ನಾವೆಲ್ಲರೂ ಕೂಡ ಫೋನ್ ಬಳಸುತ್ತೇವೆ ಆದರೆ ಕೆಲವೊಮ್ಮೆ ಕೆಲವೊಂದು ಕಾರಣಾಂತರಗಳಿಂದ ಅಥವಾ ನಾವೆಲ್ಲಾದರೂ ಹೊರಗಡೆ ಹೋದಂತಹ ಸಮಯದಲ್ಲಿ ಫೋನ್ ಅನ್ನು ಕಳೆದುಕೊಳ್ಳುತ್ತೇವೆ ಅಥವ ಯಾರಾದರೂ ಅದನ್ನು ಕಳ್ಳತನ ಮಾಡಿರುತ್ತಾರೆ. ಅಂತಹ ಸಮಯದಲ್ಲಿ ಅದು ಮತ್ತೆ ನಿಮಗೆ ಸಿಗಬೇಕು ಎಂದರೆ ಈಗ ನಾವು ಹೇಳುವ ಈ ಒಂದು ವಿಧಾನ ವನ್ನು ಅನುಸರಿಸಿ ಈ ರೀತಿ ಮಾಡುವುದರಿಂದ ನಿಮ್ಮ ಕಳೆದು ಹೋದ ಫೋನ್ ನಿಮಗೆ ಸಿಗುತ್ತದೆ.
ಹಾಗಾದರೆ ಯಾವ ವಿಧಾನವನ್ನು ಅನುಸರಿಸಬೇಕು ಎನ್ನುವುದನ್ನು ಈ ದಿನ ತಿಳಿಯೋಣ. ಕೆಲವೊಮ್ಮೆ ದೊಡ್ಡ ದೊಡ್ಡ ಜಾತ್ರೆ ನಡೆಯುವಂತಹ ಸ್ಥಳಗಳಿಗೆ ಹೋದಾಗ ಅಥವಾ ಹೆಚ್ಚಿನ ಜನ ಸಂಖ್ಯೆ ಇರುವಂತಹ ಸ್ಥಳಗಳಿಗೆ ಹೋದಂತಹ ಸಮಯದಲ್ಲಿ ಕೆಲವೊಮ್ಮೆ ಫೋನ್ ಕಳ್ಳತನ ವಾಗುವುದು ಅಥವಾ ನೀವೇ ಆ ಫೋನ್ ಕಳೆದುಕೊಳ್ಳುವುದು ಸರ್ವೇಸಾಮಾನ್ಯ.
ಆದರೆ ನಿಮ್ಮ ಫೋನ್ ಕಳ್ಳತನವಾಗಿದ್ದರೆ ಅಥವಾ ನೀವೇ ಅದನ್ನು ಹಾಳು ಮಾಡಿಕೊಂಡಿದ್ದರೆ ಅದು ಸಿಕ್ಕವರು ಯಾವತ್ತಿಗೂ ಯಾರಿಗೂ ಸಹ ಹಿಂದಿರುಗಿಸಿ ಕೊಡುವುದಿಲ್ಲ. ಏಕೆಂದರೆ ಅದು ಹೆಚ್ಚಿನ ಬೆಲೆಬಾಳು ತ್ತದೆ ಹಾಗೂ ಅವರಿಗೆ ಅದು ಉಪಯೋಗವಾಗುತ್ತದೆ ಎನ್ನುವ ಉದ್ದೇಶ ದಿಂದ ಯಾರು ಕೂಡ ಸಿಕ್ಕಂತಹ ಯಾವುದೇ ಒಂದು ವಸ್ತುವನ್ನು ಹಿಂದಿರುಗಿಸಿ ಕೊಡುವುದಿಲ್ಲ.
ಆದ್ದರಿಂದ ನೀವೇ ನಿಮ್ಮ ಪ್ರತಿಯೊಂದು ವಸ್ತುಗಳ ಮೇಲೆ ಹೆಚ್ಚಿನ ಗಮನವನ್ನು ವಹಿಸಿ ಅವು ಹಾಳಾಗದಂತೆ ಅದರಲ್ಲೂ ಕಳ್ಳತನ ವಾಗದಂತೆ ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಕಳ್ಳತನ ವಾದರೆ ಯಾರು ಕೂಡ ಹಿಂದಿರುಗಿಸಿ ಕೊಡುವುದೇ ಇಲ್ಲ ಎಂದೇ ಹೇಳಬಹುದು.
ಈ ಒಂದು ಉದ್ದೇಶದಿಂದ ಸ್ಮಾರ್ಟ್ ಫೋನ್ ಕಂಪನಿಯ ವರು ಮೊಬೈಲ್ ತಯಾರು ಮಾಡುವಂತಹ ಸಮಯದಲ್ಲಿಯೇ. ಫೈಂಡ್ ಯುವರ್ ಡಿವೈಸ್ ಎನ್ನುವಂತಹ ಆಯ್ಕೆಯನ್ನು ಮಾಡಿರುತ್ತಾರೆ ಇದರ ಮೂಲಕ ನೀವು ಗೂಗಲ್ ನಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಕೆಲವೊಂದಷ್ಟು ಮಾಹಿತಿಗಳನ್ನು ಹಾಕಿ ನಿಮ್ಮ ಒಂದು ಅಪ್ಲಿಕೇಶನ್ ಅನ್ನು ತಯಾರು ಮಾಡಿಕೊಳ್ಳಬೇಕಾಗುತ್ತದೆ.
ಆನಂತರ ನೀವು ನಿಮ್ಮ ಫೋನ್ ಏನಾದರೂ ಹಾಳಾಗಿದ್ದರೆ ಅಥವಾ ಯಾರಾದರೂ ನಿಮ್ಮ ಫೋನ್ ಕಳ್ಳತನ ಮಾಡಿದ್ದರೆ ಅವರು ಸ್ವಿಚ್ ಆಫ್ ಮಾಡಿದ್ದರೂ ಕೂಡ ನೀವು ನಿಮ್ಮ ಫೋನ್ ನಲ್ಲಿ ಹಾಕಿದಂತಹ ಪಾಸ್ವರ್ಡ್ ಐಡಿಯನ್ನು ಬೇರೆಯವರ ಮೊಬೈಲ್ ನಲ್ಲಿ ಹಾಕಿ ಅದನ್ನು ಟ್ರ್ಯಾಕ್ ಮಾಡಬಹುದಾ ಗಿದೆ ಹೌದು ನಿಮ್ಮ ಫೋನ್ ಎಲ್ಲಿ ಇದೆ ಎನ್ನುವಂತಹ ಮಾಹಿತಿಯನ್ನು ತಿಳಿಸುತ್ತದೆ.
ಅದರಲ್ಲೂ ನಿಮ್ಮ ಮೊಬೈಲ್ ನಲ್ಲಿ ಜಿಪಿಎಸ್ ಆನ್ ಮಾಡಿದರೆ ತಕ್ಷಣ ವೇ ನಿಮ್ಮ ಮೊಬೈಲ್ ಫೋನ್ ಎಲ್ಲಿದೆ ಎನ್ನುವಂತಹ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಕೂಡ ಮುಂದುವರೆದಿದ್ದು ನೀವು ಯಾವುದೇ ರೀತಿಯ ಆಪ್ಷನ್ ಸೆಲೆಕ್ಟ್ ನೋಡಬೇಕೆಂದಿರುತ್ತೀರೋ ಅವುಗಳನ್ನು ಸಹ ಅವರು ಫ್ಲಾಶ್ ಮಾಡಿರುತ್ತಾರೆ.
ಅದರಲ್ಲೂ ಐಎಂಇಐ ನಂಬರ್ ಅನ್ನು ಸಹ ಅವರು ಬದಲು ಮಾಡಿ ಅದನ್ನು ಬೇರೆಯವರಿಗೆ ಮಾರಾಟ ಮಾಡುವ ಆಪ್ಷನ್ ಗಳು ಸಹ ಬಂದಿದೆ ಅದರಲ್ಲೂ ಪೊಲೀಸ್ ಗಳಿಗೆ ನೀವು ಕಂಪ್ಲೇಂಟ್ ಕೊಟ್ಟರು ಅವರು ಕೂಡ ಅದು ಎಲ್ಲಿದೆ ಎನ್ನುವಂತಹ ಮಾಹಿತಿಯು ತಿಳಿಯದ ಹಾಗೆ ಅವರು ಮಾಡಿರುತ್ತಾರೆ.
ಹಾಗಾದರೆ ನಿಮ್ಮ ಮೊಬೈಲ್ ಫೋನ್ ಹಾಳಾದರೆ ತಕ್ಷಣವೇ ನೀವು ಮಾಡಬೇಕಾದಂತಹ ಕೆಲಸಗಳು ಯಾವುದು ಎಂದರೆ.!
• ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡುವುದು ಅದರಲ್ಲೂ ಐಎಂಇಐ ನಂಬರ್ ಕೊಡುವುದು.
• ಆನಂತರ ನೀವು ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿರುವ ಕಂಪ್ಲೇಂಟ್ ಕಾಪಿ ರಿಜಿಸ್ಟ್ರೇಷನ್ ಪಡೆದುಕೊಂಡು ಹೋಗುವುದು ಕಡ್ಡಾಯ. ಹಾಗೇನಾದರೂ ನೀವು ಪಡೆದುಕೊಳ್ಳಲಿಲ್ಲ ಎಂದರೆ ಅವರು ನಿಮ್ಮ ಕಂಪ್ಲೇಂಟ್ ಅನ್ನು ಅರ್ಧದಲ್ಲಿಯೇ ಕೈಬಿಡಬಹುದು.
• ನೀವು ಕೊಟ್ಟಂತಹ ಐಎಂಇಐ ನಂಬರ್ ಅನ್ನು ಸಿಇಐಆರ್ ಎಂಬ ವೆಬ್ಸೈಟ್ ಗೆ ಹೋಗಿ ಲಾಕ್ ಮಾಡುತ್ತಾರೆ ಆನಂತರ ನಿಮ್ಮ ಫೋನ್ ಕಳ್ಳತನ ಮಾಡಿರುವವರು ಯಾವುದೇ ವಿಧಾನ ಅನುಸರಿಸಿದರೆ ಆ ಒಂದು ಫೋನ್ ವರ್ಕ್ ಆಗುವುದಿಲ್ಲ.
• ಈ ಒಂದು ಸಿಇಐಆರ್ ವೆಬ್ಸೈಟ್ ನಲ್ಲಿ ನಿಮ್ಮ ಸ್ಟೇಟ್ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಕೆಲವೊಂದಷ್ಟು ಡೀಟೇಲ್ಸ್ ಗಳನ್ನು ಕೇಳುತ್ತದೆ ಇದನ್ನ ನೀವೇ ನಿಮ್ಮ ಮೊಬೈಲ್ ನಲ್ಲಿ ಅಂದರೆ ಈ ಒಂದು ವೆಬ್ಸೈಟ್ ನಲ್ಲಿ ಮಾಡಬಹುದಾಗಿದೆ.