ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Raj Kumar) ಎಂದರೆ ಮನೆ ಮಂದಿಗೆಲ್ಲ ಬಹಳ ಇಷ್ಟ. ಮಕ್ಕಳಿಗೆ ಪ್ರೀತಿಯ ಅಪ್ಪು, ಯುವಕರಿಗೆ ಯೂತ್ ಐಕಾನ್ ಮತ್ತು ವೃದ್ಧರಿಗೆ ಮನೆ ಮಗನಂತೆ ಕಾಣಿಸಿಕೊಳ್ಳುತ್ತಿದ್ದರು. ಪುನೀತ್ ಅವರ ಡ್ಯಾನ್ಸ್ ಫೈಟ್ ಮಕ್ಕಳಿಗೆ ಇಷ್ಟವಾದರೆ ಅವರು ಆರಿಸಿಕೊಳ್ಳುತ್ತಿದ್ದ ಕಥೆಗಳು ಮನೆಮಂದಿಯೆಲ್ಲಾ ಕುಳಿತು ನೋಡುವಂತೆ ಇರುತ್ತಿತ್ತು.
ಜೊತೆಗೆ ಅಪ್ಪು ಚಿಕ್ಕ ವಯಸ್ಸಿನಿಂದಲೂ ಕೂಡ ಸಿನಿಮಾಗಳಲ್ಲಿ ಪಾತ್ರ ಮಾಡುತ್ತಾ ಬಂದ ಕಾರಣ ಈಗಲೂ ಕೂಡ ಕರ್ನಾಟಕದ ಜನತೆಗೆ ತಮ್ಮ ಮನೆಯ ಸದಸ್ಯನೆನಿಸಿದ್ದಾರೆ. ಹಾಗೆ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಎಷ್ಟು ಎತ್ತರಕ್ಕೆ ಬೆಳೆದಿದ್ದರೂ ತನ್ನ ಅಭಿಮಾನಿಗಳ ಎದುರು ವಿನಮ್ರವಾಗಿ ನಡೆದುಕೊಳ್ಳುತ್ತಿದ್ದ ಕಾರಣಕ್ಕಾಗಿ ಫ್ಯಾನ್ಸ್ ಗಳಿಗೆ ಅಚ್ಚುಮೆಚ್ಚಾಗಿದ್ದಾರೆ.
ಈಗ ಅವರ ಅಗಲಿಕೆ ನಂತರ ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Punith) ಅವರು ಅಪ್ಪು ಅವರು ಹೊಸ ಪ್ರತಿಭೆಗಳನ್ನು ಬೆಳೆಸುವ ಕಾರಣಕ್ಕಾಗಿ ಆರಂಭಿಸಿದ ಪಿಆರ್ಕೆ ಪ್ರೊಡಕ್ಷನ್ (PRK productions ) ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಜೊತೆಗೆ ಅಪ್ಪು ಇದ್ದಾಗ ನೋಡಿಕೊಳ್ಳುತ್ತಿದ್ದ ಶಕ್ತಿ ಧಾಮವನ್ನು ಕೂಡ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೀಗೆ ಅಪ್ಪು ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಭಾಗಿಯಾಗಿ ಅಪ್ಪು ಅಭಿಮಾನಿಗಳಿಗೆ ಅವರಿಲ್ಲದ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತಿದ್ದಾರೆ. ಅಪ್ಪು ಇಹಲೋಕ ತ್ಯಜಿಸಿ ಎರಡು ವರ್ಷಗಳಾಗಿದ್ದರು ಇನ್ನು ಸಹ ಅವರನ್ನು ಸಂಪೂರ್ಣವಾಗಿ ಕನ್ನಡದ ಜನತೆ ಮರೆತಿಲ್ಲ ಮತ್ತು ಮರೆಯಲು ಕೂಡ ಸಾಧ್ಯವಾಗುವುದಿಲ್ಲ.
ಇನ್ನೆಷ್ಟೇ ವರ್ಷಗಳು ಕಳೆದರು ಕೂಡ ಕನ್ನಡ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಅಪ್ಪು ಹೆಸರು ಅಜರಾಮರ ಮತ್ತು ಜನರ ಮನಸ್ಸಿನಲ್ಲಿಯೂ ಕೂಡ. ಪುನೀತ್ ರಾಜಕುಮಾರ್ ಅವರು ತಮ್ಮ ಅಭಿಮಾನಿಗಳು ಯಾರೆ ಮನೆ ಬಾಗಿಲಿಗೆ ಬಂದರು ಪ್ರೀತಿಯಿಂದ ಆಧರಿಸುತ್ತಿದ್ದರು. ಹಾಗೆಯೇ ತಮ್ಮ ಕುಟುಂಬದ ಕಾರ್ಯಗಳಿಗೆ ಆಹ್ವಾನಿಸಿದವರಿಗೆ ತಪ್ಪದೆ ಪತ್ನಿಯ ಜೊತೆ ಹೋಗಿ ಉಡುಗೊರೆ ಕೊಟ್ಟು ಆಶೀರ್ವದಿಸಿ ಬರುತ್ತಿದ್ದರು.
