ಚುನಾವಣೆ ಎನ್ನುವ ವಿಷಯವೇ ಬಹಳ ರೋಚಕ. ಹಲವು ಜನರ ಒಪ್ಪಿಗೆ ಪಡೆದು ಜನಪ್ರತಿನಿಧಿತಾಗಿ ಆಯ್ಕೆ ಆಗುವ ಇದು ಅಧಿಕಾರವೂ ಹೌದು ಸೇವೆಯು ಹೌದು. ಗ್ರಾಮ ಪಂಚಾಯಿತಿ ಎಲೆಕ್ಷನ್ ನಿಂದ ಹಿಡಿದು ಲೋಕಸಭಾ ಎಲೆಕ್ಷನ್ ವರೆಗೆ 18 ವರ್ಷ ತುಂಬಿದ ಪ್ರತಿ ವ್ಯಕ್ತಿಯು ಮತದಾನ ಮಾಡಬೇಕು.
ಒಬ್ಬ ವ್ಯಕ್ತಿಯ ಬೆಲೆ ಏನು ಎನ್ನುವುದು ಎಲೆಕ್ಷನ್ ಸಮಯದಲ್ಲಿ ಚೆನ್ನಾಗಿ ಅರ್ಥವಾಗುತ್ತದೆ ಎಂದೇ ಹೇಳಬಹುದು ಯಾಕೆಂದರೆ ಒಂದೇ ಒಂದು ಮತದ ಅಂತರದಲ್ಲಿ ಸೋತವರ ಉದಾಹರಣೆ, ನಮ್ಮ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಇತಿಹಾಸದಲ್ಲಿ ಇದೆ ಈ ಚುನಾವಣೆಯಲ್ಲಿ ಮತದಾನ ಮಾಡುವ ವಿಚಾರ ಒಂದೆಡೆ ಆದರೆ ಮತ ಎಣಿಕೆಯ ವಿಚಾರ ಇನ್ನೊಂದು ರೀತಿ ಕುತೂಹಲ ಹುಟ್ಟಿಸುತ್ತದೆ.
ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್
ಎಲ್ಲರಿಗೂ ಗೊತ್ತಿರುವಂತೆ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳನ್ನು ಭಾರತದ ಚುನಾವಣಾ ಪ್ರಾಧಿಕಾರವು ಅಥವಾ ಪಂಚಾಯಿತಿ ಮಟ್ಟದ ಚುನಾವಣೆಗಳನ್ನು ರಾಜ್ಯ ಚುನಾವಣಾ ಪ್ರಾಧಿಕಾರಗಳನ್ನು ನಡೆಸುತ್ತದೆ ಬಹುತೇಕ ಎಲೆಕ್ಷನ್ಗಳು EVMಮಿಷನ್ ಮೂಲಕ ನಡೆಯುತ್ತದೆ.
ಆದರಿನ್ನೂ ಗ್ರಾಮ ಪಂಚಾಯಿತಿ ಎಲೆಕ್ಷನ್ಗಳಲ್ಲಿ ನಾವು ಮತದಾನ ಚೀಟಿಗೆ ನಮ್ಮ ಒಪ್ಪಿಗೆ ಮುದ್ರೆ ಒತ್ತುವ ಮೂಲಕ ನಮಗೆ ಇಷ್ಟವಾದ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತೇವೆ. ಇವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಕೌಂಟಿಂಗ್ ಮಾಡಿ ಘೋಷಿಸುವ ಈ ರಹಸ್ಯದ ಬಗ್ಗೆ ಎಲೆಕ್ಷನ್ ನಲ್ಲಿ ನಿಂತವರಿಗೆ, ಬೆಂಬಲಿಗರಿಗೆ ಮಾತ್ರವಲ್ಲದೇ ಮತದಾನ ಮಾಡಿದ ವ್ಯಕ್ತಿಗೂ ಕೂಡ ಒಂದು ರೀತಿಯ ತುಡಿತ ಇರುತ್ತದೆ.
ಎಷ್ಟೋ ಬಾರಿ ಬಹಳ ನಿರೀಕ್ಷೆ ಇದ್ದ ವ್ಯಕ್ತಿ ಕೆಲವೇ ಅಂತರಗಳಲ್ಲಿ ಸೋತಾಗ ಮತ್ತೆ ಮರು ಎಣಿಕೆ ಮಾಡಿಸಿ ನೋಡಸಲಾಗುತ್ತದೆ. ಈಗ ಅದನ್ನೇ ಹೊಲುವ ಆದರೆ ಅದಕ್ಕಿಂತ ಸ್ವಲ್ಪ ವಿಭಿನ್ನವಾದ ಪ್ರಕರಣವೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಮೂರು ವರ್ಷಗಳ ನಂತರ ಮತಗಳ ಎಣಿಕೆ ನಡೆದಿದೆ.
ವಿಶೇಷವೇನೆಂದರೆ ಯಾರು ಇವರ ವಿರುದ್ಧ ಕೋರ್ಟಿನಲ್ಲಿ ಈ ಕುರಿತು ದಾವೆ ಹೂಡಿದ್ದರೋ ಅವರ ವಿರುದ್ಧವೇ ಮತ್ತೆ ಗೆದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಮಂಚನಬೆಲೆ ಗ್ರಾಮ ಪಂಚಾಯಿತಿಯ ಗುಂಡ್ಲಕುರ್ಕಿಯ ಬಿಜೆಪಿ ಬೆಂಬಲಿತ ಮಂಜುಳಾ ಎನ್ನುವ ಗ್ರಾಮ ಪಂಚಾಯಿತಿ ಸದಸ್ಯ ಆಶಾ ಕಾರ್ಯಕರ್ತೆಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದರು ಕಳೆದ ಬಾರಿ ನಡೆದ ಗ್ರಾಮ ಪಂಚಾಯಿತಿ ಎಲೆಕ್ಷನ್ ನಲ್ಲಿ ಇವರು ಅತಿ ಹೆಚ್ಚು ಮತ ಪಡೆದು ಗೆದ್ದಿದ್ದರು ಇದರ ವಿರುದ್ಧ ಅನುಮಾನ ವ್ಯಕ್ತಪಡಿಸಿದ ಇವರ ಪ್ರತಿಸ್ಪರ್ಧಿ ಮುನ್ನಿರೆಡ್ಡಿ ಎನ್ನುವರು ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಮಂಜುಳಾ ಅವರು ಆಶಾ ಕಾರ್ಯಕರ್ತೆ, ಸರ್ಕಾರಿ ಸೇವೆಯಲ್ಲಿರುವಾಗ ಎಲೆಕ್ಷನ್ ಗೆ ಭಾಗಿಯಾಗಿದ್ದಾರೆ ಆದ ಕಾರಣ ಇವರ ಸದಸ್ಯತ್ವ ಕೂಡಲೇ ವಜಾ ಮಾಡಬೇಕು. ಗಳಿಸಿರುವ ಮತಗಳ ಮೇಲು ಕೂಡ ಅನುಮಾನ ಇದೆ ಹಾಗಾಗಿ ಇದನ್ನು ಮರಿ ಎಣಿಕೆ ಮಾಡಬೇಕು ಎಂದು ಮೂರು ವರ್ಷಗಳ ಹಿಂದೆ ಕೇಸ್ ಹಾಕಿದ್ದರು.
ಆಶಾ ಕಾರ್ಯಕರ್ತೆಯಾಗಿದ್ದರೂ, ಎಲೆಕ್ಷನ್ ನಲ್ಲಿ ನಿಲ್ಲಬಹುದು ಎಂದು ತೀರ್ಪು ನೀಡಿ ಮತಗಳ ಎಣಿಕೆಗೆ ಕೋರ್ಟ್ ಸೂಚಿಸಿತ್ತು ಕೋರ್ಟ್ ಆದೇಶದಂತೆ ಕಳೆದ ಬುಧವಾರ ತಾಲೂಕು ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ತಹಶೀಲ್ದಾರ್ ಅನಿಲ್ ಅವರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, 7 ಮತಗಳ ಅಂತರದಲ್ಲಿ ಮತ್ತೆ ಮಂಜುಳ ಅವರೇ ಗೆದ್ದಿದ್ದಾರೆ. ಬಿಜೆಪಿ ಪಕ್ಷದ ಕಡೆಯಿಂದ ಅವರಿಗೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.
ಮೊಬೈಲ್ ಕವರ್ ನಲ್ಲಿ ನೋಟನ್ನು ಇಡುವವರು ಹುಷಾರ್ ಆಗಿರಿ.! ಈ ಕಾರಣದಿಂದ ಮೊಬೈಲ್ ಸ್ಪೋ’ಟ ಆಗೋದು ಗ್ಯಾರಂಟಿ…