಮಾ ಕನ್ನಡ ತೆಲುಗು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಚಿತ್ರವಲ್ಲದೆ ಇನ್ನು ಎರಡು ತಮಿಳು ಚಿತ್ರಗಳಿಗೆ ಶಿವಣ್ಣ ಸಹಿ ಮಾಡಿದ್ದಾರೆ ಈಗಾಗಲೇ ಅದರ ಒಂದು ಅರ್ಧಭಾಗ ಚಡ್ಡಿಗಳು ಮುಗಿಸಿದೆ ಎನ್ನುವ ಸುದ್ದಿಯು ಇದೆ.

cinema news

Post navigation

Previous Post: ನಟ ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!
Next Post: ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme