ಪೂಜೆಗಳಲ್ಲಿ ತೆಂಗಿನಕಾಯಿಯನ್ನು ಒಡೆಯುವ ಪದ್ಧತಿ ನಮ್ಮಲ್ಲಿ ಅನಾದಿಕಾಲದಿಂದಲೂ ಸಹ ಆಚರಣೆಯಲ್ಲಿ ಬಂದಿದೆ ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ವಿವಿಧ ಪೂಜೆಗಳಲ್ಲಿ ದೇವಾನುದೇವತೆಗಳಿಗೆ ವಿಶೇಷವಾಗಿ ಮುಖ್ಯವಾಗಿ ಸಲ್ಲಿಸುವ ನೈವೇದ್ಯ ಎಂದರೆ ಅದು ತೆಂಗು ಹೀಗಾಗಿ ಶುಭ ಕಾರ್ಯ ಯಾವುದೇ ಇರಲಿ ತೆಂಗಿನಕಾಯಿ ಹೊಡೆಯುವುದು ನಾವು ನೋಡುತ್ತಾ ಇರುತ್ತೇವೆ.
ತೆಂಗಿನಕಾಯಿ ಒಡೆಯುವುದು ಆತ್ಮ ಸಮರ್ಪಣೆಗೆ ಸರಿಸಮ ಎಂದು ಭಾವಿಸಿದ್ದಾರೆ ನಮ್ಮ ಹಿಂದೂಗಳು ನಾವು ಹೀಗೆ ಹೊಡೆಯುವ ತೆಂಗಿನಕಾಯಿ ಏನಾದರೂ ಕೆಟ್ಟರೆ ಅ.ಪಚಾರವೇ ಏನಾದರೂ ಆಗುತ್ತದೆಯೇ ಎನ್ನುವ ಹಲವಾರು ಸಂದೇಹಗಳು ಇರುತ್ತದೆ. ತೆಂಗಿನಕಾಯಿ ಹೊಡೆದಾಗ ಅದು ಕೆಟ್ಟಿದ್ದರೆ ಏನಾಗುತ್ತದೆ ಎನ್ನುವ ಸಂದೇಹ ಗೊಂದಲಗಳಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ.
ಇದಕ್ಕೆ ಭಯಪಡುವಂತಹ ಅವಶ್ಯಕತೆ ಇಲ್ಲ ಪೂಜೆ ಮಾಡುವ ವೇಳೆಯಲ್ಲಿ ಪೂಜೆಗೆ ಹೊಡೆದ ತೆಂಗಿನಕಾಯಿ ಕೊಳೆತರೆ ಅಥವಾ ಕೆಟ್ಟರೇ ಯಾವ ಬಗೆಯ ದೋಷವು ಇಲ್ಲ ಅಪಚಾರವೂ ಇಲ್ಲ ಎಂದು ತಜ್ಞರು ಹೇಳುತ್ತಾರೆ ದೇವಾಲಯಗಳಲ್ಲಿ ಭಗವಂತನಿಗೆ ಒಡೆದ ತೆಂಗಿನಕಾಯಿ ಕೆಟ್ಟರೆ ಅದನ್ನು ನೀರಿನಲ್ಲಿ ತೊಳೆದು ಮತ್ತೆ ಅದನ್ನು ಭಗವಂತನಿಗೆ ಅರ್ಪಿಸುತ್ತಾರಂತೆ.
ಹೀಗೇನಾದರು ಆದರೆ ಭಕ್ತರಲ್ಲಿ ಕೆಟ್ಟ ಮನಸ್ಸು ಇಲ್ಲ, ಅದು ತೆಂಗಿನಕಾಯಿಯಲ್ಲಿ ಇದೆ ಎಂದು ಸೂಚಿಸುತ್ತದೆ ಮನೆಯಲ್ಲಿ ಪೂಜೆ ಮಾಡುವಾಗ ಅಥವಾ ಬೇರೆ ಕಡೆಗಳಲ್ಲಿ ಪೂಜೆ ಮಾಡುವಾಗ ಕಾಯಿ ಕೆಟ್ಟಿರುವುದು ಕಂಡುಬರುತ್ತದೆ ಆಗ ಪೂಜೆಯಲ್ಲಿ ಏನು ಅ.ಪಚಾರವಾಗಿದೆ ಎಂದು ಕೆಲವರು ನೊಂದುಕೊಳ್ಳುತ್ತಾರೆ ಆದರೆ ಇದರಿಂದ ಯಾವುದೇ ತೊಂದರೆ ಇಲ್ಲ.
