Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಟಗರು ಪಲ್ಯ ಸಿನಿಮಾ ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಆಹ್ವಾನ ಕೊಟ್ಟ ಡಾಲಿ ಧನಂಜಯ್ ಮತ್ತು ನಟಿ ತಾರಾ.!

Posted on October 25, 2023 By Admin No Comments on ಟಗರು ಪಲ್ಯ ಸಿನಿಮಾ ವೀಕ್ಷಿಸಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಆಹ್ವಾನ ಕೊಟ್ಟ ಡಾಲಿ ಧನಂಜಯ್ ಮತ್ತು ನಟಿ ತಾರಾ.!

ಡಾಲಿ ಧನಂಜಯ್ (Dolly Dhananjay) ಅವರು ಸದ್ಯಕ್ಕೆ ಕನ್ನಡ ಚಲನಚಿತ್ರದ ಬಹುಬೇಡಿಕೆ ನಟರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕೂಡ ತಮ್ಮ ಚಾಪೂ ಮೂಡಿಸಿರುವ ಇವರು ನಟನೆಯ ಜೊತೆ ನಿರ್ಮಾಣಕ್ಕೂ ಇಳಿದಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು (Production) ಕಟ್ಟಿರುವ ಇವರು ಬಡವಾ ರಾಸ್ಕಲ್, ಹೊಯ್ಸಳ ಬಳಿಕ ಟಗರು ಪಲ್ಯ ಸಿನಿಮಾ ವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದರಲ್ಲಿ ವಿಶೇಷವೇನೆಂದರೆ ಮೊದಲ ಎರಡು ಸಿನಿಮಾಗಳಲ್ಲೂ ಕೂಡ ಅವರೇ ನಟನೆ ಮಾಡಿದ್ದರು ಈಗ ಟಗರು ಪಲ್ಯ ಸಿನಿಮಾವನ್ನು (Tagarupalya) ಸ್ನೇಹಿತ ಹಾಗೂ ಹಾಸ್ಯ ನಟ ನಾಗಭೂಷಣ್ (Nagabhushan) ಅವರಿಗಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ (Lovely star Prem’s daughter Amrutha) ನಾಯಕನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಉಮೇಶ್ ಕೆ ಕಶ್ಯಪ್ ರವರ ನಿರ್ದೇಶನವಿರುವ ಟಗರು ಪಲ್ಯ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದು ಸಿನಿಮಾದ ಟ್ರೈಲರ್ ರಿಲೀಸ್ ಇವೆಂಟ್ (trailer release event) ಕೂಡ ಬಹಳ ಅದ್ದೂರಿಯಾಗಿ ನಡೆದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan guest) ಅವರು ಈ ಕಾರ್ಯಕ್ರಮದ ಸಾರಥಿಯಾಗಿದ್ದ ಕಾರಣ ಸಿನಿಮಾಗೆ ಬಹಳ ದೊಡ್ಡ ಪ್ರಮೋಷನ್ ಸಿಕ್ಕ ರೀತಿ ಆಗಿದೆ.

ಸಿನಿಮಾ ಸೆಟ್ಟೇರಿದ ದಿನದಿಂದಲೂ ಕೂಡ ತನ್ನ ಪೋಸ್ಟರ್ಗಳು ಹಾಗೂ ಹಾಡುಗಳ ಮೂಲಕ ಇದೊಂದು ಪಕ್ಕ ಹಳ್ಳಿ ಸೊಗಡಿನ ಚಿತ್ರ ಎನ್ನುವ ಕಾರಣಕ್ಕಾಗಿ ಅತಿ ಹೆಚ್ಚು ಜನರ ಗಮನ ಸೆಳೆದಿರುವ ಟಗರು ಪಲ್ಯ ಸಿನಿಮಾವು ಇದೆ ಅಕ್ಟೋಬರ್ 27ರಂದು ರಿಲೀಸ್ (October 27th movie release) ಆಗುತ್ತಿದೆ. ಇದರ ಪ್ರಯುಕ್ತ ಸಿನಿಮಾ ತಂಡವು ವಿಭಿನ್ನ ವಿಭಿನ್ನ ಬಗೆಯಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯ ನಡೆಸುತ್ತಿದೆ.

ಅಂತೆಯೇ ಸಿನಿಮಾದ ನಿರ್ಮಾಪಕರಾಗಿರುವ ಡಾಲಿ ಧನಂಜಯ್ ಮತ್ತು ಸಿನಿಮಾದಲ್ಲಿ ಅತಿ ಮುಖ್ಯ ಪಾತ್ರ ನಿರ್ವಹಿಸಿರುವ ನಟಿ ತಾರಾ ಅನುರಾಧ ಅವರು ಸಿಎಂ ಸಿದ್ದರಾಮಯ್ಯ (Invite CM Siddaramaiah for Movie) ಅವರನ್ನು ಭೇಟಿಯಾಗಿ ಟಗರು ಪಲ್ಯ ಸಿನಿಮಾದ ಟ್ರೈಲರ್ ತೋರಿಸಿ ತಮ್ಮ ಸಿನಿಮಾ ನೋಡುವಂತೆ ಆಹ್ವಾನಿಸಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ರವರು, ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ ಟಗರು ಪಲ್ಯ ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು, ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಧನಂಜಯ್, ತುಂಬು ಹೃದಯದ ಧನ್ಯವಾದಗಳು ಸರ್ ತಮ್ಮ ಆಗಮನಕ್ಕಾಗಿ ಇಡೀ ತಂಡ ಕಾಯುತ್ತಿದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಹೇಳಲೇಬೇಕಾದ ಮತ್ತೊಂದು ವಿಚಾರವೇನೆಂದರೆ ಕರ್ನಾಟಕದಲ್ಲಿ ಟ್ರೋಲಿಗರು ಸಿಎಂ ಸಿದ್ದರಾಮಯ್ಯರವರನ್ನು ಟಗರು ಎಂದೆ ಕರೆಯುತ್ತಾರೆ.

ಸಿನಿಮಾ ತಾರೆಗಳು ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳನ್ನು ಕೂಡ ಬಿಡದೆ ಟ್ರೋಲ್ ಮಾಡುವ ಟ್ರೊಲರ್ ಗಳು ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ನೇರ ನುಡಿ ಮತ್ತು ಕೆಚ್ಚೆದೆಯನ್ನು ಕಂಡು ಟಗರು ಎನ್ನುವ ಹೆಸರು ಕೊಟ್ಟಿದ್ದಾರೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.

ನಾವಿಂದು ಮಂತ್ರಿಯಾಗಿದ್ದರು, ಇಷ್ಟು ದೊಡ್ಡ ಸೆಲೆಬ್ರಿಟಿಯಾಗಿದ್ದರು ಕೂಡ ತಮ್ಮ ನಡೆ ನುಡಿಗಳಲ್ಲಿ ಹಳ್ಳಿ ಸೊಗಡನ್ನು ಬಿಟ್ಟುಕೊಟ್ಟದೆ ಸಾದಾಸೀದವಾಗಿ ನಡೆದುಕೊಂಡು ತಾನೊಬ್ಬ ರೈತನ ಮಗ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗಾಗಿ ಹಳ್ಳಿ ಸೊಗಡಿನ ಮತ್ತು ರೈತನ ಜೀವನದ ಸುತ್ತ ಕಟ್ಟಿರುವ ಕಥೆಯಾದ ಟಗರು ಪಲ್ಯವನ್ನು ಕೂಡ ನೋಡಿ ಹಾರೈಸಲಿ ಎನ್ನುವುದು ಸಿನಿಮಾ ತಂಡದ ಇಚ್ಛೆಯಾಗಿದೆ ಆ ಕಾರಣಕ್ಕಾಗಿ ಆಹ್ವಾನ ನೀಡಿದ್ದಾರೆ.

cinema news

Post navigation

Previous Post: 12 ಜನ ಹೆಂಡ್ತೀರು, 102 ಮಕ್ಕಳು, 568 ಮೊಮ್ಮಕ್ಕಳು. ಕುಟುಂಬ ನಡೆಸೋಕಾಗ್ತಿಲ್ಲ.! ಹಾಗಾಗಿ ನಿ-ರೋಧ್ ಬಳಸಲು ನಿರ್ಧಾರ ಮಾಡಿದ್ದೇನೆ ಎಂದ ಮೂಸಾ.!
Next Post: ಅರಣ್ಯಾಧಿಕಾರಿಗಳಿಗೆ ತಾಕತ್ತಿದ್ರೆ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್, ನಿಖಿಲ್ ಇವರನ್ನು ಬಂಧಿಸಿ ಸಾಕ್ಷಿ ನಾನು ಕೊಡುತ್ತೇನೆ ಎಂದು ಅರಣ್ಯ ಅಧಿಕಾರಿಗಳಿಗೆ ಓಪನ್ ಚಾಲೆಂಜ್ ಹಾಕಿದ ಯುವತಿ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme