ಕಾಂಗ್ರೆಸ್ ಪಕ್ಷ ಕೊನೆಗೂ ಆಡಳಿತಕ್ಕೆ ಬಂದಾಯಿತು. ಆದರೆ ಈಗ ಜನರಲ್ಲಿ ಮೂಡಿರುವಂತಹ ಪ್ರಶ್ನೆ ಏನು ಎಂದರೆ ನಿಜವಾಗಿಯೂ ಪ್ರತಿಯೊಬ್ಬರಿಗೂ ಸಹ 2000 ಹಣ ಸಿಗುತ್ತದೆ ಎಂದು. ಹಾಗೇನಾದರೂ ನಿಮಗೆ 2000 ರೂಪಾಯಿ ಹಣ ಸಿಗಬೇಕು ಎಂದರೆ ಜನರು ಏನು ಮಾಡಬೇಕು? ಹಾಗೆಯೇ ಯಾರ್ಯಾರಿಗೆ ಈ 2000 ರೂಪಾಯಿ ಹಣ ಸಿಗುತ್ತದೆ? ತಿಂಗಳಿಗೆ 2,000 ಎಂದರೆ ವರ್ಷಕ್ಕೆ 24,000 ರೂಪಾಯಿ ಸಿಗಬೇಕು ಎಂದರೆ ಏನೆಲ್ಲಾ ಕಂಡೀಶನ್ ಇದೆ? ಮತ್ತು ಯಾವ ಕಾರ್ಡ್ ಇದ್ದರೆ ಈ ಸೌಲಭ್ಯ ಸಿಗುತ್ತದೆ? ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಜನರು ಈಗ ಮೊದಲಿನ ರೀತಿ ಇಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕು ಇಲ್ಲ ಎಂದರೆ ಜನರು ಯಾವುದೇ ರೀತಿಯ ಸಂದರ್ಭಕ್ಕೂ ಬಗ್ಗು ವುದಿಲ್ಲ ಅವರಿಗೆ ಸರಿಯಾಗಿ ವಿಷಯವನ್ನು ತಿಳಿ ಹೇಳುತ್ತಾರೆ. ಕೇಂದ್ರ ಸರ್ಕಾರ ಆಗಿರಬಹುದು ಅಥವಾ ರಾಜ್ಯ ಸರ್ಕಾರ ಆಗಿರಬಹುದು ಜನರಿಗೆ ಯಾವುದೇ ರೀತಿಯಾದಂತಹ ಹಣ ಹಾಕುವಂತಹ ಯೋಜನೆ ಬಂದರೂ ಸಹ DBT ಮೂಲಕ ನೇರವಾಗಿ ಜನರ ಅಕೌಂಟ್ ಗೆ ಬರುತ್ತದೆ. ನೀವು ಯಾವುದೇ ರೀತಿಯಾದಂತಹ ಅಪ್ಲಿಕೇಶನ್ ಅನ್ನು ಹಾಕಬೇಕು ಎನ್ನುವ ಹಾಗೆ ಇಲ್ಲ.
ನಿಮ್ಮ ಆಧಾರ್ ಕಾರ್ಡ್ ಗೆ ಹಾಗೂ ನಿಮ್ಮ ಬ್ಯಾಂಕಿಗೆ NTCI ಲಿಂಕ್ ಆಗಿರುತ್ತದೆಯೋ ಆ ಒಂದು ಅಕೌಂಟ್ ಗೆ ನಿಮ್ಮ ಹಣ ನಿಮ್ಮ ಬಳಿಗೆ ಬಂದು ಸೇರುತ್ತದೆ. ಉದಾಹರಣೆಗೆ ಕಾರ್ಮಿಕರ ಸ್ಕಾಲರ್ಶಿಪ್ ಹಣ ಮತ್ತು ಪಿಎಂ ಕಿಸಾನ್ ಯೋಜನೆಯ ಹಣ. ಹಾಗಾದರೆ ನೀವು ಮೊದಲನೆಯದಾಗಿ ಮಾಡಬೇ ಕಾಗಿರುವಂತಹ ಕೆಲಸ ಏನು ಎಂದರೆ ಆಧಾರ್ ಕಾರ್ಡ್ ಗೆ ಯಾವ ಬ್ಯಾಂಕ್ NPC ಯ ಲಿಂಕ್ ಆಗಿದೆ ಎಂದು ಸೂಕ್ಷ್ಮವಾಗಿ ಈ ಮಾಹಿತಿ ಯನ್ನು ತಿಳಿದುಕೊಳ್ಳಿ.
ಒಂದು ವೇಳೆ ಲಿಂಕ್ ಆಗಿಲ್ಲ ಎಂದರೆ ಅದನ್ನು ಶೀಘ್ರದಲ್ಲಿಯೇ ಲಿಂಕ್ ಮಾಡಿಸಿಕೊಳ್ಳಿ. ಇನ್ನು ಎರಡನೆಯದಾಗಿ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕು. ಎಪಿಎಲ್ ಕಾರ್ಡ್ ಇದ್ದವರಿಗೆ ಈ ಹಣ ಸಿಗುವುದಿಲ್ಲ ಯಾಕೆ ಎಂದರೆ ಮೊದಲೇ ಅವರು ಹೇಳಿರುವ ಪ್ರಕಾರ ಯಾರಿಗೆ ಕಡಿಮೆ ಆದಾಯ ಇರುತ್ತದೆಯೋ ಅಂತವರಿಗೆ ಮಾತ್ರ ಈ 2000 ಹಣ ಎಂದು. ಆದ್ದರಿಂದ ಎಪಿಎಲ್ ಕಾರ್ಡ್ ಹೊಂದಿರುವವರಿಗೆ 2000 ಹಣ ಸಿಗುವುದಿಲ್ಲ.
ಹಾಗಾಗಿ ರೇಷನ್ ಕಾರ್ಡ್ ಹಾಗೂ NPC ಲಿಂಕ್ ಆಗಿದ್ದವರಿಗೆ ಪ್ರತಿ ತಿಂಗಳು 2000 ಹಣ ಸಿಗುತ್ತದೆ. ಈ ಹಣವು ಮನೆಯಲ್ಲಿರುವಂತಹ ಯಜಮಾನನಿಗೆ ಸೇರುತ್ತದೆ ಈ ಒಂದು ಯೋಜನೆಯನ್ನು ಅರ್ಜಿಯ ಮುಖಾಂತರ ಸಲ್ಲಿಸಬೇಕಾ ಅಥವಾ ನೇರವಾಗಿ ನಿಮ್ಮ ಅಕೌಂಟ್ ಗಳಿಗೆ ಹಾಕುತ್ತಾರೆ ಎನ್ನುವಂತಹ ಮಾಹಿತಿ ಇನ್ನು ಹೊರ ಬಂದಿಲ್ಲ ಹಾಗೇನಾ ದರೂ ಬೇರೆ ಮಾಹಿತಿಯನ್ನು ಅವರು ಹೊರಡಿಸಿದರೆ ಆ ಒಂದು ಮಾಹಿತಿಯನ್ನು ಮುಂದಿನ ದಿನದಲ್ಲಿ ನಾವು ತಿಳಿದುಕೊಳ್ಳಬಹುದಾಗಿದೆ.
ಆದ್ದರಿಂದ ಈ ದಿನ ಮೇಲೆ ಹೇಳಿದಂತಹ ಎಲ್ಲಾ ವಿಧಾನಗಳನ್ನು ಅನುಸರಿಸಿ ಅವೆಲ್ಲವನ್ನು ಸಹ ಈಗಲೇ ತಿದ್ದುಪಡಿ ಮಾಡಿಸಿಕೊಳ್ಳು ವುದು ಉತ್ತಮ ಏಕೆ ಎಂದರೆ ಮುಂದಿನ ದಿನದಲ್ಲಿ ಇದರಿಂದ ಸಮಸ್ಯೆ ಉಂಟಾಗಬಾರದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೊದಲೇ ಇದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.