ದುನಿಯಾ. ಬಿರುಗಾಳಿ, ಹುಲಿ ಮತ್ತು ಇತ್ತೀಚಿನ ಕಾಂತರಾ ಸಿನಿಮಾದಲ್ಲಿ ಕೂಡ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿರುವ ನಟ ಕಿಶೋರ್ (Actor Kishore) ಅವರು ಸೋಷಿಯಲ್ ವಿಡಿಯೋದಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳು (Social media posts) ಕೂಡ ಅಷ್ಟೇ ಕಟುವಾಗಿರುತ್ತದೆ ಎಂದೇ ಹೇಳಬಹುದು.
ನಟನೆಯನ್ನು ಹೊರತುಪಡಿಸಿ ಕೂಡ ನಟ ಕಿಶೋರ್ ಅವರದ್ದು ವಿಶೇಷ ವ್ಯಕ್ತಿತ್ವ. ಕೃಷಿ ಬಗ್ಗೆ ಇನ್ನೆಲಿಲ್ಲದ ಒಲವು ಹಾಗೂ ಸಮಾಜದ ಬಗ್ಗೆ ಅಷ್ಟೇ ಕಳಕಳಿ ಈಗಾಗಲೇ ಬಹುಭಾಷಾ ನಟನಾಗಿ ಗೆದ್ದಿರುವ ಇವರು ಪ್ರಚಾರ ಪ್ರಿಯರೆಲ್ಲ ಆದರೂ ಬಲಪಂಥೀಯ ದೋರಣೆಗಳನ್ನು ಕಟುವಾಗಿ ದೂಷಿಸುವ ಇವರು ನೇರವಾಗಿ ಅನೇಕ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟಾಂಗ್ ಮಾಡಿ ಸುದ್ದಿಯಲ್ಲಿರುತ್ತಾರೆ.
ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ
ಇತ್ತೀಚೆಗೆ ಅವರು ಫೇಸ್ಬುಕ್ ನಲ್ಲಿ (facebook) ಹಚ್ಚಿಕೊಂಡಿರುವ ಎಲ್ಲಾ ಪೋಸ್ಟ್ ಗಳು ನಮ್ಮನ್ನು ಆಳವಾದ ಚಿಂತನೆಗೆ ಹಚ್ಚುತ್ತದೆ. ಮತ್ತೊಮ್ಮೆ ನೆನ್ನೆಯಷ್ಟೇ ನಟ ಹಂಚಿಕೊಂಡಿರುವ ಫೇಸ್ಬುಕ್ ಖಾತೆಯಲ್ಲಿನ ಬರಹದ ಹೀಗಿದೆ. ಹೇ ರಾಮ್ ಅಂದು ಕೊರಗಜ್ಜ, ಇಂದು ಇಸ್ರಾರ್, ಆದರೆ ಆ ರಾಮನೆಲ್ಲಿ? ಅಂದು ಕೊರಗ ತನಿಯ, ಹಸಿವಿಗೆ ಹಣ್ಣು ಕೀಳಲು ದೇವಾಯದ ಮೇಲೆ ಹತ್ತಿದ್ದಕ್ಕೆ.
ಇಂದು ವಿಶೇಷ ಚೇತನ ಇಸ್ರಾರ್, ಗಣಪತಿ ಪೆಂಡಾಲಿನಿಂದ ಬಾಳೆ ಹಣ್ಣು ತಿಂದದ್ದಕ್ಕೆ, ವಿಕಲ ಮತಿಗಳು ಬಡಿದು ಕೊಂದಾಗ ಬಾರದ ಆ ರಾಮನೆಲ್ಲಿ? ಅಹಿಂಸೆ ಶಾಂತಿ ಪ್ರೀತಿಯ ಪ್ರವಾದಿಯ ನಾಡಲ್ಲಿ ಹಿಂಸೆಯ ತಾಂಡವ ನಡೆವಾಗ, ಓ ಗಾಂಧೀ, ಆ ನಿಮ್ಮ ರಾಮನೆಲ್ಲಿ ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ.
ಅನೈತಿಕ ಸಂಬಂಧ ಹೊಂದಿರುವ ಪತ್ನಿಯು ಪತಿಯಿಂದ ಜೀವನಾಂಶ ಕೊರುವಂತಿಲ್ಲ – ಹೈಕೋರ್ಟ್ ಆದೇಶ
ಬದಲಾಗದ ಈ ಅಸಮಾನತೆ, ಹಸಿವು, ಶೋಷಣೆ ಮತ್ತು ಕ್ರೌರ್ಯದ ಹಿಂದಿನ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ಕೂಗಿದಾಗ ಕಂಡದ್ದು ಆ ಬಾರದ ರಾಮನಲ್ಲ, ನೀವು ಕೂಗಿ ಕರೆದ ನಿಮ್ಮೊಳಗಿನ ಆ ರಾಮನನ್ನು ನಮ್ಮ ನಿಮ್ಮೊಳಗಿನ ಆ ರಾಮನನ್ನು ಬಡಿದೆಬ್ಬಿಸಬೇಕಿದೆ. ನಿಮ್ಮ ದರ್ಶನದ ಸ್ವರಾಜ್ಯ ಸ್ಥಾಪಿಸಬೇಕಿದೆ, ಅಳಿದುಳಿದ ಮನುಷ್ಯತ್ವ ಸಂಪೂರ್ಣ ನಾಶವಾಗುವ ಮುನ್ನ ಎಂದು ಪರೊಕ್ಷವಾಗಿ ಏನನ್ನೋ ಹೇಳಲು ಬಯಸಿದ್ದಾರೆ.
ಈ ಬರಹ ನಾ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನ್ಯವನ್ನೇ ಆಧರಿಸಿದೆ ಎಂದು ನಿಖರವಾಗಿ ಹೇಳಬಹುದು. ಯಾಕೆಂದರೆ ಅವರು ಪ್ರಸ್ತುತವಾಗಿ ದೇಶದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಇಟ್ಟುಕೊಂಡೇ ಯಾವಾಗಲೂ ಪ್ರಶ್ನೆ ಮಾಡುವುದು ಅವರ ವಾಡಿಕೆ. ಈ ಬಾರಿಯೂ ಕೂಡ ದೇಶದಲ್ಲೇ ನಡೆಯುತ್ತಿರುವ ಕೋಮುವಾದದ ಗಲಾಟೆಗಳನ್ನು ಉದ್ದೇಶಿಸಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ ಎಂದು ನೆಟ್ಟಿಗರು ಅರ್ಥ ಮಾಡಿಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಸನಾತನ ಧರ್ಮದ ಕುರಿತು ಹೆಚ್ಚು ಚರ್ಚೆಯಾಗುತ್ತಿದ್ದಾಗ ಇದ್ಯಾವುದೋ ಹೊಸ ಧರ್ಮ ಈಗಷ್ಟೇ ಹೆಸರು ಪಡೆದುಕೊಳ್ಳುತ್ತಿದೆ, ಈವರೆಗೂ ಕೇಳಿಯೇ ಇಲ್ಲವಲ್ಲ ಎಂದಿದ್ದರು. ಮೋದಿ ಅವರ ಹುಟ್ಟು ಹಬ್ಬದ ದಿನವೂ ಕೂಡ ಮಿ. 56 ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು.
ಕಿಶೋರ್, ರಘುಪತಿ ರಾಘವ ರಾಜಾರಾಮ್ ಇವರಿಗೆ ಸನ್ಮತಿ ದೇ ಭಗವಾನ್ ಇನ್ನಾದರೆ ಇವರಿಗೆ ಸ್ವಾರ್ಥ ಬಿಡುವ, ಕ್ರೌರ್ಯ ಬಿಡುವ, ಅಯೋಗ್ಯತೆ ಮುಚ್ಚಿ ಹಾಕಿಕೊಳ್ಳಲು ಕೂಲಿಗಳ ಮೂಲಕ ಸುಳ್ಳು ಆರೋಪ ಹೊರಸುವ ಬುದ್ಧಿ ಬಿಡುವ, ಬಟ್ಟೆಯಿಂದ ತಾರತಮ್ಯ ಮಾಡಿ ಜನರ ವಿಭಜನೆ ಮಾಡುತ್ತಿರುವ ಬುದ್ಧಿ ಬಿಡುವ ಭ್ರಷ್ಟಾಚಾರ ಬಿಡುವ ಸನ್ಮತಿ ಕೊಡು ಎಂದು ಪ್ರಧಾನಿಗಳ ಗುಣವಾಗುಣಗಳನ್ನು ಗುಣಗಾನ ಮಾಡಿ ಟೀಕಿಸಿದ್ದರು.