https://kannada.news18.com/photogallery/business/cyber-criminals-are-now-trying-to-cheat-income-tax-payers-vdd-995870.html
ಸೈಬರ್ ಕ್ರೈಂ ಅನ್ನೋದು ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿರುವ ಪೆಡಂಭೂತವಾಗಿದೆ. ಸರ್ಕಾರ ಹಾಗೂ ಸಂಸ್ಥೆಗಳು ಈ ಬಗ್ಗೆ ಸಾರ್ವಜನಿಕರನ್ನು ಹಾಗೂ ಗ್ರಾಹಕರನ್ನು ಎಷ್ಟೇ ಜಾಗೃತಿ ಮಾಡುವ ಎಚ್ಚರಿಸುವ ಕೆಲಸ ಮಾಡಿದರೂ ಕೂಡ ಇನ್ನು ಒಂದು ಹೆಜ್ಜೆ ಹೋಗಿ ಈ ಸೈಬರ್ ದಾಳಿಕೋರರು ಹೊಸದೊಂದು ಮಾರ್ಗದಲ್ಲಿ ಜನಸಾಮಾನ್ಯರ ಅಕೌಂಟಿಗೆ ಹಾಗೂ ಅವರ ಅಕೌಂಟ್ ಅಲ್ಲಿ ಇರುವ ಹಣಕ್ಕೆ ಕೈ ಹಾಕುತ್ತಿದ್ದಾರೆ.
ಇದುವರೆಗೆ ನಾನಾ ಸೋಗು ಹಾಕಿಕೊಂಡು ಈ ರೀತಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ, ತನ್ನ ಬಲೆಗೆ ಬೀಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದ ಸೈಬರ್ ಕಳ್ಳರ ಕಣ್ಣು ಈಗ ಆದಾಯ ತೆರಿಗೆ ಮರುಪಾವತಿ ನಿರೀಕ್ಷಿಸುವವರ ಕಡೆ ಬಿದ್ದಿದೆ. ಈ ಬಗ್ಗೆ ಪೂರ್ಣ ಮಾಹಿತಿಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ತೆರಿಗೆ ಪಾವತಿದಾರರನ್ನು ಆದಾಯ ತೆರಿಗೆ ಮರುಪಾವತಿ ಪಡೆಯುವ ವಿಷಯ ಇಟ್ಟುಕೊಂಡು ಈ ರೀತಿ ಸೈಬರ್ ವಂಚಕರು ಯಾಮರಿಸಲು ಪ್ರಯತ್ನ ಪಡುತ್ತಿದ್ದಾರೆ. ಇದರ ಬಗ್ಗೆ ಸೈಬರ್ ತಜ್ಞರು ಆತಂಕವನ್ನು ಹೊರಹಾಕಿದ್ದು, ನಿಮ್ಮ ಮೊಬೈಲ್ ನಂಬರ್ ಗೆ ಇಮೇಲ್ ಮೂಲಕ ಅಥವಾ ಎಸ್ಎಂಎಸ್ ಮೂಲಕ ಯಾವುದೇ ರೀತಿಯ ಲಿಂಕ್ ಅಥವಾ ಮೆಸೇಜ್ ಆದಾಯ ಮರುಪಾವತಿ ಕುರಿತ ವಿಷಯವಾಗಿ ಬಂದರೆ ದಯವಿಟ್ಟು ಅದನ್ನು ಕ್ಲಿಕ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ವಾಟ್ಸಾಪ್ ಮೂಲಕ ಕೂಡ ಈ ರೀತಿ ಆದಾಯ ತೆರಿಗೆ ಪಾವತಿ ಮಾಡುವವರನ್ನು ಯಾಮರಿಸುವ ಪ್ರಯತ್ನಗಳು ಕೂಡ ನಡೆದಿರುವುದು ಬೆಳಕಿಗೆ ಬರುತ್ತಿದೆ. ಹಾಗಾಗಿ ಇದರ ಸುಳಿವು ಸಿಕ್ಕ ತಕ್ಷಣವೇ ಈ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಯಾವುದೋ ಲಿಂಕ್ ಅನ್ನು ಕಳುಹಿಸಿ ಈ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ನಿಮ್ಮ ಇನ್ಕಮ್ ಟ್ಯಾಕ್ಸ್ ಹಣ ರಿಟರ್ನ್ ಆಗುತ್ತದೆ ಎಂದು ಲಿಂಕ್ ಕಳುಹಿಸುತ್ತಾರೆ.
ಅದನ್ನು ನಂಬಿ ನೀವು ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ ಸಂಪೂರ್ಣ ಹಣ ಎಗರಿ ಹೋಗಬಹುದು. ಅಥವಾ ನಿಮ್ಮ ಖಾತೆಯ ಮಾಹಿತಿ ಸೋರಿಕೆ ಆಗಬಹುದು. ಅದರಿಂದ ಯಾವುದೇ ಕಾರಣಕ್ಕೂ ಇಂತಹ ಎಸ್ಎಂಎಸ್ ಅಥವಾ ಲಿಂಕ್ ಅನ್ನು ನಂಬಲು ಹೋಗಬೇಡಿ. ಅದನ್ನು ಸುಲಭವಾಗಿ ಪತ್ತೆ ಹಚ್ಚುವುದು ಹೇಗೆಂದರೆ ಇಮೇಲ್ ಸಂದೇಶಗಳಲ್ಲಿ ಈ ರೀತಿ ನಕಲಿ ಮೆಸೇಜ್ಗಳು ಬಂದಾಗ ಅದರ ಕಾಗುಣಿತಗಳು ತಪ್ಪಾಗಿರಲಿವೆ ಹಾಗೂ ತಪ್ಪು ಧ್ವನಿಯ ರೂಪಾಂತರಗಳನ್ನು ಹೊಂದಿರಲಿದೆ, ಇ-ಮೇಲ್ ಅಲ್ಲಿರುವ ವಿಚಾರವೂ ಕೂಡ ತಪ್ಪಾಗಿರಬಹುದು.
ಅದನ್ನು ಮತ್ತು ಈ ರೀತಿ ಮೆಸೇಜ್ ಬರುವ ಇ-ಮೇಲ್ ಡೊಮೇನ್ ಹೆಸರನ್ನು ತಪ್ಪದೆ ಎಚ್ಚರಿಕೆಯಿಂದ ಪರಿಶೀಲಿಸಿ ನೋಡಿ ಎಂಬ ಎಚ್ಚರಿಕೆಯನ್ನು ಸೈಬರ್ ತಜ್ಞರು ನೀಡಿದ್ದಾರೆ. ಅಪ್ಪಿ ತಪ್ಪಿ ನೀವು ಇವರುಗಳ ಬಲೆಗೆ ಬಿದ್ದರೆ ದೊಡ್ಡ ಮಟ್ಟದಲ್ಲಿ ವಂಚನೆಯನ್ನು ಅನುಭವಿಸಬೇಕಾಗುತ್ತದೆ ಎಂದು ಸಹ ಹೇಳಿದ್ದಾರೆ. ಹೆಚ್ಚಿನ ವಿವರಗಳಿಗೆ ತೆರಿಗೆದಾರರು ಅಧಿಕೃತ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಬಹುದು.
ಈ ರೀತಿ ಏನೇ ಮಾಹಿತಿ ಬೇಕೆಂದರೂ ಕೂಡ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಆದ https://www.incometaxindiaefilling.gov.in ಗೆ ಲಾಗ್ ಆನ್ ಆಗುವ ಮೂಲಕ ನಿಮ್ಮ ತೆರಿಗೆ ಕುರಿತ ಮಾಹಿತಿ ಮತ್ತು ತೆರೆಗೆ ಮರುಪಾವತಿ ಸ್ವೀಕರಿಸದೆ ಇದ್ದಲ್ಲಿ ಅದರ ಸ್ಥಿತಿಯನ್ನು ಅಲ್ಲೇ ಪರಿಶೀಲಿಸಿ ನೋಡಿ.