ಬಹುಭಾಷ ನಟ ಪ್ರಕಾಶ್ ರಾಜ್ (Prakash Raj) ಅವರು ಸಿನಿಮಾ ವಿಚಾರವಾಗಿ ಮಾತ್ರವಲ್ಲದೆ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು (Controversy) ಕೊಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಚರ್ಚೆಯಲ್ಲಿರುವ ನಟರಾಗಿದ್ದಾರೆ. ಹಲವು ವರ್ಷಗಳಿಂದಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪ್ರಕಾಶ್ ರಾಜ್ ಅವರು ದೇಶದ ಆಗುಹೋಗುಗಳ ಬಗ್ಗೆ ತಮ್ಮಅಭಿಪ್ರಾಯ ನಿಲುವುಗಳನ್ನು ತಮಗೆ ತೋಚಿದಂತೆ ನೀಡುತ್ತಿದ್ದಾರೆ.
ಇದರ ವಿರುದ್ಧ ಅನೇಕರಿಗೆ ಅಸಮಾಧಾನ ಇದ್ದು, ಅವರ ಹೇಳಿಕೆಗಳನ್ನು ಖಂಡಿಸಿ ತರಾಟೆಗೆ ತೆಗೆದುಕೊಳ್ಳುವುದು ಇದ್ದೇ ಇದೆ. ಇತ್ತೀಚಿಗೆ ಅವರು ISRO ನಡೆಸಿದ ಚಂದ್ರಯಾನದ ಕುರಿತು ವಿಡಂಬನಾತ್ಮಕವಾಗಿ ಟ್ವೀಟ್ ಮಾಡಿ, ಸನಾತನ ಧರ್ಮದ ಕುರಿತು ಟೀಕೆ ಮಾಡಿ ವಿವಾದ ಎಳೆದುಕೊಂಡಿದ್ದರು. ಈ ಸಮಯದಲ್ಲಿ ಅನೇಕರು ಪ್ರಕಾಶ್ ರಾಜ್ ಅವರನ್ನೇ ಟ್ರೋಲ್ ಮಾಡಿ ಅಸಮಧಾನ ತೋಡಿಕೊಂಡರೆ, ಕೆಲವರು ರಾಜ್ಯಪಾಲರಿಗೆ ಮತ್ತು ಪೊಲೀಸರಿಗೆ ಪ್ರಕಾಶ್ ರಾಜ್ ರ ಆಕ್ಷೇಪಾರ್ಹ ಟ್ವೀಟ್ ಗಳ ವಿರುದ್ಧ ದೂರು ನೀಡಿದ್ದರು.
ಇದೆಲ್ಲಾ ಮುಂದುವರಿದು ಈಗ ಪ್ರಕಾಶ್ ರಾಜ್ ಅವರು ಕೂಡ ಯುಟ್ಯೂಬ್ ಚಾನೆಲ್ ಒಂದರ ಮೇಲೆ ತಮ್ಮ ಜೀವಕ್ಕೆ ಬೆ’ದ’ರಿ’ಕೆ ಇದೆ ಎಂದು ದೂರು ಕೊಡುವ ತನಕ ಪ್ರಕರಣ ಬೆಳವಣಿಗೆಯಾಗಿದೆ. ವಿಕ್ರಮ್ ಟಿವಿ ಎನ್ನುವ ಯೂಟ್ಯೂಬ್ ವಾಹಿನಿಯಲ್ಲಿ (Vikram tv u tube channel) ತಮ್ಮ ಹಾಗೂ ತಮ್ಮ ಕುಟುಂಬದವರ ಜೀವಕ್ಕೆ ಬೆ’ದ’ರಿ’ಕೆ ಹಾಕುವ ವಿಡಿಯೋ ಮಾಡಿದ್ದಾರೆ ಎಂದು ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ವಿಡಿಯೋ ಲಿಂಕ್ ಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಿದ್ದಾರೆ.
ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ. ಇದರ ಕುರಿತು ಮಾಹಿತಿ ನೀಡಿರುವ ಪೊಲೀಸರು ನಟ ಪ್ರಕಾಶ್ ರಾಜ್ ಅವರು ದೂರು ನೀಡಿದ್ದಾರೆ, ಅದನ್ನು ಆಧರಿಸಿ ವಿಕ್ರಮ್ ಟಿ.ವಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
ಪ್ರಕಾಶ್ ರಾಜ್ ಅವರ ನೀಡಿರುವ ದೂರಿನಲ್ಲಿ ಏನಿದೆ ಎಂದು ನೋಡುವುದಾದರೆ, ಆಗಸ್ಟ್ 14ರಂದು ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆ’ದ’ರಿ’ಕೆ ಹಾಕುವ ಸಂದೇಶದ ರೀತಿಯಲ್ಲಿ ವಾಹಿನಿಯವರು 2 ವಿಡಿಯೋ ಅಪ್ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಟ ಹಾಗೂ ನಿರ್ದೇಶಕನಾಗಿರುವ ನಾನು ದೇಶದ ಎಲ್ಲೆಡೆ ಪ್ರವಾಸ ಕೈಗೊಂಡು ವಿವಿಧ ವಿಷಯಗಳ ಕುರಿತಾದ ಚರ್ಚೆಗಳಲ್ಲಿ ಸಂಸ್ಥೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ.
ಸೆ.14ರಂದು ವಿಕ್ರಮ್ ಟಿ.ವಿ. ಯೂಟ್ಯೂಬ್ ಹಾಗೂ ಫೇಸ್ಬುಕ್ನಲ್ಲಿ ನಾನು ನನ್ನ ಕುರಿತು ಮಾಡಿರುವ ಎರಡು ವಿಡಿಯೊ ನೋಡಿದೆ. ಎರಡರಲ್ಲಿಯೂ ನನ್ನ ಜೀವಕ್ಕೆ ಅ’ಪಾ’ಯ’ ಮಾಡುವಂತಹ ಸಂಗತಿಗಳಿದ್ದವು ಎಂದು ಆರೋಪಿಸಿದ್ದಾರೆ. ಬೆದರಿಕೆ ಹಾಕುವ ಸ್ಟಾಲಿನ್, ಪ್ರಕಾಶ್ ರಾಜ್ನಂಥವರನ್ನು ಮುಗಿಸಬೇಕೆ? ಹಿಂದೂಗಳು ಮಾಡಬೇಕಾಗಿರುವುದು ಏನು? ಸನಾತನ ಧರ್ಮ/ಹಿಂದೂಗಳೇ ಮಲಗಿಯೇ ಇರ್ತಿರಾ, ನಿಮ್ಮ ರಕ್ತ ಕುದಿಯುವುದಿಲ್ಲವೇ ಎಂಬಿತ್ಯಾದಿ ಶಬ್ದಗಳನ್ನು ಬಳಸಿ ವಿಡಿಯೊ ಮಾಡಲಾಗಿದೆ.
ಪಡಿತರ ಚೀಟಿ ಫಲಾನುಭವಿಗಳಿಗೆ ರೇಷನ್ ಜೊತೆಗೆ 7,000 ಹಣ ಉಚಿತ, ಈ ಆಫರ್ ಅನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ.
ಈಗಾಗಲೇ ವಿಡಿಯೋ ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ವಿಡಿಯೊದಲ್ಲಿರುವ ಅಂಶಗಳು ಪ್ರಚೋದನಕಾರಿಯಾಗಿದೆ, ಇಂತಹ ವಿಡಿಯೊ ಮಾಡಿರುವ ವಿಕ್ರಮ್ ಟಿವಿ ಯೂಟ್ಯೂಬ್ ಚಾನೆಲ್ ನ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ರಾಜ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.