ಇತ್ತೀಚೆಗಷ್ಟೇ ಇಸ್ತ್ರೋ ಸಂಸ್ಥೆಯ ವಿಜ್ಞಾನಿಗಳು (ISRO Scientists) ಭಾರತದ ಚಂದ್ರಯಾನ-3 (Chandrayana-3 launch) ಉಡಾವಣೆಗೂ ಮುನ್ನ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ (TTD visit) ಭೇಟಿ ಕೊಟ್ಟು ತಮ್ಮ ಕಾರ್ಯ ಯಶಸ್ವಿಯಾಗಲಿ ಎಂದು ಮೊರೆ ಇಟ್ಟಿದ್ದರು. ಅಂತೇ ವೈಕುಂಠಾಧಿಪತಿಯ ಕೃಪಾ ಕಟಾಕ್ಷದಿಂದ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾವುಟ ನಿಲ್ಲಿಸಿರುವ ಏಕೈಕ ರಾಷ್ಟ್ರ ಎನ್ನುವ ಖ್ಯಾತಿಗೆ ಒಳಗಾಗಿದೆ.
ಇದು ಭಾರತದ ಅತ್ಯಂತ ಮಾತ್ರವಲ್ಲದೇ ವಿಶ್ವದಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಯಾಕೆಂದರೆ ವಿಜ್ಞಾನವನ್ನು ನಂಬುವವರು ದೇವರು ದಿಂಡರ ಮೇಲೆ ನಂಬಿಕೆ ಇಡುವುದಿಲ್ಲ, ಅವರಿಗೆ ಮಂತ್ರ ಹಾಗೂ ಶಾಸ್ತ್ರಗಳ ಬಗ್ಗೆ ಆಸಕ್ತಿ ಇರುವುದಿಲ್ಲ ಎಂದು ಇದುವರೆಗೂ ಅನೇಕರು ಭಾವಿಸಿದ್ದರು. ಆದರೆ ಅದೆಲ್ಲವೂ ಕೂಡ ಉಲ್ಟಾ ಆಗಿದೆ ತುಂಬಾ ಪ್ರಾಕ್ಟಿಕಲ್ ಆಗಿ ಯೋಚಿಸುವವರು ಕೂಡ ದೇವರು ಎನ್ನುವ ಎನರ್ಜಿಯನ್ನು ನಂಬುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಮೂರು ವರ್ಷಗಳ ನಂತರ ಮತಗಳ ಮರು ಎಣಿಕೆ, ಮತ್ತೆ ಗೆದ್ದ ಗ್ರಾಮ ಪಂಚಾಯತಿ ಸದಸ್ಯೆ.!
G20 ಸಮ್ಮೇಳನಕ್ಕೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ (Britten Prime Minister) ಕರ್ನಾಟಕದ ಅಳಿಯ ರಿಷಿ ಸುನಕ್ (Rishi Sunak) ಅವರು ಕೂಡ ಪತ್ನಿಯೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದದ್ದು ಎಲ್ಲರ ಗಮನ ಸೆಳೆದಿತ್ತು. ಅದೇ ಹಾದಿಯಲ್ಲಿ ಈಗ ಮತ್ತೊಬ್ಬ ಖ್ಯಾತ ಸೆಲೆಬ್ರಿಟಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವುದು ಎಲ್ಲರ ಗಮನ ಸೆಳೆದಿದೆ.
ಭಾರತದಲ್ಲಿ ICC ವರ್ಲ್ಡ್ ಕಪ್ ಟೂರ್ನಿ ಪ್ರಯುಕ್ತ ಸೌತ್ ಆಫ್ರಿಕಾ ತಂಡದ ಆಟಗಾರನಾಗಿ ಭಾರತಕ್ಕೆ ಕಾಲಿಟ್ಟಿರುವ ಹಿಂದೂ ಕ್ರಿಕೆಟ್ ಕೇಶವ್ ಮಹಾರಾಜ್ (South Africa Cricketer Keshav Maharaj) ಅವರು ಕೇರಳದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ (Kerala Anantha Padmanabha Swamy temple visit) ಭೇಟಿಕೊಟ್ಟು ತಮಗೆ ಹಾಗೂ ತಮ್ಮ ತಂಡಕ್ಕೆ ಗೆಲುವಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.
ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್
ಅವರು ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸಾಂಪ್ರದಾಯಿಕವಾಗಿ ರೇಷ್ಮೆ ಪಂಚೆ ಹಾಗೂ ಶಲ್ಯ ತೊಟ್ಟು ಅಪ್ಪಟ ಭಾರತೀಯನಂತೆ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ ಕೇಶವ್ ಮಹರಾಜ್. ಇದನ್ನು ಕಂಡು ಭಾರತೀಯರು ಹೆಮ್ಮೆಯ ಸನಾತನಿ, ಹಿಂದೂ ಧರ್ಮದ ಹೆಮ್ಮೆಯ ಪುತ್ರ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕೇಶವ್ ಮಹಾರಾಜ್ ಅವರ ಪೂರ್ವಿಕರು ಭಾರತೀಯರಾಗಿದ್ದಾರೆ. ಇವರ ಮೂಲ ನೆಲೆ ಉತ್ತರಪ್ರದೇಶದ ಸುಲ್ತಾನ್ ಪುರ ಆದರೆ ದಶಕಗಳ ಹಿಂದೆಯೇ ಇವರ ಕುಟುಂಬ ಸೌತ್ ಆಫ್ರಿಕಾದ ಟರ್ಬನ್ ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ವಿದೇಶದಲ್ಲಿದ್ದರೂ ಕೂಡ ಭಾರತೀಯ ಸಂಪ್ರದಾಯ ಆಚರಣೆಗಳನ್ನು ಆಚರಿಸುವುದನ್ನು ಕುಟುಂಬ ಮರೆತಿಲ್ಲ, ಕೇಶವ್ ಮಹಾರಾಜ್ ಅವರು ಸಹ ಸೌತ್ ಆಫ್ರಿಕಾದಲ್ಲಿ ಹುಟ್ಟಿ ಬೆಳೆದರೂ ಹಿಂದೂತನವನ್ನು ಮೈಗೂಡಿಸಿಕೊಂಡಿದ್ದಾರೆ.
ಶ್ರೀ ರಾಮ ಹಾಗೂ ಆಂಜನೇಯನ ಪರಮ ಭಕ್ತರಾಗಿದ್ದಾರೆ. 2022ರಲ್ಲಿ ಬಹುಕಾಲದ ಗೆಳತಿ ಲೆರೀಶಾ ಮುನ್ಸಾಮಿ ಅವರನ್ನು ಹಿಂದೂ ಸಂಪ್ರದಾಯದಂತೆ ಕೇಶವ್ ಮಹಾರಾಜ್ ವರಿಸಿದ್ದರು ಇದೆಲ್ಲವೂ ಅವರಿಗೆ ಭಾರತ ಹಾಗೂ ಇಲ್ಲಿನ ಸಂಸ್ಕೃತಿ ಬಗ್ಗೆ ಎಷ್ಟು ಗೌರವ ಇದೆ ಎನ್ನುವುದನ್ನು ತೋರಿಸುತ್ತದೆ. ಕೇಶವ ಮಹಾರಾಜ್ ಅವರು ಇದೇ ಮೊದಲಲ್ಲದೆ ಪ್ರತಿ ಸಲ ಭಾರತಕ್ಕೆ ಬಂದಾಗಲೂ ಕೂಡ ತಾವಿದ್ದ ಪ್ರದೇಶದಲ್ಲಿ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.
2022ರಲ್ಲಿ ಭಾರತ ವಿರುದ್ದಧ ಟಿ20 ಸರಣಿಗಾಗಿ ಆಗಮಿಸಿದ್ದರು. ಆಗಲೂ ಕೂಡ ಕೇಶವ್ ಮಹಾರಾಜ್ ಇದೇ ಅನಂತಪದ್ಮನಾಭ ಸ್ವಾಮಿ ಮಂದಿರಕ್ಕೆ ಭೇಟಿ ನೀಡಿದ್ದರು. 2014ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ ವೇಳೆಯಲ್ಲಿ ಬೆಂಗಳೂರಿನ ಬಾಣಸವಾಡಿಯಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಹಿಂದೂ ಕ್ರಿಕೆಟಿಗನ ಪಂದ್ಯಗಳಿಗೆ ಶುಭವಾಗಲಿ ಎಂದು ನಾವು ಹರಸೋಣ.
ರಾಜ್ಯದಾದ್ಯಂತ ನಾವು ಸನಾತನಿಗಳಲ್ಲ ಅಭಿಯಾನ ಶುರು – ಕೆ.ಎಸ್. ಭಗವಾನ್ ನೇತೃತ್ವ