ಬಿಗ್ ಬಾಸ್ (Bigboss ) ಮನೆಯಿಂದ ವರ್ತೂರು ಸಂತೋಷ್(Varthuru Santhosh) ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಕುರಿತು ಬಹಳ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ವರ್ತೂರು ಸಂತೋಷ್ ಅವರು ಹುಲಿ ಉಗುರು ಇರುವ ಪೆಂಡೆಂಟ್ (Pendent) ಧರಿಸಿದ್ದೇ ಅವರಿಗೆ ಮುಳುಬಾಗಿ ಈಗ ಬಿಗ್ ಬಾಸ್ ಮನೆಯಿಂದ ಅವರು ಕಾರಾಗೃಹ ಸೇರುವಂತಾಗಿದೆ ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಂತೋಷ್ ಪರ ನೆಟ್ಟಿಗರು ಬ್ಯಾಟ್ ಬೀಸುತ್ತಿದ್ದಾರೆ.
ಅವರೊಬ್ಬ ಹಳ್ಳಿಯ ಮುಗ್ಧ ರೈತ, ಅರಣಾಧಿಕಾರಿಗಳು ಅವರ ಮೇಲೆ ಪ್ರತಾಪ ತೋರಿಸುತ್ತಿದ್ದಾರೆ ಅವರೊಬ್ಬರೇ ನಿಮ್ಮ ಕಣ್ಣಿಗೆ ಬಿದ್ದಿದ್ದ, ನಾವು ಸಾಕಷ್ಟು ಸಲೆಬ್ರೆಟಿಗಳ ಉದಾಹರಣೆ ಕೊಡುತ್ತೇವೆ ಅವರು ಕೂಡ ಇದೇ ರೀತಿ ಪೆಂಡೆಂಟ್ ಧರಿಸಿದ್ದಾರೆ ಅವರನ್ನು ಕೂಡಲೆ ಅರೆಸ್ಟ್ ಮಾಡಿ ವಿಚಾರಣೆ ಮಾಡಿ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಹುಲಿ ಉಗುರು ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹುಲಿ ಉಗುರು ಪೆಂಡೆಂಟ್ ಹಾಕಿರುವ ಸೆಲೆಬ್ರಿಟಿಗಳ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ. ಇದನ್ನೆಲ್ಲ ಗಮನಿಸಿದ ಯುವತಿಯೊಬ್ಬಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.
ಈ ವಿಡಿಯೋದಲ್ಲಿ ಆಕೆ ವರ್ತೂರ್ ಸಂತೋಷ್ ಅವರ ಪರ ವಕಾಲತ್ತು ವಹಿಸಿ ಸೆಲೆಬ್ರಿಟಿಗಳ ವಿರುದ್ಧ ಮತ್ತು ಅರಣ್ಯಾಧಿಕಾರಿಗಳ ವಿರುದ್ಧ ತನ್ನ ಆಕ್ರೋಶವನ್ನು ಹೊರ ಹಾಕಿದ್ದಾಳೆ. ನವರಸನಾಯಕ ಜಗ್ಗೇಶ್ (Actor Jaggesh talk about his Pendent ) ಅವರು ಹುಲಿ ಉಗುರಿನ ಪೆಂಡೆಂಟ್ ತೋರಿಸಿ ಇದನ್ನು ನಾನು 20ನೇ ವರ್ಷ ವಯಸ್ಸಿನಲ್ಲಿ ಇರುವಾಗ ನನ್ನ ತಾಯಿ ನಿಜವಾದ ಹುಲಿ ಉಗುರಿನಿಂದ ಪೆಂಡೆಂಟ್ ಮಾಡಿಸಿ ನನಗೆ ತಂದು ಹಾಕಿದ್ದು.
ಎಂದು ರಾಜ ರೋಷವಾಗಿ ಹೇಳಿಕೆ ಕೊಡುತ್ತಿದ್ದಾರೆ ಅವರ ಮೇಲೆ ನೀವು ಕ್ರಮ ತೆಗೆದುಕೊಳ್ಳುವುದಿಲ್ಲವೇ, ವಿನಯ್ ಗುರೂಜಿ (Vinay guruji photo viral) ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋಗಳು ವೈರಲ್ ಆಗುತ್ತಿವೆ. ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ರಾಕ್ ಲೈನ್ ವೆಂಕಟೇಶ್ (Darshan, Nikhil, Rockline Venkatesh also wear Pendent) ಮುಂತಾದವರ ಹುಲಿ ಉಗುರು ಪೆಂಟೆಂಟ್ ಧರಿಸಿರುವ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅರಣ್ಯಾಧಿಕಾರಿಗಳೇ ತಾಕತ್ತಿದ್ದರೆ ಇವರನ್ನು ಬಂಧಿಸಿ ರೈತರಿಗೆ, ಅಮಾಯಕರಿಗೆ, ದಲಿತರಿಗೆ ಮಾತ್ರ ನಿಮ್ಮ ಕಾನೂನು ಇರುವುದಾ? ಸೆಲೆಬ್ರಿಟಿಗಳನ್ನು ನೋಡಿ ತಾನೇ ಫಾಲೋವರ್ಸ್ ಗಳು ಕಲಿಯುತ್ತಾರೆ, ಎಲ್ಲರೂ ಹಾಕಿದ್ದಾರೆ ಎಂದು ಅವರು ಖರೀದಿಸುತ್ತಾರೆ. ಮೊದಲಿಗೆ ಇದನೆಲ್ಲ ಯಾರು ಮಾರಾಟ ಮಾಡುತ್ತಿದ್ದಾರೆ.
ಅವರನ್ನು ಹಿಡಿದು ಒಳಗೆ ಹಾಕಿ, ಅದನ್ನ ಬಿಟ್ಟು ಖರೀದಿಸುವವನು ಮೇಲೆ ದರ್ಪ ತೋರಿದರೆ ಯಾವ ನ್ಯಾಯ ಕೆಲವರಿಗೆ ಏನು ಖರೀದಿಸಬೇಕು, ಖರೀದಿಸಬಾರದು ಎನ್ನುವುದರ ಅರಿವು ಸಹ ಇರುವುದಿಲ್ಲ. ಹಳ್ಳಿಯಲ್ಲಿ ಹಸು ಕರು ಎಮ್ಮೆ ಮೇಕೆ ನೋಡಿಕೊಂಡು ಬದುಕುತ್ತಿದ್ದ ವ್ಯಕ್ತಿ ಮೇಲೆ ನಿಮ್ಮ ದರ್ಪ ತೋರುತ್ತಿದ್ದೀರಲ್ಲ ಈ ಮೇಲೆ ಹೇಳಿದೆ ಅಷ್ಟು ಸೆಲೆಬ್ರಿಟಿಗಳ ಪರವಾಗಿ ನಾನು ಸಾಕ್ಷಿ ಕೊಡುತ್ತೇನೆ.
ನಿಮ್ಮ ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಈಗ ನಾನು ಹೇಳಿದ ಆ ಸೆಲೆಬ್ರೇಟ್ ಗಳನ್ನು ಕೂಡ ಬಂಧಿಸಿ ಸಾಬೀತುಪಡಿಸಿ ಎಂದು ಚಾಲೆಂಜ್ ಮಾಡಿದ್ದಾರೆ. ಈಕೆ ಮಾತನಾಡಿರುವ ಈ ವಿಡಿಯೋ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಲ್ಲರೂ ಯುವತಿಯನ್ನು ಬೆಂಬಲಿಸುತ್ತಿದ್ದಾರೆ.
ಈಕೆ ಮಾತನಾಡಿರುವುದರಲ್ಲಿ ಸರಿಯಾದ ಪಾಯಿಂಟ್ ಗಳು ಇವೆ ಎಂದು ಅನೇಕರು ಇದನ್ನು ಶೇರ್ ಮಾಡುತ್ತಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಂತೋಷ್ ಪರ ಹೆಚ್ಚು ಜನರು ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಬಹುತೇಕರ ಅಭಿಪ್ರಾಯ ಆತ ಮುಗ್ಧ ಏಕಾಏಕಿ ಅರೆಸ್ಟ್ ಮಾಡಿರುವುದು ತಪ್ಪು ಎನ್ನುವಂತೆ ಕಮೆಂಟ್ ಮಾಡುತ್ತಿದ್ದಾರೆ.