ಮಕ್ಕಳಿರಲವ್ವ ಮನೆ ತುಂಬಾ ಈ ಮಾತು ಎಷ್ಟು ಸೊಗಸಾಗಿದೆ. ಮಕ್ಕಳಿರದ ಮನೆ ಸ್ಮಶಾನ, ಮಕ್ಕಳಿಲ್ಲದ ಬದುಕು ನರಕ. ಅನುಭವ ಆದಮೇಲೆ ಮಕ್ಕಳು ಎಷ್ಟು ಮುಖ್ಯ ಎನ್ನುವುದು ಅನೇಕರಿಗೆ ಅರಿವಾಗುತ್ತದೆ ಹಾಗೆಂದು ದಂಪತಿಗಳು ಎಷ್ಟು ಮಕ್ಕಳನ್ನು ಪಡೆಯಬಹುದು.
ಅವರು ಎಷ್ಟೇ ಅನುಕೂಲಸ್ಥರಾಗಿದ್ದರು ಅವರಿಗೆ ಮಕ್ಕಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಕೂಡ ಈಗಿನ ಕಾಲದಲ್ಲಿ ಅವರಿಗೆ ಇರುವ ದೈಹಿಕ ಆರೋಗ್ಯದ ಆಧಾರದ ಮೇಲೆ ಎರಡು, ಮೂರು, ಹೆಚ್ಚೆಂದರೆ ನಾಲ್ಕು ಅದೇ ಹೆಚ್ಚು. ಈಗಿನ ಕಾಲದಲ್ಲಿ ಮಕ್ಕಳನ್ನು ಸಾಕುವುದು ಬೆಳೆಸುವುದು ಅವರಿಗೆ ಒಂದು ನೆಲೆ ಕಟ್ಟಿ ಕೊಡುವುದು ಬಹಳ ದುಬಾರಿಯಾಗಿರುವ ಕಾರಣ ನಮ್ಮ ನಿರ್ಧಾರ ಹೆಚ್ಚೆಂದರೆ ಎರಡು ಮೂರು ಮಕ್ಕಳಿಗೆ ಮುಗಿಯುತ್ತದೆ.
ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ 102 ಮಕ್ಕಳಿಗೆ ಜನ್ಮ ಕೊಟ್ಟಿದ್ದಾನೆ. ಉಗಾಂಡದ ರೈತ ಮೂಸಾ ಹಸಾಹಯ ಇಂತಹದೊಂದು ಸಾಹಸ ಮಾಡಿರುವ ರೈತ. ಅಂದಹಾಗೆ ಒಬ್ಬ ಪತ್ನಿಯಿಂದ 102 ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ಈತ ಬರೋಬರಿ 12 ವಿವಾಹವಾಗಿದ್ದಾನೆ.
ಉಗಾಂಡದಲ್ಲಿ ಈತ ನೆಲೆಸಿರುವ ಲುಸಾಕ ಪ್ರದೇಶದಲ್ಲಿ ಬಹು ಪತ್ನಿತ್ವಕ್ಕೆ ಅನುಮತಿ ಇರುವುದರಿಂದ ತನ್ನ 12 ಪತ್ನಿಯರಿಂದ 102 ಮಕ್ಕಳು 568 ಮೊಮ್ಮಕ್ಕಳನ್ನು ಪಡೆದಿದ್ದಾನೆ. ಇತರೆ ಬಹಳ ವಿಚಿತ್ರ ಏನೆಂದರೆ ಈತನ ಕಿರಿಯ ಮಗ ಇನ್ನೂ ಆರು ವರ್ಷದವನು, ಈತನ ಕಿರಿಯ ಮಗನಿಗೂ ಕಿರಿಯ ಪತ್ನಿಗೂ 21 ವರ್ಷ ವಯಸ್ಸಿನ ಅಂತರವಿದೆ. ಇನ್ನು ಮುಂದೆ ಮೂಸಾ ಮಕ್ಕಳ ವಿಚಾರವಾಗಿ ಮಾಡಿರುವ ಒಂದು ನಿರ್ಧಾರದಿಂದ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾನೆ.
