Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರಾ.? ಕೀರ್ತಿ ಕೊಟ್ಟ ಸ್ಪಷ್ಟನೇ ಇದು.!

Posted on January 6, 2024 By Admin No Comments on ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರಾ.? ಕೀರ್ತಿ ಕೊಟ್ಟ ಸ್ಪಷ್ಟನೇ ಇದು.!

 

ನಟ ದುನಿಯಾ ವಿಜಯ್ (Hero Duniya Vijay) ಸ್ಯಾಂಡಲ್ ವುಡ್ ಸಮಾಚಾರಗಳಿಂದ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದಲೂ ಕೂಡ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಈಗಾಗಲೇ ಮೊದಲ ಪತ್ನಿ ಹಾಗೂ ಮಕ್ಕಳ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮಾಧ್ಯಮಗಳಿಗೆ ಆಹಾರವಾಗಿದ್ದ ವಿಜಿ ಕುಟುಂಬ ಮತ್ತೆ ಇದೇ ರೀತಿಯ ಅನುಮಾನಕ್ಕೆ ಆಸ್ಪದ ಕೊಟ್ಟಿದೆ.

ಈ ಬಾರಿ ಎರಡನೇ ಪತ್ನಿಯ ಜೊತೆಗೂ ಕೂಡ ನಟ ದುನಿಯಾ ವಿಜಯ್ ಸಂಬಂಧ ಹಳಸಿದೆಯಾ ಎನ್ನುವಷ್ಟರ ಮಟ್ಟಿಗೆ ಅನುಮಾನ ಮೂಡುವಂತೆ ಬಿಂಬಿತವಾಗಿದ್ದು ನೇರವಾಗಿ ನೆಟ್ಟಿಗರೊಬ್ಬರು ವಿಜಯ್ ಪತ್ನಿ ಕೀರ್ತಿ ಪಠಾಡಿಯವರಿಗೆ (Vijay wife Keerthi) ಈ ಪ್ರಶ್ನೆ ಕೇಳಿಯೇ ಬಿಟ್ಟಿದ್ದಾರೆ ಮತ್ತು ಮೊದಲ ಬಾರಿಗೆ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿದ್ದಾರೆ ಕೀರ್ತಿ.

ಸಾಹಸ ನಿರ್ದೇಶಕ, ನಟನಾಗಿದ್ದ ದುನಿಯಾ ವಿಜಯ್ ರವರು ನಿರ್ಮಾಪಕನಾಗಿ ಕೂಡ ಸಿನಿಮಾ ಇಂಡಸ್ಟ್ರಿಯಲ್ ಬ್ಯುಸಿಯಾಗಿ ಬಿಟ್ಟಿದ್ದಾರೆ. ದುನಿಯಾ ವಿಜಯ ಬಹು ನಿರೀಕ್ಷಿತ ಚಿತ್ರ ಭೀಮ (Bheema Movie) ಭರ್ಜರಿಯಾಗಿ ತಯಾರಾಗುತ್ತಿದೆ. ಇದರ ನಡುವೆಯೇ ವಿಜಯ್ ಹಾಗೂ ಎರಡನೇ ಪತ್ನಿ ಕೀರ್ತಿ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಗುಸು ಗುಸು ಕೂಡ ಆರಂಭವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಮೊದಲಿಂದಲೂ ಆಕ್ಟಿವ್ ಆಗಿರುವ ಕೀರ್ತಿ ಪತಿ ಹಾಗೂ ಮಗುವಿನೊಂದಿಗೆ ಸುಂದರ ಕ್ಷಣಗಳ ಫೋಟೋ ಹಂಚಿಕೊಳ್ಳುತ್ತಿದ್ದರು ಆದರೆ ಈಗ ಕೀರ್ತಿಯವರು ಬಹಳ ದಿನಗಳಾದರು ವಿಜಯ್ ಅವರ ಜೊತೆ ಒಂದು ಕೂಡ ಫೋಟೋ ಹಂಚಿಕೊಂಡಿಲ್ಲ. ಅಲ್ಲದೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೆಸರು ಕೂಡ ಬದಲಾಯಿಸಿದ್ದಾರೆ.

