ಸೂರ್ಯವಂಶ ಸಿನಿಮಾ (Suryavamsha) ಕನ್ನಡದ ಸೂಪರ್ ಹಿಟ್ ಸಿನಿಮಾ ಕನ್ನಡ ಮಾತ್ರವಲ್ಲದೆ ಬಹುತೇಕ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ಈ ಸಿನಿಮಾ ರಿಮೇಕ್ ಆಗಿದೆ. ಕನ್ನಡದಲ್ಲಿ ಇಂದಿನ ನೇಟಿವಿಟಿಗೆ ತಕ್ಕಂತೆ ಕೊಂಚ ಮಾರ್ಪಾಡಾಗಿದ್ದ ಸಿನಿಮಾ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿತ್ತು.
ತಂದೆ ಮಗನ ಬಾಂಧವ್ಯ, ಪ್ರೀತಿಯ ಬೆಲೆ ಮತ್ತು ಕುಟುಂಬದ ಮಹತ್ವ ಮತ್ತು ಸಾಧಕರಿಗೆ ಸ್ಪೂರ್ತಿ ಕೊಟ್ಟ ಸಿನಿಮಾ ಅದು. ಕನ್ನಡದ ಸೂರ್ಯವಂಶ ಸಿನಿಮಾದಲ್ಲಿ ವಿಷ್ಣುವರ್ಧನ್ (Vishnuvardhan) ಅವರ ನೈಜ ನಟನೆ ಜೊತೆಗೆ ಪದ್ದು ಪಾತ್ರಕ್ಕೆ (Padma Character) ಜೀವ ತುಂಬಿದ ಇಶಾ ಕೊಪ್ಪಿಕರ್ (Isha Koppikar) ಕೂಡ ಬಹಳಷ್ಟು ಹೆಸರು ಪಡೆದರು.
ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಅವರು ಮೊದಲ ಸಿನಿಮಾದಲ್ಲೇ ಕನ್ನಡಿಗರಿಗೆ ಬಹಳ ಹತ್ತಿರವಾಗಿ ಸಿಕ್ಕರೆ ಇಂತಹ ಹೆಂಡತಿ ಸಿಗಬೇಕು, ಸೊಸೆ ಎಂದರೆ ಹೀಗಿರಬೇಕು ಎಂದು ಹೊಗಳಿಕೆ ಗಿಟ್ಟಿಸಿಕೊಂಡಿದ್ದರು. ಕನ್ನಡದಲ್ಲಿ ಸೂರ್ಯವಂಶ ತೆರೆ ಕಂಡು ಎರಡು ದಶಕಗಳು ಕಳೆದಿದ್ದರೂ ಕೂಡ ಸಿನಿಮಾದ ಕೆಲವು ಡೈಲಾಗ್ ಗಳು ಇಂದಿಗೂ ಟ್ರೆಂಡಿಂಗ್ ನಲ್ಲಿ ಇವೆ ಎನ್ನುವುದು ಈ ಸಿನಿಮಾಗಿರುವ ಶಕ್ತಿ.
ಜನಮಾನಸದಲ್ಲಿ ಸೂರ್ಯ ವಂಶ ಸಿನಿಮಾದ ಕಥೆ ಮಾತ್ರವಲ್ಲದೆ ಪಾತ್ರಗಳು ಕೂಡ ಶಾಶ್ವತವಾಗಿ ಅಚ್ಚೊತ್ತಿವೆ. ಬಳಿಕ ನಟಿಸಿದ ಓ ನನ್ನ ನಲ್ಲೆ ಸಿನಿಮಾ ಕೂಡ ಇಶಾ ಕೊಪ್ಪಿಕರ್ ಅವರಿಗೆ ಇಂತಹದ್ದೇ ಹೆಸರು ತಂದು ಕೊಟ್ಟಿತ್ತು. ಪ್ರೀತಿ ಎನ್ನುವ ವಿಷಯದಲ್ಲಿ ಎಷ್ಟು ಸ್ಟ್ರಾಂಗ್ ಆಗಿರಬೇಕು ಎನ್ನುವುದನ್ನು ಉದಾಹರಿಸಿದ್ದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ವಿವಾಹ ಜೀವನದಲ್ಲೀಗ ಬಿರುಗಾಳಿ ಬೀಸಿದೆ.
14 ವರ್ಷಗಳ ದಾಂಪತ್ಯ ಮುರಿದು ಬಿದ್ದಿರುವ ಬಗ್ಗೆ ಸ್ವತಃ ಇಶಾ ಕೊಪ್ಪಿಕರ್ ಪತಿ ಉದ್ಯಮಿ ಟಿಮ್ಮಿ ನಾರಂಗ್ ಅವರು ದೃಢಪಡಿಸಿದ್ದಾರೆ. 2009 ರಲ್ಲಿ ಖ್ಯಾತ ಉದ್ಯಮಿ ಟಿಮ್ಮಿ ನಾರಂಗ್ (Get Married Withu Buisnessman) ಅವರ ಜೊತೆ ಇಶಾ ಕುಪ್ಪಿಕರ್ ಮದುವೆಯಾಗಿದ್ದರು. ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರಿದ್ದಾಗಲೇ ನಟಿ ವೈಯಕ್ತಿಕ ಜೀವನದ ಕಡೆ ಮುಖ ಮಾಡಿದ್ದರು.
ಜಿಮ್ ನಲ್ಲಿ ಪರಿಚಯವಾಗಿದ್ದ ಇವರಿಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗಿ ಎರಡು ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆ ನಡೆದಿತ್ತು. ತೀರ ಇತ್ತೀಚೆಗೆ ಇವರಿಬ್ಬರಿಗೂ ವಿ’ಚ್ಛೇ’ದ’ನವಾಗಿದೆ (divorce announced) ಎನ್ನುವುದರ ಕುರಿತು ಆಗಾಗ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಲೇ ಇತ್ತು.
ಆದರೆ ನಟಿ ಎಲ್ಲೂ ಕೂಡ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರಲಿಲ್ಲ, ಹಾಗಾಗಿ ಅನೇಕರು ಗಾಳಿ ಸುದ್ದಿ ಎಂದುಕೊಂಡಿದ್ದರು. ಬಲವಾದ ಮೂಲಗಳ ಪ್ರಕಾರವಾಗಿ ವರ್ಷಗಳ ಹಿಂದೆಯೇ ಇವರಿಬ್ಬರ ವಿ’ಚ್ಛೇ’ದ’ನ ಆಗಿ ಹೋಗಿದೆ. ನಟಿ ಈಗ ಪತಿ ಮನೆಯಲ್ಲಿ ಇಲ್ಲ ಮಗಳು ಹಾಗೂ ಜೊತೆ ಪ್ರತ್ಯೇಕವಾಗಿದ್ದಾರೆ ಎಂದು ಪ್ರಸಾರವಾಗಿದ್ದ ಸುದ್ದಿಗಳಿಗೆ ಅಂತಿಮವಾಗಿ ಅವರ ಪತಿಯೇ ತೆರೆ ಎಳೆದಿದ್ದಾರೆ.
ಮದುವೆ ನಡೆದ ಒಂದೂವರೆ ವರ್ಷದ ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ನಾವು ವಿ’ಚ್ಛೇ’ದ’ನಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಕಳೆದ ವರ್ಷ ನವೆಂಬರ್ನಲ್ಲಿ ವಿ’ಚ್ಛೇ’ದ’ನ ಸಿಕ್ಕಿತು, ಪರಸ್ಪರ ಸೌಹಾರ್ದಯುತ ಷರತ್ತುಗಳ ಮೇಲೆ ಡಿ’ವೋ’ರ್ಸ್ ಆಗಿದೆ.
ನಾವಿಬ್ಬರೂ ಈಗ ನಮ್ಮ ಜೀವನವನ್ನು ಮುಂದುವರಿಸಲು ಸ್ವತಂತ್ರರಾಗಿದ್ದೇವೆ. ಇಶಾ ತಮ್ಮ ಮಗಳು ರಿಯಾನ್ನಾಳೊಂದಿಗೆ ತನ್ನ ಮನೆಯಿಂದ ಹೊರಬಂದಿದ್ದಾರೆ. ಇದೇ ವಿಚಾರವನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ ಎಂದು ಟಿಮ್ಮಿ ತಿಳಿಸಿದ್ದಾರೆ.