ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯಡಿ (Annabhagya Scheme) 10kg ಅಕ್ಕಿ ವಿತರಣೆ ಮಾಡುವುದು ಕೂಡ ಒಂದು. ಕಾಂಗ್ರೆಸ್ ಸರ್ಕಾರವು ಕಳೆದ ವಿಧಾನಸಭಾ ಚುನಾವಣೆ ತನ್ನ ಪ್ರಣಾಳಿಕೆಯಲ್ಲಿ (manifesto) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆಯುತ್ತಿರುವ ಪಡಿತರವನ್ನು ಪ್ರತಿ ಸದಸ್ಯನಿಗೆ 10Kg ಗೆ ಏರಿಸುತ್ತೇವೆ ಎಂದು ಭರವಸೆ ನೀಡಿತ್ತು.
ಆದರೆ ನಂತರ ಪರಿಸ್ಥಿತಿ ಬದಲಾಯಿತು ಈ ಬಗ್ಗೆ ಸಾಕಷ್ಟು ಜನರಿಗೆ ಆಕ್ಷೇಪವಿದೆ, ಆದರೆ ಸರ್ಕಾರದ ಅಕ್ಕಿಯನ್ನೇ ವಿತರಿಸುವುದಕ್ಕೆ ಸತತ ಪ್ರಯತ್ನ ಪಡೆಯುತ್ತಿದೆ. ಈಗ ಅದರ ಕುರಿತು ಒಂದು ಮಹತ್ವದ ಅಪ್ಡೇಟ್ ಹೊರ ಬಿದ್ದಿದೆ. ಅದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಅನ್ನಭಾಗ್ಯ ಯೋಜನೆ ಆಕಾಂಕ್ಷಿಗಳು ತಪ್ಪದೇ ಕೊನೆವರೆಗೂ ಓದಿ.
ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು, ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಭಾರತ.!
ಅನ್ನಭಾಗ್ಯ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕನಸಿನ ಯೋಜನೆಗಳಲ್ಲಿ ಒಂದು. ಈ ಯೋಜನೆ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಬೇಕು, ಯಾರು ಕೂಡ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂದು ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬರಿಗೂ ಅನುಕೂಲವಾಗಲಿ ಎಂದು ಒಬ್ಬ ಸದಸ್ಯನಿಗೆ 10Kg ಅಕ್ಕಿ ನೀಡುತ್ತೇವೆ ಎಂದಿದ್ದರು.
ನಂತರ ಅಕ್ಕಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಆದರೆ ನಿರೀಕ್ಷೆಯಂತೆ ಕೇಂದ್ರದಿಂದ ನೆರವು ಸಿಗಲಿಲ್ಲ ನಂತರ ಹರಿಯಾಣ ಮುಂತಾದ ರಾಜ್ಯಗಳ ಮೊರೆ ಹೋಗಬೇಕಾಯಿತು. ಆದರೆ ಅಲ್ಲಿ ಕೂಡ ರಾಜ್ಯ ಸರ್ಕಾರವು ಹೇಳುತ್ತಿರುವ ಬೆಲೆಗೆ ಅಕ್ಕಿ ದೊರಕದ ಕಾರಣ ಕೆಜಿಗೆ 34 ರೂಪಾಯಿಯಂತೆ, ಅಕ್ಕಿ ಬದಲು ಹಣವನ್ನೇ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ರೈತರು ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ಮೊದಲು ನಿಲ್ಲಿಸಿ – ಮುಖ್ಯಮಂತ್ರಿ ಸಿದ್ದರಾಮಯ್ಯ
ಇದಕ್ಕೆ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದರೆ ಕೇಂದ್ರ ಸರ್ಕಾರ ನೀಡುತ್ತಿರುವ ಎಂದಿನ 5kg ಅಕ್ಕಿ ವಿತರಣೆ ಜೊತೆ ಉಳಿದ 5kg ಅಕ್ಕಿಗೆ ಬದಲಾಗಿ 35 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 180 ರೂಪಾಯಿಯನ್ನು ಕುಟುಂಬದ ಮುಖ್ಯಸ್ಥನ ಖಾತೆಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿ, ಅಕ್ಕಿ ದಾಸ್ತಾನು ಲಭ್ಯವಾಗುವವರೆಗೂ ಕೂಡ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಘೋಷಿಸಿತ್ತು.
ಈಗಾಗಲೇ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳು ಹೆಚ್ಚುವರಿ ಹಣವನ್ನು ಕೂಡ ತಮ್ಮ ಖಾತೆಗಳಿಗೆ ಪಡೆದಿದ್ದಾರೆ. ಆದರೆ ರಾಜ್ಯದಲ್ಲಿ ಈ ಬಾರಿ ಬರದ ಪರಿಸ್ಥಿತಿ ಎದುರಾಗಿದೆ ಎಲ್ಲಾ ಕಡೆ ಆಹಾರದ ಸಮಸ್ಯೆ ಇರುವುದರಿಂದ ಹಣ ನೀಡುವ ಬದಲು ಅಕ್ಕಿಯನ್ನು ನೀಡಿದ್ದರೆ ಅನುಕೂಲ ಆಗುತ್ತಿತ್ತು ಎನ್ನುವುದು ಅನೇಕರ ಅಭಿಪ್ರಾಯ.
ಜೆಡಿಎಸ್ & ಮುಸ್ಲಿಂ ನಾಯಕರ ಸಭೆ ಅಂತ್ಯ, ಸಾಮೂಹಿಕ ರಾಜೀನಾಮೆಗೆ ನಿರ್ಧಾರ.!
ಅದಕ್ಕಾಗಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food and civil supply department Minister) ಅವರು ಕೂಡ ಮಾತನಾಡಿ ರಾಜ್ಯ ಸರ್ಕಾರ ಜನತೆಗೆ ವಾಗ್ದಾನ ಮಾಡಿದಂತೆ ಮುಂದಿನ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು ತಿಳಿಸಿದ್ದಾರೆ.
ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಬರ ಪೀಡಿತ ತಾಲೂಕುಗಳಲ್ಲಿ (drought declared thaluk) ಹಣದ ಬದಲು ಅಕ್ಕಿಯನ್ನೇ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಅವರನ್ನು ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದ ಕೆಲ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರ ಮೊದಲಿಗೆ ಬರಪೀಡಿತ ತಾಲ್ಲೂಕುಗಳಿಂದ ಶುರು ಮಾಡಿ ನಂತರ ಕರ್ನಾಟಕದಾದ್ಯಂತ ಇದನ್ನು ಅನ್ವಯಿಸಲಿದೆ ಎಂದು ಊಹಿಸಲಾಗಿದೆ, ಸರ್ಕಾರದ ನಡೆ ಎಂದಿರಲಿದೆ ಕಾದು ನೋಡೋಣ.
ಒಂದೇ ದಿನಕ್ಕೆ 24,000 ರೂಪಾಯಿ ಮೌಲ್ಯದ ಆಸ್ತಿ ನೋಂದಣಿ, ಸರ್ಕಾರಕ್ಕೆ ಬರೋಬ್ಬರಿ 244 ಕೋಟಿ ಆದಾಯ.!