ಅನೇಕ ಜನರು ಕೆಲವು ಉದ್ದೇಶಗಳಿಗಾಗಿ ಬ್ಯಾಂಕ್ಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ. ವಶ್ಯಕತೆ ಇಲ್ಲದಿದ್ದರೂ ಸಾಲ ಪಡೆದು ಖರ್ಚು ಮಾಡುವವರು ಇದ್ದಾರೆ. ನೀವು ಯಾವುದೇ ಸಾಲವನ್ನು ತೆಗೆದುಕೊಂಡರೂ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಇ ಎಂ ಐ ಅನ್ನು ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಆರ್ಥಿಕ ಸಮಸ್ಯೆ, ಉದ್ಯೋಗ ನಷ್ಟ, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಸಾಲ ತೀರಿಸಲು ಆಗುವುದಿಲ್ಲ. ಆದರೆ, ಬ್ಯಾಂಕ್ಗಳಿಗೆ ಇದು ಲೆಕ್ಕಕ್ಕಿಲ್ಲ.
ಇಎಂಐ ಕಟ್ಟದಿದ್ದರೆ ಫೋನ್ ಮಾಡಿ ಕೇಳುತ್ತಾರೆ.
ಕರೆಗಳಿಗೆ ಪ್ರತಿಕ್ರಿಯಿಸದೆ ಎರಡನೇ ಇಎಂಐ ಪಾವತಿಸದಿದ್ದರೆ, ಅವರು ತಕ್ಷಣವೇ ಲೋನ್ ರಿಕವರಿ ಏಜೆಂಟ್ಗಳನ್ನು ಕಳುಹಿಸುತ್ತಾರೆ. ಸಾಲ ವಸೂಲಾತಿ ಏಜೆಂಟ್ಗಳು ಮನೆಯಲ್ಲಿ ಸ್ವೀಕರಿಸಿದ ಇ ಎಂ ಐ ಗಳನ್ನು ಪಾವತಿಸಲು ಒತ್ತಾಯಿಸುತ್ತಾರೆ. ಕೆಲವೊಮ್ಮೆ ಬೆದರಿಕೆಯನ್ನೂ ಹಾಕುತ್ತಾರೆ. ಈ ಕಿರುಕುಳ ತಡೆಯಲಾರದೆ ಕೆಲವರು ಆತ್ಮಹತ್ಯೆಗೂ ಹಿಂಜರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ವಸೂಲಾತಿಗೆ ಕಠಿಣ ನಿಯಮಗಳನ್ನು ರೂಪಿಸಿದೆ. ಎಲ್ಲಾ ಬ್ಯಾಂಕುಗಳು ಈ ನಿಯಮಗಳನ್ನು ಅನುಸರಿಸಬೇಕು.
ಲೋನ್ ವಸೂಲಾತಿ ಏಜೆಂಟ್ ಸಾಲವನ್ನು ತಿರಿಸುವಂತೆ ಬೆದರಿಕೆ ಹಾಕಿದ ಸಮಯದಲ್ಲಿ ಜನರು ಕೆಲವು ಕಾನೂನು ಹಕ್ಕುಗಳನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ.. ಬ್ಯಾಂಕಿನಿಂದ ಮೊದಲ ನೋಟೀಸ್ ಬರುತ್ತದೆ. ಅದರ ನಂತರ ಗ್ರಾಹಕರನ್ನು ಸಾಲ ವಸೂಲಾತಿ ಏಜೆಂಟ್ಗಳು ಸಂಪರ್ಕಿಸುತ್ತಾರೆ. ಆದರೆ ಅನೇಕ ಬಾರಿ ಸಾಲ ವಸೂಲಾತಿ ಏಜೆಂಟ್ಗಳು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಮತ್ತು ಅವರಿಗೆ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿವೆ.
ಸದ್ಯ ಏಜೆಂಟ್ಸ್ ಗಳು ಸಾಲ ವಸೂಲಿ ಮಾಡಲು ಬಂದರೆ ಈ ಎಲ್ಲಾ ನಿಯಮಗಳು ಅನ್ವಯವಾಗುತ್ತದೆ.
*ಹೌದು, ಮೈಕ್ರೋಫೈನಾನ್ಸ್ ಕಂಪನಿಗಳು ತಮ್ಮ ಗ್ರಾಹಕರಿಂದ ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುವ ಹಾಗಿಲ್ಲ. ಷರತ್ತುಗಳ ಆಧಾರದ ಮೇಲೆ ಮೈಕ್ರೋಫೈನಾನ್ಸ್ ಕಂಪನಿಗಳು ಬಡ್ಡಿ ದರಗಳನ್ನು ನಿಗದಿಪಡಿಸಬಹುದು. ಆದರೆ, ಗ್ರಾಹಕರಿಂದ ಹೆಚ್ಚಿನ ಬಡ್ಡಿದರವನ್ನು ಪಡೆಯುವಂತಿಲ್ಲ. ಏಕೆಂದರೆ, ಈ ಶುಲ್ಕಗಳು ಮತ್ತು ದರಗಳು ಕೇಂದ್ರೀಯ ಬ್ಯಾಂಕ್ ನ ನಿಗಾ ವ್ಯಾಪ್ತಿಗೆ ಒಳಪಡುತ್ತವೆ ಎಂದು ಆರ್ ಬೀ ಐ ಹೇಳಿದೆ.
*ರಿಕವರಿ ಏಜೆನ್ಟ್ ಗಳು ಬೆಳಗ್ಗೆ 7 ರಿಂದ ಸಂಜೆ 8 ಗಂಟೆ ಸುಮಯದ ಒಳಗೆ ಹಣವನ್ನು ರಿಕವರಿ ಮಾಡಬಹುದು.
* ಸಾಲ ಹಿಂಪಡೆಯಲು ಕೆಟ್ಟದಾಗಿ ಮೆಸೇಜ್ ಮಾಡುವುದು, ಬಯ್ಯುವುದು, ದೈಹಿಕವಾಗಿ ಅಥವಾ ಮಾನಸಿಕವಾಗಿ ಹಲ್ಲೆ ಮಾಡುವುದು ತಪ್ಪು, ಒಂದು ವೇಳೆ ಹೀಗೇನಾದರು ನಡೆದರೆ, ಗ್ರಾಹಕರು ಕೂಡಲೇ ಅವರ ಮೇಲೆ ದೂರು ಕೊಡಬಹುದು.
*ಸಾಲಗಾರನ ಗೌರವ, ಪ್ರತಿಷ್ಠೆಗೆ ಧಕ್ಕೆ ತಂದರೆ, ಆತನ ವಿರುದ್ಧ ಹಾಗೂ ಬ್ಯಾಂಕ್ ವಿರುದ್ಧ ದೂರು ದಾಖಲಿಸಿ, ಮಾನನಷ್ಟ ಮೊದಕ್ಕಮೆ ಹೂಡಬಹುದು.
*ನಿಗದಿತ ಅವಧಿಗಿಂತ ಮೊದಲು ಸಾಲವನ್ನು ಮರುಪಾವತಿಸುವ ಗ್ರಾಹಕರಿಗೆ ಆರ್ ಬಿ ಐ ತನ್ನ ಮಾರ್ಗಸೂಚಿಗಳಲ್ಲಿ, ಪ್ರತಿ ನಿಯಮಿತ ಘಟಕವು ಸಂಭಾವ್ಯ ಸಾಲಗಾರನ ಬಗ್ಗೆ, ಬೆಲೆ-ಸಂಬಂಧಿತ ಮಾಹಿತಿಯನ್ನು ಫ್ಯಾಕ್ಟ್ಶೀಟ್ ರೂಪದಲ್ಲಿ ಒದಗಿಸಬೇಕಾಗುತ್ತದೆ.
*ಸಾಲಗಾರನು ತನ್ನ ಸಾಲವನ್ನು ಅವಧಿಗೂ ಮುನ್ನ ಮರುಪಾವತಿಸಲು ಬಯಸಿದರೆ, ಆತನ ಮೇಲೆ ಯಾವುದೇ ದಂಡವನ್ನು ವಿಧಿಸಬಾರದು. ಕಂತು ಪಾವತಿಯಲ್ಲಿ ವಿಳಂಬವಾದರೆ, ಮೈಕ್ರೋ ಫೈನಾನ್ಸ್ ಕಂಪನಿಗಳು ಗ್ರಾಹಕರ ಮೇಲೆ ದಂಡವನ್ನು ವಿಧಿಸಬಹುದು. ಆದರೆ ಅದು ಸಂಪೂರ್ಣ ಸಾಲದ ಮೊತ್ತಕ್ಕೆ ಅಲ್ಲ ಮತ್ತು ಕೇವಲ ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಸೀಮಿತವಾಗಿರಬೇಕು’ ಎಂದು ಹೇಳಿದೆ.