ಕಾರು ಕೊಳ್ಳುವಾಗ ನಾವು ಅನೇಕ ವಿಷಯಗಳ ಬಗ್ಗೆ ಗಮನ ಕೊಡುತ್ತೇವೆ. ಕಾರಿನ ಬೆಲೆ ಮುಖ್ಯವಾದ ವಿಚಾರ ಆದರೂ ಕೂಡ ಅದಕ್ಕಿಂತ ಹೆಚ್ಚಿಗೆ ಕೇಳುವುದು ಸುರಕ್ಷತೆಯನ್ನು. ಇನ್ನು ಕಾರಿನ ಫೀಚರ್ಸ್, ಬ್ರಾಂಡ್, ಡಿಸೈನ್ ಇತ್ಯಾದಿ ಇತ್ಯಾದಿಗಳು ಕೂಡ ಮ್ಯಾಟರ್ ಆಗುತ್ತವೆ. ಸದ್ಯಕ್ಕೆ ಭಾರತದಲ್ಲಿ ಉತ್ಪಾದನೆ ಹಾಗೂ ಮಾರಾಟದಲ್ಲಿ ಟಾಟಾ ಮೋಟರ್ಸ್ ಉತ್ತಮ ಸ್ಥಾನದಲ್ಲಿದೆ.
ಇದಕ್ಕೆ ಹತ್ತು ಹಲವಾರು ಕಾರಣಗಳು ಕೂಡ ಇವೆ. ಕೆಲ ತಿಂಗಳ ಹಿಂದೆ ಟಾಟಾ ಮೋಟಾರ್ ವತಿಯಿಂದ ಟಾಟಾ ನೆಕ್ಸನ್ XUV ಎನ್ನುವ ನೂತನ ಮಾದರಿಯ ಕಾರ್ ಲಾಂಚ್ ಆಗಿದೆ. 11 ಬಗೆಯಲ್ಲಿ ಈ ಕಾರಿನ ರೂಪಾಂತರಗಳಿವೆ. ಇದೆಲ್ಲವನ್ನು ಮೀರಿ ಟಾಟಾ ನೆಕ್ಸನ್ ಕುರಿತು ಇತ್ತೀಚೆಗೆ ವೈರಲ್ ಆಗುತ್ತಿರುವ ಒಂದು ವಿಚಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆದ ಟಾಟಾ ನೆಕ್ಸನ್ ಕಾರ್ ಆಕ್ಸಿಡೆಂಟ್ ಕುರಿತಾದ ಒಂದು ಫೋಟೋಗಳು ಹಾಗೂ ವೀಡಿಯೋಗಳು ಹರಿದಾಡುತ್ತಿವೆ. ಯಾವ ಪ್ರದೇಶದಲ್ಲಿ ಈ ಆಕ್ಸಿಡೆಂಟ್ ನಡೆದಿದೆ ಎನ್ನುವುದನ್ನು ತಿಳಿಯಲಾಗದಿದ್ದರೂ ದಕ್ಷಿಣ ಭಾರತದ ಯಾವುದೇ ಒಂದು ಭಾಗ ಎಂದು ಊಹಿಸಬಹುದು. ಮತ್ತು ಎಷ್ಟು ತೀವ್ರತೆಯಲ್ಲಿ ಈ ಅ.ಪಘಾ.ತವಾಗಿದೆ ಎನ್ನುವುದು ಫೋಟೋ ಹಾಗೂ ವಿಡಿಯೋ ನೋಡಿದರೆ ತಿಳಿಯುತ್ತದೆ.
ಆಯಿಲ್ ಟ್ಯಾಂಕರ್ ಜೊತೆಗೆ ಟಾಟಾ ನೆಕ್ಸನ್ XUV ಕಾರ್ ಡಿಕ್ಕಿ ಹೊಡೆದು ಕಾರಿನ ಮುಂಭಾಗ ಪೂರ್ತಿ ಜಖಂ ಆಗಿದೆ. ಇಷ್ಟೆಲ್ಲಾ ಡ್ಯಾಮೇಜ್ ಆಗಿದ್ದರು ಕಾರಿನ ಚಾಲಕ ಮಾತ್ರ ಸೀಟ್ ನಲ್ಲಿ ಹಾಗೆ ಕುಳಿತಿರುವ ದೃಶ್ಯ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ, ಇದರಿಂದ ಕಾರಿಗೆ ಎಷ್ಟು ಸೇಫ್ಟಿ ಇದೆ ಎನ್ನುವುದು ಗೊತ್ತಾಗುತ್ತದೆ.