ಮೂಸನಿಗೆ 67 ವರ್ಷ ವಯಸ್ಸಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಆತನಿಗೆ ಮೊದಲಂತೆ ಕ’ಷ್ಟಪಟ್ಟು ದುಡಿಯಲು ಆಗದಿರುವ ಕಾರಣ ಇನ್ನು ಮುಂದೆ ಮಕ್ಕಳನ್ನು ಪಡೆಯದೆ ಇರಲು ನಿರ್ಧಾರ ಮಾಡಿದ್ದಾನೆ ಮತ್ತು ತನ್ನ ಪತ್ನಿಯರಿಗೆ ಗರ್ಭ ನಿರೋಧಕ ಬಳಸಲು ಆಜ್ಞೆ ಮಾಡಿದ್ದಾನೆ ಎನ್ನುವ ವಿಚಾರ ತಿಳಿದು ಬಂದಿದೆ.
ಸಂಸಾರ ಈಗ ಬೆಳೆದು ಹೆಮ್ಮರವಾಗಿದೆ. ಕುಟುಂಬದ ಪ್ರತಿಯೊಬ್ಬರಿಗೂ ಕೂಡ ಬೇಕಾಗುವಷ್ಟು ಆಹಾರ ಪದಾರ್ಥವನ್ನು ಹೊಂದಿಸಲು ಮೂಸಾ ನಿಗೆ ಕ’ಷ್ಟವಾಗುತ್ತಿದೆ. ಈತನ ಪರದಾಟ ನೋಡಿ ಇಬ್ಬರು ಪತ್ನಿಯರು ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ವಿವಾಹಗಳ ಬಗ್ಗೆ ಮೂಸಾಗೆ ಪ್ರಶ್ನೆ ಕೇಳಿದರೆ ಒಬ್ಬ ವ್ಯಕ್ತಿ ಒಬ್ಬಳೇ ಪತ್ನಿಯೊಂದಿಗೆ ಬದುಕಲು ಹೇಗೆ ಸಾಧ್ಯ ಎನ್ನುತ್ತಾನೆ. ಜೊತೆಗೆ ಎಲ್ಲಾ ಪತ್ನಿಯರು ಹೊಂದಾಣಿಕೆಯಿಂದ ಒಂದೇ ಮನೆಯಲ್ಲಿ ಹೇಗಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅವರಿರುವಂತೆ ನಾನು ಆಜ್ಞೆ ಮಾಡಿದ್ದೇನೆ.
ನನ್ನ ಪತ್ನಿಯರು ಒಂದೇ ಮನೆಯಲ್ಲಿ ಇದ್ದಾಗ ನಾನು ಎಲ್ಲರ ಮೇಲೆ ಕಣ್ಣು ಇಡಬಹುದು ಮತ್ತು ಪರಪುರುಷರ ಕಣ್ಣು ಅವರ ಮೇಲೆ ಬೀಳದಂತೆ ಜೋಪಾನ ಮಾಡಬಹುದು, ಹಾಗಾಗಿ ಎಲ್ಲರೂ ಒಟ್ಟಿಗೆ ಇಟ್ಟಿದ್ದೇನೆ ಎನ್ನುತ್ತಾರೆ. ಈ ವಿಷಯ ಸೋಷಿಯಲ್ ವಿಡಿಯೋದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತದಲ್ಲಿ ಬಹಳ ವಿಶೇಷ ಎನಿಸತೊಡಗಿದೆ.
ಒಂದು ಕುಟುಂಬದಲ್ಲಿ ಅಷ್ಟು ಜನ ಇರಬಹುದು ಆದರೆ ಒಬ್ಬ ತಂದೆಗೆ ಇಷ್ಟು ಮಕ್ಕಳು ಇರುವುದು ನಿಜವಾಗಲೂ ಸಾಹಸವೇ ಆಗಿದೆ. ಹಾಗಾಗಿ ಅನೇಕರಿಗೆ ಇವರ ಕುಟುಂಬದ ಮೇಲೆ ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಮೂಸಾ ಕುಟುಂಬದ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.