ಕರ್ನಾಟಕದಲ್ಲಿ ನೂತನವಾಗಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು (Congress Government) ನಾಡಿನ ಜನತೆಗಾಗಿ ಇದು ಗ್ಯಾರಂಟಿ ಯೋಜನೆಗಳನ್ನು (Guarantee Scheme) ಘೋಷಿಸಿದೆ. ಹಂತ ಹಂತವಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಜಾರಿಗೆ ಬಂದಿದೆ.
ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಗೆ (head of the family women) ಪ್ರತಿ ತಿಂಗಳು 2,000ರೂ. ಸಹಾಯಧನವನ್ನು ಕುಟುಂಬದ ನಿರ್ವಹಣೆಗಾಗಿ ನೀಡಬೇಕು ಈ ಮೂಲಕ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿ ಲಿಂಗ ಸಮಾನತೆಯನ್ನು ಕಾಪಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ಇನ್ಮುಂದೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೂ ಸಬ್ ರಿಜಿಸ್ಟರ್ ಆಫೀಸ್ ತೆರೆಯಲು ಸರ್ಕಾರದಿಂದ ಆದೇಶ.!
ಆದಾಯ ತೆರಿಗೆ ಪಾವತಿಸುವವರು ಹಾಗೂ ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬದವರನ್ನು ಹೊರತುಪಡಿಸಿ ಉಳಿದ ಎಲ್ಲಾ ಯಾವುದೇ ಪಡಿತರ ಚೀಟಿ ಹೊಂದಿರುವ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಫಲಾನುಭವಿಗಳಾಗಬಹುದು.
ಜಲೈ19 ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾಕೇಂದ್ರಗಳಿಗೆ ಹೋಗಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಕೊಡುವ ಮೂಲಕ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಎಂದು ಸರ್ಕಾರ ಸೂಚನೆ ನೀಡಿತ್ತು.
ಇಲ್ಲಿವರೆಗೆ 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತಿದ್ದು ಜೊತೆಗೆ ಆಗಸ್ಟ್ 30ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ ಗೃಹಲಕ್ಷ್ಮಿ ಯೋಜನೆಗೆ ಹಣ ಬಿಡುಗಡೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare department) ನೀಡಿರುವ ಮಾಹಿತಿ ಪ್ರಕಾರ 6-7 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿರದ ಕಾರಣ ಅಥವಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗಿರದ ಕಾರಣ ಅಥವಾ ಕೊಟ್ಟಿರುವ ದಾಖಲೆಗಳಲ್ಲಿ ಮಾಹಿತಿ ಹೊಂದಾಣಿಕೆ ಆಗದ ಕಾರಣ ಅರ್ಜಿ ಸಲ್ಲಿಸಿದ್ದರು ಸಹಾಯಧನ ಪಡೆಯಲಾಗದೆ ಇವರು ವಂಚಿತರಾಗಿದ್ದಾರೆ.
ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ಪಶು ಸಖಿಯರ ನೇಮಕ.!
ಈ ತಪ್ಪುಗಳನ್ನು ತಿದ್ದುಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಅದನ್ನು ಹೊರತುಪಡಿಸಿ ಉಳಿದ ಎಲ್ಲಾ ಮಹಿಳೆಯರಿಗೂ ಹಣ ವರ್ಗಾವಣೆ ಆಗುತ್ತಿದೆ, RBI ನಿಯಮಾನುಸಾರ ಹಣ ವರ್ಗಾವಣೆ ಆಗುತ್ತಿರುವುದರಿಂದ ಒಂದು ದಿನಕ್ಕೆ ಇಂತಿಷ್ಟೇ ಖಾತೆಗಳಿಗೆ ಹಣ ವರ್ಗಾವಣೆ ಆಗಬೇಕು ಎನ್ನುವ ಮಿತಿ ಇದೆ ಹಾಗಾಗಿ ಖಾತೆಗಳನ್ನು ಪರಿಶೀಲಿಸಿ, ಹಣ ವರ್ಗಾವಣೆ ಮಾಡಲು ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಆಗಸ್ಟ್ ತಿಂಗಳ ಹಣ ಪಡೆದವರೆಲ್ಲರೂ ಕೂಡ ಎರಡನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ. ಈ ಬಗ್ಗೆ ಇರುವ ಪ್ರಮುಖ ಮಾಹಿತಿ ಏನೆಂದರೆ, ಸರ್ಕಾರವು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮಿ ಯೋಜನೆಯ ಸಲುವಾಗಿ ಎರಡು ತಿಂಗಳ ಅದಾಜು ಬಜೆಟ್ 46 ಕೋಟಿ ಹಣವನ್ನು ಬಿಡುಗಡೆ ಮಾಡಿಯಾಗಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಈಗಾಗಲೇ ಮೊದಲನೇ ಕಂತಿನ ಹಣ ಪಡೆದವರು ಎರಡನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ಎಲ್ಲಾ ಮಾಹಿತಿ ಸರಿ ಇದ್ದು ಇನ್ನೂ ಕೂಡ ಹಣ ತಲುಪದೇ ಇರುವವರು ಒಟ್ಟಿಗೆ ಎರಡು ಕಂತಿನ ಹಣವಾದ 4,000 ರೂ. ಪಡೆಯಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.