ಈ ಜನರಿಗೆ ಎಷ್ಟು ಹೇಳಿದರು ಪ್ರಯೋಜನವಿಲ್ಲ. ಅದರಲ್ಲೂ ಯುವಜನತೆ ಈ ಬಗ್ಗೆ ಬಹಳಷ್ಟು ತಾತ್ಸರ ತೋರುತ್ತಾರೆ. ಅಲ್ಲೊಂದು ಇಲ್ಲೊಂದು ಈ ರೀತಿಯ ಘಟನೆಗಳು ಬೆಳಕಿಗೆ ಬಂದಾಗ ಎರಡು ದಿನ ಭಯವಿರುತ್ತದೆ. ಆದರೆ ನಂತರ ಮತ್ತೆ ಅದೇ ಹಳೇ ಚಾಳಿ. ಈಗ ನಾವು ಹೇಳುತ್ತಿರುವುದು ಯಾವ ವಿಷಯದ ಬಗ್ಗೆ ಎಂದು ಬಹಳಷ್ಟು ಜನರಿಗೆ ಅರ್ಥ ಆಗಿದೆ.
ಅದೇನೆಂದರೆ, ಮೊಬೈಲ್ ಗೀಳು ಹತ್ತಿರುವುದರಿಂದ ಚಾರ್ಜ್ ಗೆ ಹಾಕಿದ ಮೇಲೂ ಕೂಡ ಮೊಬೈಲ್ ಬಳಸುವ ಗೀಳು ನಮ್ಮಲ್ಲಿ ಬಹುತೇಕ ಈಗ ಎಲ್ಲರೂ ಕೂಡ ಮೊಬೈಲ್ ಗೆ ಅಡಿಕ್ಟ್ ಆಗಿ ಹೋಗಿದ್ದೇವೆ. ನಮ್ಮ ಮನೆಯಲ್ಲಿರುವ ಪುಟ್ಟ ವರ್ಷದ ಮಗು ಕೂಡ ಊಟ ಮಾಡಿಸುವುದಕ್ಕೂ ಮೊಬೈಲ್ ಮೊರೆ ಹೋಗಿದ್ದೇವೆ.
ಅದಕ್ಕೆ ಮೊಬೈಲ್ ಕೊಟ್ಟು ಊಟ ಮಾಡಿಸುವುದರಿಂದ ಹಿಡಿದು ವೃದ್ದರು ಸಮಯ ಕಳೆಯುವುದಕ್ಕೆಂದು ಬಳಸುವುದರವರೆಗೆ ಮೊಬೈಲ್ ಬೇಕು. ನಮಗೆ ಟಿವಿ ಸೀರಿಯಲ್ ನೋಡುವುದಕ್ಕೆ, ಸಿನಿಮಾ ನೋಡುವುದಕ್ಕೆ, ಅಲಾರಾಂ ಇಡುವುದಕ್ಕೆ, ಚಾಟ್ ಮಾಡುವುದಕ್ಕೆ, ಗೇಮ್ ಆಡುವುದಕ್ಕೆ, ಕರೆ ಮಾಡುವುದಕ್ಕೆಹೀಗೆ ಹತ್ತು ಹಲವು ಕಾರಣಗಳು ಎದೆಲ್ಲದಕ್ಕೂ ಈಗ ಮೊಬೈಲ್ ಅವಶ್ಯಕವೂ ಹೌದು, ಅನಿವಾರ್ಯವೂ ಹೌದು.