ಕೀರ್ತಿ ವಿಜಯ್ ಅಫೀಶಿಯಲ್ ಎಂದು ಇದ್ದ ಖಾತೆಗೆ ಬದಲಾಗಿ ಈಗ ಕೀರ್ತಿ ಪಠಾಡಿ ಎಂಬ ಖಾತೆಯಲ್ಲಿ ಅಪ್‌ಡೇಟ್ ಹಂಚಿಕೊಳ್ಳುತ್ತಾರೆ ಹಾಗೆಯೇ ದುನಿಯಾ ವಿಜಯ್ ಅವರೊಂದಿಗಿನ ಯಾವುದೇ ಒಂದೇ ಒಂದು ಫೋಟೋ ಕೂಡ ಇಲ್ಲದಂತೆ ನೋಡಿಕೊಂಡಿದ್ದಾರೆ. ಇದು ಎಲ್ಲರ ಅನುಮಾನಕ್ಕೂ ಪುಷ್ಠಿ ನೀಡುತ್ತಿದೆ. ಸಾಲದಕ್ಕೆ ಮೊದಲಿನಿಂದಲೂ ನಟ ವಿಜಯ್ ಅವರ ಎಲ್ಲಾ ಸಿನಿಮಾ ಕಾರ್ಯಕ್ರಮಗಳು, ಶೂಟಿಂಗ್ ಸ್ಪಾಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಇತ್ತೀಚೆಗೆ ಎಲ್ಲೂ ಕಾಣಿಸುತ್ತಿಲ್ಲ.

View this post on Instagram

A post shared by Bhavya B N (@kirthigowdaa)

ವಿಜಯ್ ಅವರೇ ಪತ್ನಿ ತಮ್ಮ ಸ್ಟ್ರೆಂಥ್ ಎಂದು ಹಾಡಿ ಹೊಗಳುತ್ತಿದ್ದರು. ಆದರೆ ಅವರ ಭೀಮಾ ಸಿನಿಮಾ ಪ್ರಚಾರದಲ್ಲಿಯೂ ಕೀರ್ತಿ ಕಾಣಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ ಅವರ ರೀಲ್ಸ್, ಫೋಟೋ ಅಪ್ಡೇಟ್ ಗಳಿಗೆ ಬರುವ ಕಾಮೆಂಟ್ ಅವರ ಫೋಟೋಗಳಿಗೆ ಬರುವ ಕಾಮೆಂಟ್‌ಗಳಲ್ಲಿ ಹೆಚ್ಚಿನವು ಅಣ್ಣನ ಜೊತೆಗೆ ಒಂದು ಫೋಟೋ ಶೇರ್ ಮಾಡಿ ಅತ್ತಿಗೆ ಎಂದೇ ಇರುತ್ತದೆ.

ಯಾವುದಕ್ಕೂ ಉತ್ತರ ಇಲ್ಲದೆ ಇರುವುದು ಇಬ್ಬರು ಒಟ್ಟಿಗೆ ಇಲ್ಲ ಎನ್ನುವ ಗುಮಾನಿ ಹಬ್ಬಿಸಿತ್ತು. ಈಗ ಕೀರ್ತಿಯವರು ಸೋನಿ ಸದಾಶಿವ ಎಂಬ ಅಭಿಮಾನಿಯೊಬ್ಬರು ನೀವು ದುನಿಯಾ ವಿಜಯ್ ಸರ್ ಜೊತೆಗಿದ್ದೀರಾ? ಅವರ ಜೊತೆಗಿನ ನಿಮ್ಮ ಫೋಟೋ ನೋಡಿಲ್ಲ ಮೇಡಂ ಎಂಬ ಪ್ರಶ್ನೆಯ ಕಮೆಂಟ್ ಗೆ ಕೀರ್ತಿ Always and Forever (ಯಾವಾಗಲೂ ಮತ್ತು ಎಂದೆಂದಿಗೂ) ನಾವು ಇಬ್ಬರಲ್ಲ ಒಬ್ಬರೇ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬಾಸ್ ಜೊತೆಗಿನ ಪೋಟೋ ಹಂಚಿಕೊಳ್ಳಿ ಎಂಬ ಎಲ್ಲಾ ಕಾಮೆಂಟ್‌ಗಳಿಗೂ. ನಮ್ಮ ಮೇಲಿನ ಪ್ರೀತಿಗೆ ಧನ್ಯವಾದಗಳು. ನಾನು ಕೂಡ ಆದಷ್ಟು ಬೇಗ ಫೋಟೋ ಅಪ್ಲೋಡ್ ಮಾಡುತ್ತೇನೆ, ಸದ್ಯಕೆ ನಾನು ನನ್ನ ಸಂಗೀತದ ಪ್ರಯಾಣದ ಬಗ್ಗೆ ಅಪ್‌ಡೇಟ್ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಸದ್ಯಕ್ಕಿಗ ಕೀರ್ತಿ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಿಂದ ಹೊರಗುಳಿದು ಸಂಗೀತಾಭ್ಯಾಸದ ಕಡೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

cinema news

Post navigation

Previous Post: ಐದಾರು ವರ್ಷದಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ಆದ್ರೆ ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ.! ವಿವಾದಾತ್ಮಕ ಹೇಳಿಕೆ ನೀಡಿದ್ರಾ ನಟ ಶಿವಣ್ಣ.?
Next Post: ನಟ ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme