ಸದ್ಯ ಬಿಗ್ ಬಾಸ್ ವಿನಯ್ ಗೌಡ ಆಗಿರುವ ಸೀಸನ್ 10ರ ಕಂಟೆಸ್ಟೆಂಟ್ ವಿನಯ್ ಗೌಡ ಅವರು ಇಡೀ ಕರ್ನಾಟಕಕ್ಕೆ ಮಹಾದೇವನಾಗಿ ಪರಿಚಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪೌರಾಣಿಕ ಧಾರಾವಾಹಿ ಹರ ಹರ ಮಹಾದೇವದಲ್ಲಿ ಪರಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಅವರು ಅಕ್ಷರಶಃ ಆ ಪಾತ್ರಕ್ಕೆ ನ್ಯಾಯ ದಕ್ಕಿಸಿದ್ದರು.
ಇದೇ ಕಾರಣಕ್ಕಾಗಿ ಇಂದು ಅನೇಕರ ಬಾಯಲ್ಲಿ ಇವರ ಹೆಸರು ಹೇಳುವ ಮುನ್ನ ಇವರು ಮಹದೇವ ಎನ್ನುವ ಹೆಸರು ಬರುತ್ತದೆ. ಅಷ್ಟರಮಟ್ಟಿಗೆ ಆ ಪಾತ್ರಕ್ಕೆ ಹೇಳಿಮಾಡಿಸಿದದಂತಿದ್ದರು. ಮುಖದಲ್ಲಿನ ಆ ಶಾಂತಿ ಶಿವನಪಾತ್ರಕ್ಕೆ ಮೆರಗು, ಕೆರಳಿದಾಗ ಮೂರನೇ ಕಣ್ಣನ್ನು ತೆರೆಯುವ ಉಗ್ರ ಅವತಾರ, ಶಿವನೆಂದರೆ ನೆನಪಾಗುವ ಎತ್ತರ ಹಾಗೂ ದೇಹದಾಢ್ಯತೆ ಹಾಗೂ ಅಷ್ಟೇ ಅಚ್ಚುಕಟ್ಟಾದ ಡೈಲಾಗ್ ಡೆಲಿವರಿ ಈ ಎಲ್ಲಾ ಕಾರಣದಿಂದ ಸಾಕ್ಷಾತ್ ಶಿವನೆನಿಸಿದ್ದರು ವಿನಯ್.
ಅವರಿಗೆ ಶಿವನಾಗುವ ಅವಕಾಶ ಇದೇ ವಾಹಿನಿಯಿಂದ ಮತ್ತೊಮ್ಮೆ ಒಲಿದು ಬಂತು. ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರವಾಹಿಯಲ್ಲೂ ಕೂಡ ಈ ನೆಲದ ಕಥೆಯಲ್ಲೂ ನಮ್ಮ ಜನಪದ ಶಿವನಾದರು. ಈ ಸಂದರ್ಭದಲ್ಲಿ ನಡೆದ ಸಂದರ್ಶನ ಒಂದರಲ್ಲಿ ಮೊದಲ ಬಾರಿಗೆ ಅವರಿಗೆ ಶಿವನ ಪಾತ್ರ ಸಿಕ್ಕಿದ್ದ ಬಗ್ಗೆ ಅನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳ ಬಗ್ಗೆ ವಿನಯ್ ಗೌಡ ಹೇಳಿಕೊಂಡಿದ್ದಾರೆ.
ಹರಹರ ಮಹಾದೇವ ಧಾರವಾಹಿಗಳಲ್ಲಿ ನಟಿಸುವ ಹಿಂದಿನ ಧಾರವಾಹಿಯಲ್ಲಿ ನೆಗೆಟಿವ್ ರೋಲ್ ಗಾಗಿ ಗಡ್ಡ ಕೂದಲು ಬಿಟ್ಟು ರೆಡಿಯಾಗಿದ್ದೆ, ಈ ರೀತಿ ಶಿವನ ಪಾತ್ರ ಇದೆ ಬನ್ನಿ ಎಂದು ಕರೆ ಮಾಡಿದ್ದರು. ಲುಕ್ ಟೆಸ್ಟ್ ಗೆ ಹೋದಾಗ ಹಾಗೆ ಸೆಲೆಕ್ಟ್ ಮಾಡಿಬಿಟ್ಟರು. ಮುಂಬೈಗೆ ಶೂಟಿಂಗ್ ಹೋಗಬೇಕಿತ್ತು ಹೋಗುವ ಹಿಂದಿನ ದಿನದವರೆಗೂ ಕೂಡ ನಾನು ಶಿವನ ಪಾತ್ರಕ್ಕೆ ಒಪ್ಪುತ್ತೇನಾ? ಜನರು ಒಪ್ಪುತ್ತಾರಾ? ಕನ್ನಡದಲ್ಲಿ ಘಟಾನುಘಟಿಗಳು ಮಾಡಿರುವ ಪಾತ್ರ ಅದು ನನ್ನಿಂದ ಹೇಗೆ ? ಈ ರೀತಿ ಹತ್ತಾರು ಪ್ರಶ್ನೆ ಕಾಡಿತ್ತು.
ನನ್ನ ಹೆಂಡತಿ ಪ್ರತಿದಿನ ಶಿವನನ್ನ ನೆನೆದು ಧ್ಯಾನ ಮಾಡು ಎಂದು ಹೇಳಿದ್ದಳು. ಅದು ಹೇಗೆ ಬಂತು ಗೊತ್ತಿಲ್ಲ ಮೊದಲ ದಿನ ಡೈಲಾಗ್ ಹೇಳುವಾಗ ಮಾತ್ರ ಭಯ ಇತ್ತು ಆನಂತರ ಶಿವನ ಕೃಪೆಯಿಂದ ಸರಾಗವಾಗಿ ಮುಗಿಯಿತು, ಜನರು ಕೂಡ ಅಷ್ಟೇ ಚೆನ್ನಾಗಿ ಒಪ್ಪಿಕೊಂಡರು.
ಹಿಂದಿಯಲ್ಲಿ ಒಬ್ಬರು ಮಾಡುತ್ತಿದ್ದಾರೆ ಅವರನ್ನು ನೋಡಿ ಎಂದು ತಂಡದವರು ಹೇಳಿದ್ದರು ಆದರೆ ಕನ್ನಡ ಜನ ಕಾಪಿಯನ್ನು ಬಹಳ ಬೇಗ ಗುರುತಿಸುತ್ತಾರೆ ಹಾಗಾಗಿ ಇಲ್ಲಿನ ಜನರಿಗೆ ಒಪ್ಪುವ ಹಾಗೆ ಮತ್ತು ನಾನು ಒಬ್ಬ ಪ್ರೇಕ್ಷಕನಾಗಿರುವುದರಿಂದ ನನ್ನ ತಲೆಯಲ್ಲಿ ಚಿಕ್ಕವಯಸ್ಸಿನಿಂದ ಶಿವನ ಬಗ್ಗೆ ಏನಿತ್ತು ಅದನ್ನೆಲ್ಲ ಕಲ್ಪಿಸಿಕೊಂಡು ಅದಕ್ಕೆ ತಯಾರಾದೆ ಮತ್ತು ಈ ಪಾತ್ರ ಮಾಡುವಾಗ ಯಾರು ಕೂಡ ನನಗೆ ನಾನ್ ವೆಜ್ ಬಿಡಬೇಕು ಎಂದು ಹೇಳಿರಲಿಲ್ಲ.
ಆದರೆ ಪಾತ್ರ ಮಾಡುತ್ತ ಮಾಡುತ್ತ ನನಗೆ ನಾನ್ ವೆಜ್ ತಿನ್ನಬಾರದು ಎನಿಸಿ ಸೀರಿಯಲ್ ಮುಗಿಯವರೆಗೂ ಕೂಡ ಮುಟ್ಟಲೇ ಇಲ್ಲ. ಅಲ್ಲಿಯವರೆಗೂ ಕೂಡ ನಾನು ಬಸವನ ತರ ತಿರುಗುತ್ತಿದ್ದೆ. ಪಾರ್ಟಿ, ಫ್ರೆಂಡ್ಸ್ ಇಷ್ಟೇ ಗೊತ್ತಿತ್ತು. ಶಿವನ ಪಾತ್ರ ಒಪ್ಪುತ್ತಿದ್ದಂತೆ ನನಗೆ ಗೊತ್ತಿರದೇ ಜವಾಬ್ದಾರಿ ಬಂತು. ನಾನೇನಾದರೂ ಹೊರಗಡೆ ಕಿರಿಕ್ ಮಾಡಿಕೊಂಡರೆ ಎಫೆಕ್ಟ್ ಶಿವನ ಪಾತ್ರದ ಮೇಲೆ ಬೀಳುತ್ತದೆ ಹಾಗಾಗಿ ವ್ಯಕ್ತಿತ್ವವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನಿಸಿತು.
ವಯಸ್ಸಾದ ಅಜ್ಜಿಯೊಬ್ಬರು ನಡೆಯಲಾಗದಿದ್ದರೂ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಬಂದು ನಾನು ಶಿವ ಪುರಾಣ ಓದುವಾಗ ನಿನ್ನನ್ನೇ ನೆನೆಸಿಕೊಳ್ಳುತ್ತೇನೆ ಎಂದರು. ಈ ರೀತಿ ಅನೇಕ ಅಭಿಮಾನಿಗಳು ಧ್ಯಾನ ಮಾಡುವಾಗ ನಿಮ್ಮನ್ನು ನೆನೆಸಿಕೊಳ್ಳುತ್ತೇವೆ, ಶಿವ ಎಂದರೆ ನೀವು ನೆನಪಾಗುತ್ತೀರಾ ಎನ್ನುತ್ತಾರೆ.
ಇದೆಲ್ಲ ಶಿವನ ಪಾತ್ರ ನನ್ನ ಬದುಕನ್ನಲ್ಲಿ ತಂದ ಬದಲಾವಣೆ ಎಲ್ಲ ಶಿವನ ಅನುಗ್ರಹ ಈಗ ಮತ್ತೊಮ್ಮೆ ಅವಕಾಶ ಸಿಕ್ಕಾಗ ಈ ಸಲನೂ ಮಾಡಿದರೆ ಇನ್ನು ಮುಂದೆ ಶಿವನ ಪಾತ್ರಕ್ಕೆಲ್ಲಾ ನನ್ನನ್ನೇ ಕರೆಯುತ್ತಾರೆ ಎಂದೆನಿಸಿತು. ಆದರೂ ಶಿವನನ್ನು ಬಿಡಲು ಇಷ್ಟವಿಲ್ಲ ಹಾಗಾಗಿ ಇನ್ನು ಎಷ್ಟು ಬಾರಿ ಶಿವನ ಪಾತ್ರ ಬಂದರೂ ಒಪ್ಪುತ್ತೇನೆ ಎಂದಿದ್ದಾರೆ.