Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಇಸ್ರೇಲ್‌ ನದ್ದು ಕದ್ದ ಭೂಮಿ, ಭಾರತ ಪ್ಯಾಲೆಸ್ತೇನ್‌ ಪರವಾಗಿ ನಿಲ್ಲಬೇಕು – ನಟ ಚೇತನ್‌ ಅಹಿಂಸಾ

Posted on October 10, 2023 By Admin No Comments on ಇಸ್ರೇಲ್‌ ನದ್ದು ಕದ್ದ ಭೂಮಿ, ಭಾರತ ಪ್ಯಾಲೆಸ್ತೇನ್‌ ಪರವಾಗಿ ನಿಲ್ಲಬೇಕು – ನಟ ಚೇತನ್‌ ಅಹಿಂಸಾ

 

ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ (Israel and Palestinian) ನಡುವೆ ನಡೆಯುತ್ತಿರುವ ಯುದ್ಧವು ವಿಶ್ವದ ಎಲ್ಲ ಜನರು ಈ ದೇಶಗಳತ್ತ ಗಮನಹರಿಸುವಂತೆ ಮಾಡಿದೆ. ಇಸ್ರೇಲ್ ಮೇಲೆ ಹಮಸ್ ಉಗ್ರರ ಕಣ್ಣು ಬೀಳುತ್ತಿದ್ದಂತೆ ಚುರುಕಾದ ಇಸ್ರೇಲ್ ತನ್ನದೇ ರೀತಿಯಲ್ಲಿ ಪ್ಯಾಲಿಸ್ತೇನ್ ಉಗ್ರರಿಗೆ ಪಾಠ ಕಲಿಸುತ್ತಿದೆ. ಪ್ರತಿದಿನವೂ ಕೂಡ ಘ’ರ್ಷ’ಣೆ ಜೋರಾಗಿ ನಡೆಯುತ್ತಿದ್ದು ಎರಡು ದೇಶಗಳ ಪರಿಸ್ಥಿತಿ ಬಿಗಿಯಾಗಿ ನೆರೆ ರಾಷ್ಟ್ರಗಳಿಂದ ರಕ್ಷಣೆಗಾಗಿ ಬೆಂಬಲ ಕೂಡ ಕೇಳುವಂತಾಗಿವೆ.

ಇಸ್ರೇಲ್‌ ಸ್ವಾರ್ಡ್ಸ್‌ ಆಫ್‌ ಐರನ್‌ (Israel sqards of Iron) ಹೆಸರಿನಲ್ಲಿ ಹಮಾಸ್‌ ಉಗ್ರರನ್ನು (Hamas Terrorists) ಮಟ್ಟಹಾಕುವ ಕಾರ್ಯಾಚರಣೆಯನ್ನು ಇಸ್ರೇಲ್‌ ಸೇನೆ ಆರಂಭಿಸಿದೆ. ಹತ್ತು ಹಲವು ಕಾರಣಗಳಾಗಿ ಭಾರತವು ಈ ವಿಚಾರದಲ್ಲಿ ಇಸ್ರೇಲ್ ಬೆಂಬಲಿಸುತ್ತಿದೆ, ಸ್ವತಃ ಮೋದಿಯವರೇ (Modi) ಈ ವಿಷಯವನ್ನು ಸ್ಪಷ್ಟೀಕರಿಸಿದ್ದಾರೆ ಆದರೆ ಸಾಮಾಜಿಕ ಹೋರಾಟಗಾರ ಎಂದು ಕರೆಸಿಕೊಂಡಿರುವ ನಟ ಚೇತನ್ (actor Chethan Ahimsa) ಪ್ರಧಾನಿಗಳ ಈ ನಡೆಯನ್ನು ಖಂಡಿಸಿದ್ದಾರೆ.

ಹಮಾಸ್‌ ಉಗ್ರರು ಶನಿವಾರ ಇಸ್ರೇಲ್‌ ದೇಶದ ಮೇಲೆ 5 ಸಾವಿರ ರಾಕೆಟ್‌ಗಳಿಂದ ಒಮ್ಮೆಲೆ ದಾಳಿ ಮಾಡಿದ್ದರಿಂದ ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ನಡುವಿನ ದೇಶದ ನಡುವೆ ಪರಿಸ್ಥಿತಿ ಹದಗೆಟ್ಟಿದೆ. ಪರಿಣಾಮವಾಗಿ ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಪ್ರಾ.ಣ ತೆತ್ತಿದ್ದಾರೆ. ಇಸ್ರೇಲ್‌ ನಿರಂತರವಾಗಿ ಏರ್‌ಸ್ಟ್ರೈಕ್‌ಗಳನ್ನು ಮಾಡುತ್ತಿದ್ದು ತನ್ನ ರಕ್ಷಣೆ ಮಾಡಿಕೊಂಡು ಉಗ್ರರನ್ನು ಮಟ್ಟ ಹಾಕುವ ಪ್ರಯತ್ನ ಮಾಡುತ್ತಿದೆ.

