ನಟ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಖಾಸಗಿ ಯೂಟ್ಯೂಬ್ ವಾಹಿನಿಯ ವಿಶೇಷ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ತಮ್ಮ ಮುಂದಿನ ಚಿತ್ರ ಬ್ಯಾಡ್ ಮ್ಯಾನರ್ಸ್ (Bad Manner Movie) ಬಗ್ಗೆ ಹಲವು ಅಪ್ಡೇಡ್ ಗಳನ್ನು ಹಂಚಿಕೊಂಡ ಅವರು ನಂತರ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಬಿಗ್ ಬಾಸ್ ಕಾರ್ಯಕ್ರಮ ಸೇರಿ ಇಂಡಸ್ಟ್ರಿ ಅನೇಕ ವಿಚಾರಗಳ ಕುರಿತು ಮಾತನಾಡಿದರು.
ಹೀಗೆ ಮಾತಿನ ಮಧ್ಯೆ ಡಿ ಬಾಸ್ ಅವರ ಅತ್ಯಂತ ಆಪ್ತ ಬಳಗದಲ್ಲಿರುವ ಅವರ ತಮ್ಮ ಎಂದೇ ಕರೆಸಿಕೊಂಡಿರುವ ಅಭಿಷೇಕ್ ಅಂಬರೀಶ್ ಅವರ ಬಳಿ ನಿರೂಪಕರು ಸದ್ಯಕ್ಕೆ ದರ್ಶನ್ ಹಾಗೂ ಧ್ರುವ ಸರ್ಜಾ (Darshan and Drugs Sarja) ಅವರ ನಡುವೆ ಏರ್ಪಟ್ಟಿರುವ ಕಾಂಟ್ರವರ್ಸಿ ಬಗ್ಗೆ ಕೂಡ ಪ್ರಶ್ನೆ ಮಾಡಿದರು.
ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ನಡೆದಾಗ ಕರ್ನಾಟಕ ಚಲನಚಿತ್ರ ಮಂಡಳಿ ವತಿಯಿಂದ ಪ್ರತಿಭಟನೆ ನಡೆಸಿದ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಧ್ರುವ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಬಳಿಕ ಧ್ರುವ ಸರ್ಜಾ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಮಾಧ್ಯಮದೆದುರು ಸ್ಪಷ್ಟವಾಗಿ ಹೇಳಿಬಿಟ್ಟರು.
ನನಗೆ ದರ್ಶನ್ ಅವರಿಗೆ ಕೇಳುವುದಕ್ಕೆ ಮೂರು ಪ್ರಶ್ನೆಗಳಿಗೆ ಅವುಗಳಿಗೆ ಉತ್ತರ ಸಿಕ್ಕ ಬಳಿಕ ಅಷ್ಟೇ ನಾನು ಕ್ಲಿಯರ್ ಆಗುತ್ತೇನೆ. ಇಲ್ಲವಾದಲ್ಲಿ ಮನಸಿನಲ್ಲಿ ಒಂದು ಇಟ್ಟುಕೊಂಡು ಹೊರಗಡೆ ನಗುತ್ತಾ ಇರುವುದಕ್ಕೆ ಬರುವುದಿಲ್ಲ. ಹಾಗಾಗಿ ನಾನು ಹಾಗೆ ನಡೆದುಕೊಂಡೆ ಎಂದು ಹೇಳಿದ್ದಾರೆ. ಈಗ ಆ ಪ್ರಶ್ನೆಗಳು ಏನಿರಬಹುದು ಎಂದು ಇಡೀ ಕರ್ನಾಟಕಕ್ಕೆ ಕುತೂಹಲ ಏರ್ಪಟ್ಟಿದೆ.
ಇದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಪ್ರಶ್ನಿಸಿ ಈ ರೀತಿ ಧ್ರುವ ಸರ್ಜಾ ಹೇಳಿದ್ದಾರೆ. ಅಂಬರೀಶ್ ಅವರು ಇರುವವರೆಗೂ ಯಾವ ಕಲಾವಿದರ ನಡುವೆ ಈ ರೀತಿ ಮನಸ್ತಾಪ ವಾದರೂ ಮಧ್ಯಸ್ಥಿಕೆ ವಹಿಸುತ್ತಿದ್ದರು ಈ ವಿಚಾರದ ಬಗ್ಗೆ ನೀವೇನಾದರೂ ಕ್ರಮ ಕೈಗೊಂಡಿದ್ದೀರಾ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಅಭಿಷೇಕ ಅಂಬರೀಶ್ ಅವರು ನಾನು ಎಲ್ಲರಿಗಿಂತ ಕಿರಿಯವನು ಮತ್ತು ಎಲ್ಲರಿಗೂ ಬೇಕಾದವನು. ಇಬ್ಬರಿಗೂ ತುಂಬಾ ಹತ್ತಿರದವನು. ನಾವೆಲ್ಲಾ ಒಂದೇ ಇಂಡಸ್ಟ್ರಿ ಎಂದರೆ ಒಂದೇ ಕುಟುಂಬ. ನಮ್ಮ ಹಿರಿಯರು ನಮಗೆ ಹೊಡೆದದ್ದು ಇದೆ, ಮನೆಯಲ್ಲಿ ಅಣ್ಣ ತಮ್ಮನ ನಡುವೆ ಜಗಳ ಇದ್ದಿದ್ದೆ ಆದರೆ ಯಾವಾಗ ಇದರ ಮಧ್ಯೆ ಕ್ಯಾಮೆರಾಗಳು ಬರುತ್ತದೆ ಆಗ ಮಾತ್ರ ಸಮಸ್ಯೆ ಆಗುವುದು.
ಇಲ್ಲಿಯವರೆಗೂ ನನಗೆ ಈ ವಿಷಯ ಗೊತ್ತಿರಲಿಲ್ಲ. ಈಗ ಅದು ನಿಜವೋ ಅಥವಾ ನೀವೇ ಸೃಷ್ಟಿಸಿ ಹೇಳುತ್ತಿದ್ದೀರಾ ಎನ್ನುವ ಅನುಮಾನ ಇದೆ. ಯಾಕೆಂದರೆ ದರ್ಶನ್ ಅವರು ಈ ವಿಚಾರದ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ಒಂದು ವೇಳೆ ಹೀಗೆ ಆಗಿದ್ದರು ಕೂಡ ಅವರಿಬ್ಬರೇ ಮಾತನಾಡಿ ಕ್ಲಿಯರ್ ಮಾಡಿಕೊಳ್ಳುತ್ತಾರೆ. ಅವರ ಪಾಡಿಗೆ ಅವರನ್ನು ಬಿಟ್ಟರೆ ಸಮಸ್ಯೆ ಕ್ಲಿಯರ್ ಆಗುತ್ತದೆ.
ದಯವಿಟ್ಟು ಅವರಿಬ್ಬರ ಮಧ್ಯ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪರ ವಿರೋಧ ಚರ್ಚೆ ಮಾಡುವುದು, ಪರಸ್ಪರ ಕಿತ್ತಾಡಿಕೊಳ್ಳುವುದು ಈ ರೀತಿ ಮಾಡಿದಾಗ ಅದು ದೊಡ್ಡದಾಗುತ್ತದೆ ಮತ್ತು ಮೊದಲಾಗಿ ಯೌಟ್ಯೂಬ್ ಚಾನೆಲ್ ನಿಮಗೆ ಏನು ಉಪಯೋಗ ಇದೆ ಗೊತ್ತಿಲ್ಲ ಆದರೆ ಈ ಪ್ರಶ್ನೆಗಳನ್ನು ಮಾಡಬೇಡಿ. ಮನೆ ವಿಚಾರ ಮನೆಯಲ್ಲಿ ಇದ್ದರೆ ಚೆನ್ನಾಗಿರುತ್ತೆ ಬೀದಿರಂಪ ಮಾಡಿ ನಾಲ್ಕು ಜನ ಪ್ರಶ್ನೆ ಕೇಳುವ ರೀತಿ ಮಾಡಿಕೊಳ್ಳಬಾರದು ಎನ್ನುವದಷ್ಟೇ ನನ್ನ ಅಭಿಪ್ರಾಯ ಎಂದು ಅಂಬಿಯಂತೆ ರೆಬಲ್ ಆಗಿ ಉತ್ತರ ಕೊಟ್ಟಿದ್ದಾರೆ.