ಸೆಂಚುರಿ ಸ್ಟಾರ್ ಶಿವಣ್ಣ (Century star shivanna) ಎವರ್ಗೀನ್ ಹೀರೋ, 60ರ ಹರೆಯದಲ್ಲಿರುವ ಶಿವಣ್ಣ ಇನ್ನು ಸಹ 18 ರ ಯುವಕರು ಕೂಡ ನಾಚುವಂತೆ ಡ್ಯಾನ್ಸಿಂಗ್ ಫೈಟಿಂಗ್ ನಲ್ಲಿ ಹೈ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಾರೆ. ವಯಸ್ಸಾಗುತ್ತಿದ್ದಂತೆ ಇನ್ನಷ್ಟು ಯಂಗ್ ಆಗಿರೇ ಕಾಣುತ್ತಿರುವ ಶಿವಣ್ಣ, ಅಣ್ಣಾವ್ರು ಹೀರೋ ಆಗಿ ನಟಿಸುತ್ತಿದ್ದ ಕಾಲದಿಂದಲೂ ನಾಯಕನಟನಾಗಿ ಇಂಡಸ್ಟ್ರಿಯಲ್ಲಿದ್ದಾರೆ.
ಈಗಿನ ಜನರೇಶನ್ ಹೀರೋಗಳಿಗೂ ಕೂಡ ಟಕ್ಕರ್ ಕೊಡುವಂತೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುವ ಶಿವಣ್ಣ ಈಗ ಒರಿಜಿನಲ್ ಗ್ಯಾಂಗ್ಸ್ಟರ್ (Original gangster) ಆಗಿ ಕಾಣಿಸಿಕೊಂಡಿದ್ದಾರೆ. ಘೋಸ್ಟ್ ಸಿನಿಮಾದ (Ghost movie) ಹವಾ ಎಲ್ಲೆಡೆ ಹಬ್ಬಿದ್ದು ಅಭಿಮಾನಿಗಳೆಲ್ಲಾ ಘೋಸ್ಟ್ ಕ್ರೇಜಿನಲ್ಲಿ ಇದ್ದಾರೆ.
ಈ ಸಿನಿಮಾದ ಕಾಸ್ಟ್ಯೂಮ್ (Costume) ಕೂಡ ಸ್ವಲ್ಪ ವಿಭಿನ್ನವಾಗಿದೆ, ಸದಾಕಾಲ ಇದೇ ರೀತಿ ಚೇಂಜಸ್ ಗಳನ್ನು ಟ್ರೈ ಮಾಡುವ ಶಿವಣ್ಣ ರಿಯಲ್ ಲೈಫ್ ಅಲ್ಲಿ ಎಷ್ಟು ಕಾಸ್ಟ್ಲಿ ಬಟ್ಟೆಗಳನ್ನು ಧರಿಸುತ್ತಾರೆ ಎನ್ನುವುದರ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ ಎದುರಾಗಿದೆ. ಘೋಸ್ಟ್ ಸಿನಿಮಾದ ಪ್ರಯುಕ್ತ ನಿರ್ದೇಶಕ ಶ್ರೀನಿ ಜೊತೆ ಶಿವಣ್ಣ ಕೂಡ ವಾಹಿನಿ ಒಂದರಲ್ಲಿ ಸಂದರ್ಶನಕ್ಕೆ ಕುಳಿತಿದ್ದರು.
ಈ ಸಮಯದಲ್ಲಿ ಮಾತನಾಡುತ್ತಿದ್ದಂತೆ ಕಾಸ್ಟ್ಯೂಮ್ ವಿಷಯ ಬಂದಿದೆ. ಶಿವಣ್ಣನವರು ವಿ ನೆಕ್ ಟಿ ಷರ್ಟ್ ಧರಿಸಿದರೆ ಬಹಳ ಚೆನ್ನಾಗಿ ಸೂಟ್ ಆಗುತ್ತದೆ, ಆ ರೀತಿ ಎಲ್ಲರಿಗೂ ಸೂಟ್ ಆಗುವುದಿಲ್ಲ ಎಂದು ಹೇಳಿ ಶಿವಣ್ಣ ಧರಿಸುವ ಟೀ ಶರ್ಟ್ ಗಳ ಹಾಗೂ ಬಟ್ಟೆಗಳ ಬಗ್ಗೆ ನಿರೂಪಕಿ ವಿಚಾರಿಸುತ್ತಾರೆ ಮತ್ತು ಶಿವಣ್ಣನಿಗಾಗಿ ಯಾರು ಕಾಸ್ಟ್ಯೂಮ್ ಪರ್ಚೇಸ್ ಮಾಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೂಡ ಕೇಳುತ್ತಾರೆ.