ನಮ್ಮ ಇದರ ಬಳಕೆ ವಿಪರೀತವಾಗಿರುವುದರಿಂದ ಇದು ಅಡಿಕ್ಷನ್ ಆಗಿರುವುದು ಸಹಾ ಹೌದು. ಕೆಲವರು ಅವಶ್ಯಕತೆಗೆಂದು ಇದನ್ನು ಬಳಸಿದರೆ, ಇನ್ನೂ ಕೆಲವರು ಟೈಮ್ ಪಾಸ್ ಗಾಗಿ ಬಳಸುತ್ತಿದ್ದಾರೆ. ಒಟ್ಟಾರೆಯಾಗಿ ಮೊಬೈಲ್ ನಮ್ಮ ಜೀವನದ ಅತಿ ಮುಖ್ಯ ವಸ್ತುವಾಗಿ ಬಿಟ್ಟಿದೆ. ಅದಕ್ಕೂ ಚಾರ್ಜಿಂಗ್ ಅವಶ್ಯಕತೆ ಇರುತ್ತದೆ ಆ ಸಮಯದಲ್ಲಾದರೂ ಅದರಿಂದ ದೂರ ಇರುವುದು ಒಳ್ಳೆಯದು.
ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ
ಈಗಾಗಲೇ ಸಾಕಷ್ಟು ವೈದ್ಯರು ವಿಜ್ಞಾನಿಗಳು ಇದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮೊಬೈಲ್ ಚಾರ್ಜಿಂಗ್ ಆಗುವಾಗ ಅದರಲ್ಲಿ ರೇಡಿಯೇಶನ್ ಹೆಚ್ಚಿಗೆ ಇರುತ್ತದೆ ಹಾಗಾಗಿ ಚಾರ್ಜಿಂಗ್ ಗೆ ಹಾಕಿ ಮೊಬೈಲ್ ಬಳಸುವುದು ಅದರಲ್ಲೂ ಕರೆ ಮಾಡುವುದು ಚಾರ್ಜಿಂಗ್ ಗೆ ಹಾಕಿ ಹೆಡ್ಫೋನ್ ಹಾಕಿಕೊಳ್ಳುವುದು ಈ ರೀತಿಯ ಕೆಲಸ ಮಾಡಲೇಬೇಡಿ, ಇದರಿಂದ ಪ್ರಾಣಕ್ಕೆ ಕುತ್ತಾಗಬಹುದು ಎಂದು.
ಆದರೆ ಅಪಾಯ ಮನೆ ಬಾಗಿಲಿಗೆ ಬರುವ ತನಕ ಯಾರು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಇದೇ ರೀತಿ ತಪ್ಪಿನಿಂದಾಗಿ 33 ವರ್ಷದ ಮಹಿಳೆ ಪ್ರಾಣ ಕಳೆದುಕೊಳ್ಳುವ ಹಾಗಾಗಿದೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದ ಕೋಕಿಲಾಂಪಾಲ್ ಎನ್ನುವ ಮಹಿಳೆ ಈ ರೀತಿ ದು’ರಂ’ತ ಅಂತ್ಯ ಕಂಡಿದ್ದಾರೆ.
ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!
ಈಕೆಗೆ ಮದುವೆಯಾಗಿದ್ದು, ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃ.ತ ಪಟ್ಟಿದ್ದಾನೆ. ಗಂಡ ಸ.ತ್ತ ನಂತರ ಸಂಸಾರದ ಹೊರೆ ಈಕೆಯ ಮೇಲಿತ್ತು, ಜೀವನ ನಿರ್ವಹಣೆಗಾಗಿ ಮೇಲಕಾಪಿಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು ಬುಧವಾರ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಗೆ ಹಾಕಿ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದರು.
ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕೋಕಿಲಾಂಪಲ್ ಸ್ಥಳದಲ್ಲೇ ಮೃ.ತ ಪಟ್ಟಿದ್ದಾಳೆ. ಅಲ್ಲದೆ ಅಂಗಡಿಯಲ್ಲಿದ್ದ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಸದ್ಯ ಈ ಸಂಬಂಧ ಕೋಕಿಲಂಪಾಲ್ ತಂದೆ ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಬಗ್ಗೆ ತಿಳಿದ ಬಳಿಕ ಇನ್ನಷ್ಟು ಜನರು ಎಚ್ಚರಗೊಳ್ಳಲಿ ಎನ್ನುವುದಷ್ಟೇ ನಮ್ಮ ಆಶಯ.