ಕೆಟ್ಟ ಭಾಗವನ್ನು ತೆಗೆದು ಮತ್ತೆ ಕೈಕಾಲುಗಳನ್ನು ತೊಳೆದುಕೊಂಡು ಮತ್ತೆ ಪೂಜೆಯನ್ನು ಪುನಃ ಆರಂಭಿಸಿಕೊಂಡು ಅದನ್ನು ಸಮರ್ಪಿಸಿ. ವಾಹನ ಅಥವಾ ಇನ್ನಿತರ ಸ್ಥಳಗಳಲ್ಲಿ ಒಡೆದ ತೆಂಗಿನ ಕಾಯಿ ಕೊಳೆತಿರುವುದು ಕಂಡುಬಂದರೆ ವಾಹನಕ್ಕೆ ಅಂಟಿರುವ ಅಥವಾ ಬೇರೆ ಯಾವುದಕ್ಕೆ ಆಂಟಿರುವ ದೃಷ್ಟಿ ದೋಷ ನಿವಾರಣೆ ಆಗಿದೆ ಎಂದು ಅರ್ಥ ಮತ್ತು ಕೆಲವರು ಹೇಳುತ್ತಾರೆ ಇದು ಮುಂದಿನ ಜೀವನದ ಶುಭ ಸಂಕೇತ ಎಂದು ಹೇಳುತ್ತಾರೆ.
ಕೆಲವರು ತೆಂಗಿನ ಕಾಯಿ ಸಮಭಾಗವಾಗಿ ಒಡೆಯುವುದರಿಂದ ಮನಸ್ಸಿನಲ್ಲಿರುವ ಇಚ್ಛೆಗಳು ಸಮಾನವಾಗಿ ನೆರವೇರುತ್ತವೆ ಎನ್ನುವುದು ಇದರ ಅರ್ಥ. ತೆಂಗಿನಕಾಯಿಯಲ್ಲಿ ಹೂವು ಬಂದರೆ ನವದಂಪತಿಗಳು ಇದನ್ನು ಒಡೆದರೆ ಅವರಿಗೆ ಬೇಗ ಸಂತಾನ ಭಾಗ್ಯ ದೊರೆಯುತ್ತದೆ ಎನ್ನುವುದು ಇದರ ಅರ್ಥ.
ಒಳ್ಳೆಯ ಮನಸ್ಸಿನಿಂದ ಕಾರ್ಯ ಕರ್ಮವನ್ನು ಮಾಡಿ ಒಡೆದರೆ ಸಾಕು ಅದಕ್ಕೆ ಭಗವದ್ಗೀತೆಯಲ್ಲಿ ಹೇಳಿದ್ದು ಭಕ್ತಿಯಿಂದ ಶ್ರದ್ದೆಯಿಂದ ಏನನ್ನು ಅರ್ಪಿಸಿದರು ಭಗವಂತನಿಗೆ ಅದು ಸಲ್ಲುತ್ತದೆ ಎಂದು ಇಲ್ಲಿ ಭಕ್ತಿಯೇ ಮುಖ್ಯ ವಿನಹ ಭಕ್ತರು ತಂದ ವಸ್ತು ಮುಖ್ಯ ಅಲ್ಲ ಹೀಗೆ ಭಗವಂತನಿಗೆ ಅರ್ಪಿಸಿದ ಯಾವುದೇ ವಸ್ತುವಾಗಲಿ ಅದು ಭಗವಂತನಿಗೆ ಸಲ್ಲುತ್ತದೆ. ಮನಸ್ಸು ಶುದ್ಧವಾಗಿದ್ದರೆ ದೇವರಿಗೆ ಅರ್ಪಿಸುವ ವಸ್ತುಗಳು ಲೆಕ್ಕಕ್ಕೆ ಬರುವುದಿಲ್ಲ, ಮನಸ್ಸು ಶುದ್ಧವಾಗಿದ್ದರೆ ನಾವು ಅರ್ಪಿಸುವಂತಹ ಪೂಜೆ ದೇವರಿಗೆ ಸಲ್ಲುತ್ತದೆ ಹಾಗೆಯೇ ಭಗವಂತನು ನಮ್ಮಗೆ ಆಶೀರ್ವದಿಸುತ್ತಾನೆ.
ಹೀಗಾಗಿ ನಾವು ಅರ್ಪಿಸುವಂತಹ ವಸ್ತುಗಳು ಕೆಟ್ಟಿದ್ದರೆ ಅಥವಾ ಕೊಳೆತು ಹೋಗಿದ್ದರೆ ಇದು ಲೆಕ್ಕಕ್ಕೆ ಬರುವುದಿಲ್ಲ ಎಲ್ಲವೂ ನಮ್ಮ ನಮ್ಮ ಮನಸ್ಸಿನ ಮೇಲೆ ನಿರ್ಧಾರವಾಗುತ್ತದೆ. ಶ್ರದ್ಧೆ ಭಕ್ತಿಯಿಂದ ಮಾಡಿದಂತಹ ಪೂಜೆ ಮಾತ್ರ ದೇವರಿಗೆ ಸಲ್ಲುತ್ತದೆ ಆದ್ದರಿಂದ ಈ ರೀತಿಯ ಸನ್ನಿವೇಶಗಳಿಂದ ನೀವು ಮನಸ್ಸನ್ನು ಹಾಳು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಯಾರಿಗೂ ಕೇಡನ್ನು ಬಯಸದೆ ನಿಮ್ಮಷ್ಟಕ್ಕೆ ನೀವು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋದರೆ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ.