ನಟ ರಂಗಾಯಣ ರಘು (Rangayana Raghu) ಅವರು ಮುಖ್ಯ ಭೂಮಿಕೆಯಲ್ಲಿರುವ ರಂಗಸಮುದ್ರ ಸಿನಿಮಾವು (Rangasamudra Movie) ಇದೇ ಜನವರಿ 12ರಂದು ತೆರೆ ಕಾಣುತ್ತಿದೆ. ಈ ಸಿನಿಮಾ ಶಿಕ್ಷಣದ ಮಹತ್ವ ತಿಳಿಸುವುದರೊಂದಿಗೆ ರಂಗಭೂಮಿ ಕಲೆ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡ ಜನರ ಮೇಲೆ ಉಂಟಾಗುತ್ತಿರುವ ದೌ’ರ್ಜ’ನ್ಯ ದ ಬಗ್ಗೆ ಬೆಳಕು ಚೆಲ್ಲುವಂತಹ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾಗಿದ್ದು.
ಇತ್ತೀಚಿಗೆ ಟೈಲರ್ ಕೂಡ ರಿಲೀಸ್ ಆಗಿದೆ ಮತ್ತು ಟ್ರೈಲರ್ ರಿಲೀಸ್ ಆದ ದಿನದಿಂದ ಸಿನಿಮಾ ಗಟ್ಟಿ ಕಥೆ ಹೊಂದಿದೆ ಎನ್ನುವ ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡಿದ್ದು ಜನ ಸಿನಿಮಾ ರಿಲೀಸ್ ಆಗುವುದನ್ನು ಕಾಯುತ್ತಿದ್ದಾರೆ. ಬಹಳ ವಿಶೇಷ ಏನೆಂದರೆ ಪುನೀತ್ ರಾಜಕುಮಾರ್ (Puneeth Rajkumar) ಅವರು ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅಷ್ಟರಲ್ಲಿ ಅವರು ಅಗಲಿದ ಕಾರಣ ಆ ಪಾತ್ರಕ್ಕೆ ಈಗ ಅಣ್ಣ ರಾಘವೇಂದ್ರ ರಾಜಕುಮಾರ್ (Raghanna acted in that role insted of Appu) ಅವರು ಜೀವ ತುಂಬಿದ್ದಾರೆ.
ರಂಗಸಮುದ್ರ ಸಿನಿಮಾ ಕಥೆ ಮೂರು ವರ್ಷಗಳ ಹಿಂದಿಯೇ ತಯಾರಾಗಿತ್ತು ಮತ್ತು ಈ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಒಂದು ಪಾತ್ರ ಕೂಡ ಇತ್ತು, ಆ ಪಾತ್ರವನ್ನು ಪುನೀತ್ ರಾಜಕುಮಾರ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡು ಚಿತ್ರತಂಡ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿತ್ತಂತೆ.
ಆಗ ಅದನ್ನು ಕೇಳಿದ ಅಪ್ಪು ರಂಗಾಯಣ ರಘು ಅವರಿಗೆ ಕರೆ ಮಾಡಿ ಸಿನಿಮಾ ಕಥೆ ತುಂಬಾ ಚೆನ್ನಾಗಿದೆ, ನಾನು ಕೂಡ ಮೂರನೇ ತರಗತಿ ಅಷ್ಟೇ ಓದಿರುವುದು ಆದರೆ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸದ ಅರಿವಾಗಬೇಕು ಆ ಕಾರಣಕ್ಕಾಗಿ ಮಕ್ಕಳಿಗೆ ಈ ರೀತಿ ತಿಳಿ ಹೇಳುವ ಪಾತ್ರವಾಗಿರುವುದರಿಂದ ಖಂಡಿತವಾಗಿಯೂ ಆ ಪಾತ್ರವನ್ನು ನಾನೇ ಮಾಡುತ್ತೇನೆ ಎಂದು ಅವರು ಸಾಯುವ ನಾಲ್ಕು ದಿನಗಳ ಹಿಂದಷ್ಟೇ ಕರೆ ಮಾಡಿ ಖುಷಿಖುಷಿಯಾಗಿ ಹೇಳಿಕೊಂಡಿದ್ದರಂತೆ.
ಪುನೀತ್ ರಾಜಕುಮಾರ್ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ, ಮಕ್ಕಳ ಜೊತೆ ಸಿನಿಮಾ ಮಾಡುವುದು ಮಕ್ಕಳ ಜೊತೆ ಸಮಯ ಕಳೆಯುವುದು ಹಾಗೂ ಯುವ ಜನತೆಗೆ ಸಂದೇಶ ನೀಡುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಎಂದರೆ ಹೆಚ್ಚು ಆಸಕ್ತಿ ತೋರಿಸುತಿದ್ದರಂತೆ. ಅವರು ಕೂಡ ಶಾಲೆಗೆ ಹೋಗದ ಕಾರಣ ಶಾಲೆ ಎಷ್ಟು ಮುಖ್ಯ ಎನ್ನುವುದು ಅವರ ಮನಸ್ಸಿನಲ್ಲಿ ಕೊರೆಯುತ್ತಿತ್ತು .
ಆ ನೋ’ವು ಅವರಿಗೆ ಚೆನ್ನಾಗಿ ಗೊತ್ತಿದ್ದ ಕಾರಣ ಪ್ರತಿ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎನ್ನುವುದನ್ನು ಅವರು ಯಾವಾಗಲೂ ಹೇಳುತ್ತಿದ್ದರಂತೆ. ಅಲ್ಲದೆ ರಂಗಾಯಣ ರಘು ಅವರು ಕೂಡ ಪುನೀತ್ ರಾಜಕುಮಾರ್ ಅವರಿಗೆ ಅಪಾರ ಆತ್ಮೀಯರು ರಾಮ್, ಹುಡುಗರು, ರಾಜಕುಮಾರ ಮತ್ತು ಜೇಮ್ಸ್ ಸಿನಿಮಾದವರೆಗೂ ಕೂಡ ಹತ್ತಾರು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ತುಂಬಾ ಚೆನ್ನಾಗಿ ವರ್ಕ್ ಆಗುತ್ತಿತ್ತು.
ರಂಗಸಮುದ್ರ ಸಿನಿಮಾ ರಂಗಾಯಣ ರಘು ಅವರ ವೃತ್ತಿ ಬದುಕಿನಲ್ಲಿ ಬಹಳ ವಿಶೇಷವಾದದ್ದು ಎನ್ನಬಹುದು ಹಾಗಾಗಿ ಅಪ್ಪು ಅವರು ಇದ್ದಿದ್ದರೆ ಈ ಸಿನಿಮಾವನ್ನು ಮತ್ತೊಂದು ಮಟ್ಟಕ್ಕೆ ಪ್ರಮೋಷನ್ ಮಾಡಿ ಖಂಡಿತ ಕೊಂಡೊಯ್ಯುತ್ತಿದ್ದರು. ರಂಗಸಮುದ್ರ ಸಿನಿಮಾ ಟ್ರೈಲರ್ ಎಲ್ಲೆಡೆ ವೈರಲ್ ಆಗುತ್ತಿತ್ತು, ನೀವು ಕೂಡ ಪುನೀತ್ ಅಭಿನಯಿಸಿದ ಪಾತ್ರದಲ್ಲಿ ರಾಘಣ್ಣ ಕಾಣಿಸಿಕೊಂಡು ನ್ಯಾಯ ಒದಗಿಸಿರುವುದನ್ನು ನೋಡಬಹುದು. ಸಿನಿಮಾ ಟೈಲರ್ ನೋಡಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.