ಈಗ ಅದೇ ಹಾದಿಯಾಗಿ ಅಶ್ವಿನಿ ಪುನೀತ್ ಅವರು ಕೂಡ ನಡೆದುಕೊಳ್ಳುತ್ತಿದ್ದಾರೆ. ಅಪ್ಪು ಅವರು ಅಗಲಿದ ನಂತರ ದಂಪತಿಗಳು ತಮ್ಮ ಮಗುವಿಗೆ ಅಶ್ವಿನಿ ಪುನೀತ್ ಅವರಿಂದ ನಾಮಕರಣ ಮಾಡಿಸಬೇಕು ಎಂದು ಬಯಸಿದ್ದರು, ಹಾಗೆ ದಂಪತಿಗಳ ಇಚ್ಛೆಯನ್ನು ಅಶ್ವಿನಿ ನೆರವೇರಿಸಿದ್ದರು. ಕಳೆದ ತಿಂಗಳು ಕೂಡ ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಗೆ ವಿಶೇಷ ಚೇತನ ರೈತನೊಬ್ಬ ತನ್ನ ಜಮೀನಿನಲ್ಲಿ ಭತ್ತದ ಪೈರಿನಲ್ಲಿ ಅಪ್ಪುವಿನ ಭಾವಚಿತ್ರ ಮೂಡಿಸಿದರು.
ಆಗಲು ಕೂಡ ಮನೆಗೆ ಕರೆಸಿ ಅವರಿಗೆ ಧನ್ಯವಾದಗಳನ್ನು ಹೇಳಿದ್ದ ಅಶ್ವಿನಿ ಅವರು ಈಗ ಅಪ್ಪುವಿನ ಪುಟ್ಟ ಅಭಿಮಾನಿಯನ್ನು ಮನೆಗೆ ಬರಮಾಡಿಕೊಂಡು ಮಗುವಿನ ಆಸೆ ನೆರವೇರಿಸಿದ್ದಾರೆ. ಐದು ವರ್ಷದ ಹರ್ಷ (Harsha ) ಎನ್ನುವ ಬಾಲಕನಿಗೆ ಬ್ಲಡ್ ಕ್ಯಾನ್ಸರ್ (blood Cancer) ಇದ್ದು ಸಾವು ಬದುಕಿಯೊಂದಿಗೆ ಹೋರಾಡುತ್ತಿದೆ. ತಂದೆ ಬೆಂಗಳೂರಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು ತಾಯಿ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದಾರೆ.
ಮಗುವಿನ ಆರೋಗ್ಯ ಹಾಳಾಗಿದ್ದು ವೈದ್ಯರು ಬದುಕುವ ಸಾಧ್ಯತೆ ಕಡಿಮೆ ಕೊನೆ ಆಸೆ ನೆರವೇರಿಸಿ ಎಂದಿದ್ದರು. ಅಪ್ಪು ಮನೆಗೆ ಹೋಗಬೇಕು ಎನ್ನುವುದೇ ಹರ್ಷ ಆಸೆ ಆಗಿದ್ದರಿಂದ ಇದನ್ನು ಅಶ್ವಿನಿಯವರಿಗೆ ತಿಳಿಸಿದ ದಂಪತಿಗಳು ಮಗುವಿನ ಮೆಡಿಕಲ್ ರಿಪೋರ್ಟ್ ಹಾಗೂ ಫೋಟೋ ಕಳುಹಿಸಿದ್ದರು.
ನವೆಂಬರ್ 6ರಂದು ಹರ್ಷನ ಮನೆಗೆ ಕಾರ್ ಕಳುಹಿಸಿ ತಮ್ಮ ಸದಾಶಿವನಗರ ನಿವಾಸಕ್ಕೆ (Invite to Sadashivanagar house) ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಮನೆಗೆ ಬಂದ ಹರ್ಷನ್ನು ಪ್ರೀತಿಯಿಂದ ನೋಡಿಕೊಂಡು ತಂದೆ ತಾಯಿಗೆ ಧೈರ್ಯ ಹೇಳಿದ್ದಾರೆ.