ಇದೀಗ ಬಿಜೆಪಿ ಸರ್ಕಾರ ಬಂದ ನಂತರ ಹಲವಾರು ಅರ್ಹತೆ ಇಲ್ಲದಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವಂತಹ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು. ಈಗಾಗಲೇ ಸಾಕಷ್ಟು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿ ಲಿಸ್ಟನ್ನು ಸಹ ಬಿಡುಗಡೆ ಮಾಡಲಾಗಿದೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ನೀವೇ ಚೆಕ್ ಮಾಡಿಕೊಳ್ಳಬಹುದು. ಯಾವೆಲ್ಲ ರೇಷನ್ ಕಾರ್ಡ್ ಗಳು ರದ್ದಾಗಿದೆ ಎಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಅರ್ಹತೆ ಇಲ್ಲದೆ ಇರುವಂತಹ ಸಾಕಷ್ಟು ರೇಷನ್ ಕಾರ್ಡ್ ಗಳನ್ನು ತನಿಖೆ ನಡೆಸಿ ರದ್ದು ಮಾಡಲಾಗುತ್ತಿದೆ ರದ್ದಾಗಿರುವ ರೇಷನ್ ಕಾರ್ಡ್ ಗಳ ಪಟ್ಟಿ ಸಹ ಬಿಡುಗಡೆ ಮಾಡಲಾಗಿದೆ ಸರ್ಕಾರದ ಕಡೆಯಿಂದ ವೈಟ್ ಬೋರ್ಡ್ ಕಾರು ಇರುವಂತಹವರಿಗೆ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿಯನ್ನು ಸಚಿವರು ಖುದ್ದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿಮ್ಮ BPL ಕಾರ್ಡ್ ರದ್ದಾಗಿದೆ ಎಂದು ತಿಳಿದುಕೊಳ್ಳಲು ಗೂಗಲ್ ಗೆ ಹೋಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ವೆಬ್ ಸೈಟ್ ನಲ್ಲಿ ಹೋಗಿ ಈ ಸೇವೆಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಮೂರು ಲೈನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಇ- ಪಡಿತರ ಚೀಟಿ ಎಂಬ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ ಒಂದು ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ರದ್ದುಗೊಳಿಸಲಾದ ಅಥವಾ ತಡೆ ಹಿಡಿಯಲಾದ ಪಟ್ಟಿ ಎಂಬ ಆಪ್ಷನ್ ಕಾಣುತ್ತದೆ ಇದರ ಮೇಲೆ ಕ್ಲಿಕ್ ಮಾಡಿ ಮೊದಲು ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ಯಾವ ಜಿಲ್ಲೆಯ ಎಂಬುದನ್ನು ಇದರಲ್ಲಿ ಸೆಲೆಕ್ಟ್ ಮಾಡಿಕೊಳ್ಳಿ ನಂತರ ತಾಲೂಕು ಲಿಸ್ಟ್ ಕಾಣುತ್ತದೆ ಅದರಲ್ಲಿ ತಾಲೂಕನ್ನು ಸೆಲೆಕ್ಟ್ ಮಾಡಿಕೊಳ್ಳಿ ಹಾಗೂ ತಿಂಗಳನ್ನು ನೀವು ಸೆಲೆಕ್ಟ್ ಮಾಡಿಕೊಂಡು ವರ್ಷವನ್ನು ಸೆಲೆಕ್ಟ್ ಮಾಡಿಕೊಂಡು ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಕ್ಯಾನ್ಸಲ್ ಆಗಿರುವಂತಹ ಅಥವಾ ರದ್ದಾಗಿರುವಂತಹ ರೇಷನ್ ಕಾರ್ಡ್ ಪಟ್ಟಿ ನಿಮಗೆ ಕಾಣಿಸುತ್ತದೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂಬುದನ್ನು ಸಹ ನೀವು ಚೆಕ್ ಮಾಡಿಕೊಳ್ಳಬಹುದು ಹಾಗೆಯೇ ಪಕ್ಕದಲ್ಲಿ ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆ ಎನ್ನುವಂತಹ ಮಾಹಿತಿಯನ್ನು ನೀಡಲಾಗಿರುತ್ತದೆ.
ಸಾಕಷ್ಟು ಜನರಲ್ಲಿ ಈಗಾಗಲೇ ಗೊಂದಲ ಏರ್ಪಟ್ಟಿರುತ್ತದೆ ತಮ್ಮ ರೇಷನ್ ಕಾರ್ಡ್ ಗಳು ರದ್ದಾಗಿದೆಯೋ ಅಥವಾ ಇಲ್ಲವೋ ಎನ್ನುವ ಎಂದು ಯೋಚನೆ ಮಾಡುತ್ತಿರುತ್ತೀರಿ ಅಂತಹವರು ಈ ಮೇಲ್ಕಂಡ ಹಾಗೆ ತಿಳಿಸಿದಂತಹ ವಿಧಾನದಲ್ಲಿ ನೀವು ಆನ್ಲೈನ್ ನ ಮೂಲಕ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ನಿಮ್ಮ ರೇಷನ್ ಕಾರ್ಡ್ ಯಾವ ಕಾರಣಕ್ಕಾಗಿ ರದ್ದಾಗಿದೆ ಎನ್ನುವುದು ಸಹ ನಿಮಗೆ ತಿಳಿದು ಬರುತ್ತದೆ.
ಸರ್ಕಾರ ಈಗಾಗಲೇ ಹೊರಡಿಸಿರುವಂತಹ ಮಾರ್ಗಸೂಚಿಗಳ ಅನುಸಾರವಾಗಿ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ ಅಂದರೆ ಹೊಸದಾಗಿ ಮಾಡಿಕೊಳ್ಳಲಾಗುತ್ತಿದೆ ಈ ಹಿಂದೆ ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹವರು ಈಗ ಸರ್ಕಾರ ಹೊರಡಿಸಿರುವಂತಹ ಮಾರ್ಗ ಸೂಚಿಗೆ ಅನುಗುಣವಾಗದೆ ಇದ್ದರೆ ಅಂತಹವರ ರೇಷನ್ ಕಾರ್ಡ್ ಬಂದಾಗಲಿದೆ ಅಂತಹವರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.