ದನದ ಕೊಟ್ಟಿಗೆ ನಿರ್ಮಾಣ ಬಗ್ಗೆ ರೈತ ಭಾಂಧವರೇ, ರಾಜ್ಯ ಸರ್ಕಾರವು ಸಾಮಾನ್ಯ ಜನರ ಮತ್ತು ಕೂಲಿ ಕಾರ್ಮಿಕರ ಏಳಿಗೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ನಾವು ಇಂದು ರೈತರಿಗೆ ದನದ ಕೊಟ್ಟಿಗೆಯ ಅಥವಾ ಶೆಡ್ ನಿರ್ಮಾಣದ ಬಗ್ಗೆ ಅಂದರೆ ಯಾರ್ಯಾರು ಹಸುಗಳು ಅಥವಾ ಎಮ್ಮೆಗಳನ್ನು ಸಾಕಿದ್ದಾರೋ ಅಥವಾ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆ ಹಿಂದೆ ಇರುವ ಜಾಗದಲ್ಲಿ ಅಥವಾ ಎಲ್ಲಿ ನಿಮಗೆ ಸಂತ ಜಾಗವಿದೆಯೋ ಅಲ್ಲಿ ನೀವು ದನದ ಕೊಟ್ಟಿಗೆಯ ಅಥವಾ ಧನದ ಶೆಡ್ ಅನ್ನು ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ರೈತರಿಗೆ ಮತ್ತು ಆಸಕ್ತರಿಗೆ ಸಹಾಯಧನ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನೇಕ ಯೋಜನೆಗಳ ಪ್ರಯೋಜನವನ್ನು ನೀಡುತ್ತಾ ಬಂದಿದ್ದು ಇದೀಗ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ಸಹಾಯಧನ ನೀಡಲು ಮುಂದಾಗಿದೆ. ಗ್ರಾಮೀಣ ಭಾಗದ ರೈತರಿಗೆ ರೂ 57000 ಗಳ ಧನ ಸಹಾಯದೊಂದಿಗೆ ದನದದೊಡ್ಡಿ ನಿರ್ಮಾಣ ಕಾಮಗಾರಿಗೆ ಆಯುಕ್ತಾಲಯದಿಂದ ಆದೇಶ ಹೊರಡಿಸಿದೆ.
ಈ ಯೋಜನೆಯಡಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯನ್ನು ಜಾರಿಗೊಳಿಸುವುದು ಮತ್ತು ಉಸ್ತುವಾರಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಜವಾಬ್ದಾರಿಯಾಗಿದೆ. ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ಇನ್ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅರ್ಜಿ ಸಲ್ಲಿಸಲು ಯಾವ ಅರ್ಹತೆಯನ್ನು ಹೊಂದಿರಬೇಕು…?
* ಮೊದಲನೆಯದಾಗಿ ಅರ್ಜಿಯನ್ನು ಹಾಕುವ ವ್ಯಕ್ತಿಯು ಕರ್ನಾಟಕದ ವಾಸಿಯಾಗಿರಬೇಕು.
* ಕನಿಷ್ಠ ನಾಲ್ಕು ರಾಸುಗಳನ್ನು ಹೊಂದಿರಬೇಕು.
* ಪಶುಗಳು ಹೊಂದಿರುವ ಸಲುವಾಗಿ ಪಶು ವೈದ್ಯಧಿಕಾರಿಗಳ ಬಳಿ ದೃಢೀಕರಣ ಪತ್ರವನ್ನು ಪಡೆದಿರಬೇಕು.
* ನರೇಗ ಕಾರ್ಡನ್ನು ಹೊಂದಿರಬೇಕು.
* ಅಲ್ಲದೆ ಈ ಮೊದಲೇ ಇದೇ ಯೋಜನೆ ಅಡಿ ಯಾವುದೇ ಲಾಭವನ್ನು ಪಡೆದಿರಬಾರದು.
*ಅಲ್ಲದೆ ಕೊಟ್ಟಿಗೆಯನ್ನು ನಿರ್ಮಾಣ ಮಾಡಲು 13 ಅಡಿ ಅಗಲ 22 ಅಡಿ ಉದ್ದವಿರಬೇಕು.
ಎಲ್ಲಿ ಅರ್ಜಿ ಸಲ್ಲಿಸಬೇಕು..?
ರೈತರು, ಮತ್ತು ಸಣ್ಣ ಕುಟುಂಬದ ಜನರು, ದನ ಕರು ಎಮ್ಮೆ ಹೊಂದಿರುವ, ಆಧಾರ್ ಕಾರ್ಡ್,ವೋಟರ್ ಐಡಿ ಇರುವ ಯಾವುದೇ ಅಭ್ಯರ್ಥಿ ಆರಾಮಾಗಿ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ, ಈ ಮೊದಲೇ ದನದ ಕೊಟ್ಟಿಗೆ ಹೊಂದಿದ್ದರೆ, ಅಂತವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.
ತಮ್ಮ ಹಳ್ಳಿಯ ಗ್ರಾಮ ಪಂಚಾಯತ್ ಗೆ ಹೋಗಿ, ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರ ಹತ್ತಿರ ಪ್ರಸಕ್ತ ಸಾಲಿನ ದನದ ಕೊಟ್ಟಿಗೆ ನಿರ್ಮಾಣದ ಮಾಹಿತಿಯನ್ನು ಪಡೆದು,
* ಆಧಾರ್ ಕಾರ್ಡ್
* ಪಡಿತರ ಚೀಟಿ
* ವೋಟರ್ ಐಡಿ
* ಬ್ಯಾಂಕ್ ಪಾಸಬುಕ್
* ಜಮೀನು ಇದ್ದರೆ ಪಹಣಿ ಪತ್ರ
* ಜಮೀನು ಇಲ್ಲದಿದ್ದರೆ
* ಪಾಸ್ಪೋರ್ಟ್ ಸೈಜ್ ಫೋಟೋಸ್
ಇವೆಲ್ಲವನ್ನೂ ತೆಗೆದುಕೊಂಡು, ಪಂಚಾಯತ್ ಒಳಗೆ ಇರುವ ಕೇಸ್ ವರ್ಕರ್ ಅಥವಾ ಡೇಟಾ ಎಂಟ್ರಿ ಆಪರೇಟರ್ ಹತ್ತಿರ ನೀಡಿ ಅರ್ಜಿಯನ್ನು ತುಂಬಿ, ಅರ್ಜಿಯ ನಕಲು ಪ್ರತಿ ಪಡೆದುಕೊಳ್ಳಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ http:/kissanjyothi.com ಗೆ ಭೇಟಿ ನೀಡಿ.