ಅದರಲ್ಲಿ ಶಿವಣ್ಣ ಗಾಗಿ ತಾವು ತಮಗಾಗಿ ಖರೀದಿಸಿದ ಬಟ್ಟೆಯ ರೇಟ್ (Shivanna’s costliest costume) ಹೇಳಿದಾಗ ನಿರೂಪಕಿ ಒಂದು ಕ್ಷಣ ಶಾ’ಕ್ ಆಗಿಬಿಟ್ಟಿದ್ದಾರೆ. ಮೊದಲೆಲ್ಲಾ ಗೀತಾ ನನಗಾಗಿ ಬಟ್ಟೆಯನ್ನು ತರುತ್ತಿದ್ದಳು ಈಗ ನನ್ನ ಮಗಳು ಕೂಡ ಸೇರಿಕೊಂಡು ಬಿಟ್ಟಿದ್ದಾಳೆ ಹಾಗಾಗಿ ವಾರ್ಡೊರ್ಬ್ ಪೂರ್ತಿ ಬಟ್ಟೆ ಇರುತ್ತದೆ. ನಾನು ಹೊರಗಡೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಬಟ್ಟೆಯ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ.
ಯಾಕೆಂದರೆ, ನಾವು ಏನನ್ನಾದರೂ ಹೇಳಬೇಕು ಎಂದು ಹೊರಟಾಗ ಬಟ್ಟೆ ಹೈಲೈಟ್ ಆದರೆ ಅವರು ನಮ್ಮ ಮಾತಿಗಿಂತ ಕಾಸ್ಟ್ಯೂಮ್ ಬಗ್ಗೆ ಹೆಚ್ಚು ಗಮನಹರಿಸಿರುತ್ತಾರೆ. ಅದಕ್ಕಾಗಿ ನಾನು ಸಿಂಪಲ್ ಬಟ್ಟೆಗಳನ್ನು ಧರಿಸುತ್ತೇನೆ. ನನಗಾಗಿ ಈಗ ಬಟ್ಟೆ ಕಳುಹಿಸಿಕೊಡುವವರ ದಂಡೇ ಇದೆ. ನನ್ನ ವಾಕಿಂಗ್ ಫ್ರೆಂಡ್ಸ್ ಇಂದ ಹಿಡಿದು ಎಲ್ಲರೂ ಕೂಡ ಶಾಪಿಂಗ್ ಹೋದಾಗ ಇದು ನೋಡಿದೆ, ನಿಮಗೆ ಚೆನ್ನಾಗಿ ಕಾಣುತ್ತದೆ ಎಂದು ತಂದೆ ಎಂದು ಹೇಳಿ ತಂದು ಕೊಡುತ್ತಾರೆ. ಅವರಿಗೆ ಬೇಜಾರು ಮಾಡಲು ಇಷ್ಟ ಇಲ್ಲದೆ ತೆಗೆದುಕೊಳ್ಳುತ್ತೇನೆ.
ಫಾರಿನ್ ಗೆ ಹೋಗುವ ಪರಿಚಯಸ್ಥರು ಬರುವಾಗ ಅಲ್ಲಿಂದ ಕರೆ ಮಾಡಿ ಏನು ತರುವುದು ಎಂದು ಕೇಳುತ್ತಾರೆ ಆಗ ನಿಜವಾಗಿಯೂ ಬಹಳ ನಾಚಿಕೆಯಾಗುತ್ತದೆ ಚಿಕ್ಕ ಮಕ್ಕಳ ರೀತಿ ಕೇಳಬೇಕಲ್ಲ ಎಂದು ಆದರೆ ಹೇಳದಿದ್ದರೆ ಅವರು ಬೇಜಾರ್ ಮಾಡಿಕೊಳ್ಳುತ್ತಾರೆ ಎಂದು ಏನೋ ಒಂದು ಹೇಳುತ್ತೇನೆ ಕೆಲವೊಮ್ಮೆ ಬಟ್ಟೆ ಫೋಟೋ ಕಳಿಸಿ ಬಿಟ್ಟಿರುತ್ತಾರೆ ಅಷ್ಟು ಪ್ರೀತಿಯಿಂದ ತರುವಾಗ ಒಂದೇ ಸಲ ಬೇಡ ಎನ್ನುವುದಕ್ಕೆ ಮನಸ್ಸು ಬರುವುದಿಲ್ಲ ಆಗ ಒಪ್ಪಿಕೊಳ್ಳಲೇಬೇಕು.
ಹೀಗೆ ನನ್ನ ಬಳಿ ಸಾಕಷ್ಟು ಬಟ್ಟೆಗಳಿವೆ ಎಂದು ಹೇಳಿದ್ದಾರೆ ಮತ್ತು ನಿಮಗಾಗಿ ನೀವು ಖರೀದಿಸಿದ ಅತಿ ದುಬಾರಿ ಬಟ್ಟೆ ಬೆಲೆ ಎಷ್ಟು ಎಂದು ಕೇಳಿದಾಗ 70 ರಿಂದ 80 ಸಾವಿರದ ಬಟ್ಟೆ ಖರೀದಿಸಿದ್ದೇನೆ ಎಂದು ಹೇಳಿದ್ದಾರೆ.