ನಮ್ಮದು ಮಹಿಳಾಪ್ರಿಯ ಸರ್ಕಾರ, ಮಧ್ಯದದಂಗಡಿ ತೆರೆಯುವುದಕ್ಕೆ ನಮ್ಮದು ವಿರೋಧವಿದೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.!
ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಅತಿ ವೇಗವಾಗಿ ಬರುತ್ತಿದ್ದರಿಂದ ನೆಕ್ಸನ್ ಕಾರ್ ಹಾಗೂ ಟ್ಯಾಂಕರ್ ಡಿಕ್ಕಿ ಮಾಡಿಕೊಂಡಿವೆ. ಅಪಘಾತದಲ್ಲಿ ಎರಡು ವಾಹನಗಳ ಚಾಲಕರಿಗೂ ಕೂಡ ಗಾಯಗಳಾಗಿವೆ, ಆದರೆ ಬಹಳ ಗಂಭೀರವಾಗಿ ನಡೆದ ಈ ಆಕ್ಸಿಡೆಂಟ್ ನಲ್ಲಿ ಅದೃಷ್ಟವಶಾತ್ ಪ್ರಾಣ ಉಳಿದಿರುವುದೇ ಹೆಚ್ಚು ಎನ್ನಬಹುದು.
ದೃಶ್ಯಗಳನ್ನು ಗಮನಿಸಿದ ನೆಟ್ಟಿಗರು ನೆಕ್ಸನ್ ಕಾರ್ ಸೇಫ್ಟಿ ಎನ್ನುತ್ತಾರೆ, ತಕ್ಷಣವೇ ಚಾಲಕನನ್ನು ಸ್ಥಳೀಯರು ಬಂದು ಹತ್ತಿರದಲ್ಲಿದ್ದ ಆಸ್ಪತ್ರೆಗೆ ತಲುಪಿಸಿದ್ದಾರೆ. ಸದ್ಯಕ್ಕಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಹಾಗೂ ವಿಡಿಯೋಗಳು ಅಪ್ಲೋಡ್ ಆದ ಮೇಲೆ ದೇಶಿಯ ಕಾರ್ ಆದ ಟಾಟಾ ನೆಕ್ಸನ್ ಸಾಮರ್ಥ್ಯದ ಬಗ್ಗೆ ಅನೇಕರು ಉತ್ತಮ ಅಭಿಪ್ರಾಯಗಳನ್ನು ಹೊರತು ಪಡಿಸುತ್ತಿದ್ದಾರೆ.
ಹಾಗೆ ಕೆಲವರು ಮಾತ್ರ ಹಾಗಿದ್ದರೆ ಆಕ್ಸಿಡೆಂಟ್ ಯಾಕಾಯಿತು ಎನ್ನುವ ಪ್ರಶ್ನೆ ಕೂಡ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಅತಿ ವೇಗವೇ ಕಾರ್ ಅಪಘಾತಕ್ಕೆ ಕಾರಣ ಆಗಿರಬಹುದು ಎಂದು ಸಬೂಬು ನೀಡಿದ್ದಾರೆ. ನೆಕ್ಸಾನ್ XUV ಕಾರ್ ಗೆ ಸುರಕ್ಷಿತೆ ದೃಷ್ಟಿಯಿಂದಲೇ 6 ಏರ್ಬ್ಯಾಗ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್ ಅಳವಡಿಸಲಾಗಿದೆ.
10.25 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 8 ಸ್ಪೀಕರ್ JBL ಆಡಿಯೊ ಸಿಸ್ಟಮ್, ಡುಯಲ್-ಕ್ಲಚ್ ಗೇರ್ಬಾಕ್ಸ್ಗಾಗಿ ಫ್ಯಾನ್ಸಿ ಶಿಫ್ಟರ್, ರೇರ್ ಎಸಿ ವೆಂಟ್ಸ್ ಸೇರಿದಂತೆ ಹಲವು ಫೀಚರ್ಸ್ ಗಳಿವೆ. 8 ರಿಂದ 8.5 ಲಕ್ಷಕ್ಕೆ ಈ ಕಾರನ್ನು ಖರೀದಿಸಬಹುದಾಗಿದೆ. ಅತ್ಯಾಕರ್ಷಕ ಬಣ್ಣಗಳು ಕೂಡ ಇವೆ.
ಅಕ್ಕ ತಂಗಿಯರ ಆರೈಕೆಯಷ್ಟೇ ಸಾಕೇನಗೆ ಶಕ್ತಿ ಯೋಜನೆ ಬಗ್ಗೆ ಹರ್ಷ ವ್ಯಕ್ತ ಪಡಿಸಿ ವಿಡಿಯೋ ರಿಲೀಸ್ ಮಾಡಿದ – ಸಿದ್ದರಾಮಯ್ಯ