ಭಾರತ ದೇಶದ ಪರವಾಗಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಈ ವಿಚಾರವಾಗಿ ಟ್ವೀಟ್ ಮಾಡಿ ಎಂದಿಗೂ ಸಹ ಭಾರತ ಇಸ್ತ್ರೇಲ್ ನೊಂದಿಗೆ ಇರುತ್ತದೆ ಎಂದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಇಸ್ತ್ರೇಲ್ ವಿದೇಶಾಂಗ ಇಲಾಖೆ ಮೋಸಾದ್ ಕೂಡ ಭಾರತದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪ್ಯಾಲೇಸ್ಟಿನಿಯನ್ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ದೇಶದ ಅನೇಕರು ವಿರೋಧಿಸುತ್ತಾರೆ.

ಅದರಲ್ಲೂ ಸಾಮಾಜಿಕ ಹೋರಾಟಗಾರ ಎಂದು ಬಿಂಬಿತವಾಗಿರುವ ಕನ್ನಡ ಸಿನಿಮಾ ತಾರೆ ಚೇತನ್ ಅಹಿಂಸಾ ರವರು ಈ ರೀತಿ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವುದರಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅದೇ ರೀತಿಯಾಗಿ ಈಗಲೂ ಕೂಡ ಪ್ರಧಾನಿಗಳ ನಡೆಯನ್ನು ವಿರೋಧಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ಯಾಲೇಸ್ಟಿನಿಯನ್ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದಕ್ಕೆ ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದೆ. ಇಸ್ರೇಲ್-ಪ್ಯಾಲೇಸ್ಟಿನಿಯಲ್ಲಿ ಭಾರಿ ಹಿಂ’ಸಾ’ಚಾ’ರ ಮತ್ತು ಸಾ’ವು-ನೋ’ವುಗಳು ಸಂಭವಿಸಿವೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪರವಾಗಿ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ. ಆದರೆ ಅಸಲಿಗೆ ನೋಡುವುದಾದರೆ ಇಸ್ರೇಲ್ ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೋನಿ.

ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಪ್ಯಾಲೇಸ್ಟಿನಿಯನ್ ನ್ಯಾಯದ ಪರವಾಗಿ ನಿಲ್ಲಬೇಕು ಎಂದು ನಟ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಸರಣಿ ಪೋಸ್ಟ್ ಗಳನ್ನು ಹಂಚಿಕೊಂಡಿರುವ ಅವರು ಮತ್ತೊಂದು ಪೋಸ್ಟ್ ನಲ್ಲಿ ಪ್ಯಾಲೆಸ್ಟೀನಿಯನ್ನರಿಗೆ ನ್ಯಾಯವು ಅತ್ಯಗತ್ಯವಾಗಿರುತ್ತದೆ ಆದರೆ, ಪ್ಯಾಲೇಸ್ಟಿನಿಯನ್ ಹಮಾಸ್ ಸ’ತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂ’ರವಾಗಿದೆ ಮತ್ತು ಇದು ಖಂಡನೀಯ.

ಪುರುಷರ ಆಕ್ರಮಣಕಾರಿ ಯುದ್ಧಗಳಿಗೆ ಮಹಿಳೆಯರ ದೇಹಗಳು ಯಾವಾಗಲೂ ಸಹಾಯಕ ಯುದ್ಧ ಭೂಮಿಗಳಾಗಿವೆ. ಇಂತಹ ಘರ್ಷಣೆಗಳ ಸಮಯದಲ್ಲಿ ಅ’ವ’ಮಾ’ನವು ನ್ಯಾಯವನ್ನು ಮೀರಿಸುತ್ತದೆ ಎಂಬುದನ್ನು ಇಂತಹ ಘೋ.ರ ಯುದ್ಧದ ಅಪರಾಧಗಳು ನಮಗೆ ನೆನಪಿಸುತ್ತವೆ ಎಂದು ಬರೆದುಕೊಂಡಿದ್ದಾರೆ.

Viral News

Post navigation

Previous Post: ಪ್ರೀತಿಸಿದವಳು ಮೋಸ ಮಾಡಿದ್ಳು.! ಆ ನೋವಲ್ಲಿ IAS ಆಗ್ಬೇಕು ಅಂತ ನಿರ್ಧಾರ ಮಾಡಿದೆ.! ಇಂದು UPSCಯಲ್ಲಿ 94 ನೇ ರ‍್ಯಾಂಕ್ ಪಡೆದು IAS ಆದೇ – ಅಭಿಷೇಕ್
Next Post: ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme