ಬಹುನಿರೀಕ್ಷಿತ 2023ರ ICC ಏಕದಿನ ವಿಶ್ವಕಪ್ (ICC ODI World Cup-2023) ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳು ಭಾರತಕ್ಕೆ ಬಂದು ಬೀಡು ಬಿಟ್ಟು ತಾಲೀಮು ಶುರು ಮಾಡಿಕೊಂಡಿವೆ. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತ ದೇಶವು ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ.
2023ರ ICC ಏಕದಿನ ವಿಶ್ವಕಪ್ ಟೂರ್ನಿಯು ಇದೇ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದ ವಿವಿಧ ಭಾಗಗಳಲ್ಲಿರುವ 10 ಸ್ಟೇಡಿಯಂಗಳಲ್ಲಿ ಜರುಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಉದ್ಘಾಟನಾ ಪಂದ್ಯ ನಡೆಯಲಿದ್ದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.
ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!
ಇನ್ನು ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು ಬಲಿಷ್ಠ ಆಸ್ಟ್ರೇಲಿಯಾ (NUZ V/S AUS) ವಿರುದ್ದ ಕಣಕ್ಕಿಳಿಯುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತೀಯರಿಗೆ ಈ ಬಾರಿ ಟೂರ್ನಿಯ ಮತ್ತೊಂದು ವಿಶೇಷತೆ ಏನೆಂದರೆ ಬರೋಬ್ಬರಿ 7 ವರ್ಷಗಳ ನಂತರ ಭಾರತದ ನೆಲದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ (IND V/S PAK) ಎದುರಾಗಲಿದೆ.
ಸಕ್ಕತ್ ಹೈಪ್ ಕ್ರಿಯೇಟ್ ಮಾಡುವ ಈ ಮ್ಯಾಚ್ ನೋಡಲು ಭಾರತೀಯರು ಮತ್ತು ಪಾಕಿಸ್ತಾನದವರು ಮಾತ್ರವಲ್ಲದೆ ಇಡೀ ಪ್ರಪಂಚದ ಕ್ರಿಕೆಟ್ ಪ್ರೇಮಿಗಳು ಕೂಡ ಕಾಯುತ್ತಿರುತ್ತಾರೆ. ICC ಏಕದಿನ ವಿಶ್ವಕಪ್ ನಲ್ಲಿ 1992ರಿಂದ ಈವರೆಗೂ ಭಾರತ ಹಾಗೂ ಪಾಕಿಸ್ತಾನ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಈ 7 ಪಂದ್ಯಗಳಲ್ಲೂ ಕೂಡ ಭಾರತವು ಪಾಕಿಸ್ತಾನ ತಂಡವನ್ನು ನೆಲಗಚ್ಚಿಸಿದೆ.
ಎಂಟನೇ ಸಲ ಕೂಡ ಗೆಲುವಿನ ನಗೆ ಬಿರಲು ಭಾರತದ ತಂಡ ಕಾಯುತ್ತಿದ್ದರೆ, ಈ ಬಾರಿಯಾದರೂ ಗೆಲ್ಲುವ ತವಕ ಪಾಕಿ ಪಡೆಗೆ. ಈ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿ ಈ ರಣರೋಚಕ ಹೈವೋಲ್ಟೇಜ್ ಕದನವು ಅಕ್ಟೋಬರ್ 14ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮೊದಲೇ ಪಾಕಿಸ್ತಾನದ ಮಾಜಿ ವೇಗಿ ರಾಣಾ ನಾವೇದ್ ಉಲ್ ಹಸನ್ (Rana naved ul hasan) ವಿವಾದಾತ್ಮಕ ಹೇಳಿಕೆ (controversy statement) ನೀಡಿ ಸುದ್ದಿಯಾಗಿದ್ದಾರೆ.
ಭಾರತೀಯ ಮುಸ್ಲಿಮರ ಕುರಿತಂತೆ ಹೊಸ ಬಾಂಬ್ ಸಿಡಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತದ ಮುಸ್ಮಿಮರು, ಪಾಕಿಸ್ತಾನ ತಂಡಕ್ಕೆ ಸಪೋರ್ಟ್ ಮಾಡುತ್ತಾರೆ ಎನ್ನುವ ಕಾಂ’ಟ್ರ’ವ’ರ್ಸಿ ಹೇಳಿಕೆ ನೀಡಿದ್ದಾರೆ.
ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ
ನಾದೀರ್ ಅಲಿ ಪಾಡ್ಕಾಸ್ಟ್ನಲ್ಲಿ, ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಹಾಗೂ ಪಾಕಿಸ್ತಾನ ತಂಡಕ್ಕೆ ಭಾರತದಲ್ಲಿ ಎಷ್ಟು ಸಪೋರ್ಟ್ ಸಿಗುತ್ತದೆ ಎನ್ನುವ ಪ್ರಶ್ನೆಗೆ ರಾಣಾ, ಭಾರತದಲ್ಲಿ ಪಂದ್ಯ ಆಯೋಜನೆಗೊಂಡಿದೆ ಎಂದರೆ ಖಂಡಿತವಾಗಿಯೂ ಭಾರತವೇ ಫೇವರೇಟ್. ಆದರೆ ಭಾರತದಲ್ಲಿ ನಡೆಯುವ ಪಾಕಿಸ್ತಾನದ ಪಂದ್ಯಗಳಲ್ಲಿ ಭಾರತೀಯ ಮುಸ್ಮಿಮರು ಪಾಕಿಸ್ತಾನ ತಂಡವನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.
ಭಾರತ ಮುಸಲ್ಮಾನರು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಾರೆ. ಯಾಕೆಂದರೆ ನಾನು ಅಹಮದಾಬಾದ್ ಮತ್ತು ಹೈದರಾಬಾದ್ನಲ್ಲಿ ಎರಡು ಸರಣಿಗಳನ್ನು ಆಡಿದ್ದೇನೆ, ಆ ಮ್ಯಾಚ್ ಗಳಲ್ಲಿ ಹೀಗೆ ಮಂದಿ ನಮ್ಮನ್ನು ಬೆಂಬಲಿಸಿದ್ದರು. ಇನ್ನು ಇಂಜಮಾಮ್ ಉಲ್ ಹಕ್ ನಾಯಕತ್ವದಲ್ಲಿ ಇಂಡಿಯನ್ ಸೂಪರ್ ಲೀಗ್ ಆಡುವಾಗಲೂ ಅಲ್ಲಿನ ಮುಸಲ್ಮಾನರು ನಮಗೆ ಸಪೋರ್ಟ್ ಮಾಡಿದ್ದರು ಎಂದು ಹೇಳಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ ರಾಣಾ.