ಸ್ನೇಹಿತರೆ ಮನೆ ಕಟ್ಟುವುದು ಅಂದರೆ ಎಲ್ಲರ ಕನಸೆ ಹೌದು ಏಕೆಂದರೆ ಇರುವವರೆಗೂ ಒಂದು ಸೂರು ಇರಬೇಕು ಎಂಬುವುದು ಎಲ್ಲರ ಕನಸು ಅದಕ್ಕಾಗಿ ಜನರು ಎಷ್ಟು ವರ್ಷಗಳಿಂದ ಹಣವನ್ನು ಕೂಡಿಟ್ಟು ಒಂದು ಸಣ್ಣಪುಟ್ಟ ವಸ್ತುವನ್ನು ತೆಗೆದುಕೊಳ್ಳದೆ ಕಷ್ಟಪಟ್ಟಿರುತ್ತಾರೆ ಹಾಗೆ ಇಲ್ಲೊಂದು ದೇವಸ್ಥಾನದಲ್ಲಿ ಭೂಮಿಗೆ ಸಂಬಂಧ ಪಟ್ಟ ಎಲ್ಲಾ ತೊಂದರೆಗಳಿಗೂ ಪರಿಹಾರವಾಗುತ್ತದೆ. ಹಾಗಾದರೆ ಯಾವುದು ಈ ದೇವಸ್ಥಾನ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಹೌದು ಸ್ನೇಹಿತರೆ ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ನಷ್ಟು ದೂರದಲ್ಲಿ ಇರುವಂತಹ ಈ ದೇವಸ್ಥಾನ ಕೆ ಆರ್ ಪೇಟೆ ಹತ್ತಿರವಿರುವ ಕಲ್ಲಹಳ್ಳಿಯಲ್ಲಿರುವಂತಹದ್ದು ಇದೆ ಶ್ರೀ ಭೂ ವರಹನಾಥ ಸ್ವಾಮಿ ದೇವಸ್ಥಾನ. ಶ್ರೀ ಭೂವರಹ ಸ್ವಾಮಿಯು ವಿಷ್ಣುವಿನ ಮೂರನೇ ಅವತಾರ ಎಂದೇ ಪ್ರಸಿದ್ಧವಾಗಿದೆ. ಈ ಅವತಾರವು ಭೂಮಿತಾಯಿಯ ರಕ್ಷಣೆಗಾಗಿ ಪಡೆದಿದ್ದು ಎಂದು ಎಲ್ಲರಿಗೂ ತಿಳಿದಿರುವಂತದ್ದು.
ಇದು ಮೈಸೂರಿನ ಸ್ಥಳೀಯ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿಯನ್ನು ಹೊಂದಿದೆ ಅಲ್ಲದೆ ಈ ದೇವಾಲಯಕ್ಕೆ ಬಹಳ ದೂರದಿಂದ ಭಕ್ತಾದಿಗಳು ಬರುತ್ತಲೇ ಇರುತ್ತಾರೆ. ಇನ್ನು ಈ ದೇವಸ್ಥಾನವು ಬೂದು ಬಣ್ಣದ ಕಲ್ಲುಗಳಿಂದ ಕಟ್ಟಲ್ಪಟ್ಟಿದೆ ಅಲ್ಲದೆ ಈ ದೇವಸ್ಥಾನಕ್ಕೆ ಎರಡು ಘಟನೆ ಒಂದು ಗರ್ಭಗುಡಿಯಾಗಿದ್ದು ಇನ್ನೊಂದು ಮುಂದಿನ ಸಭಾಂಗಣ ಎಂದರೆ ತಪ್ಪಾಗದ್ವೋ.
ಅಲ್ಲದೆ ಗರ್ಭಗುಡಿಯೊಳಗೆ ಭೂವರಹನಾದ ಸ್ವಾಮಿಯದೆ ಶಿಲೆಯು ಒಂದು ಏಕಶಿಲೆ ಪಟ್ಟಿದೆ ಅಲ್ಲದೆ ಶ್ರೀ ಭುವರಹ ಸ್ವಾಮಿ ತೊಡೆಯ ಮೇಲೆ ತಾಯಿ ಭೂದೇವಿಯು ಕುಳಿತಿದ್ದು ಕಣ್ಣಿಗೆ ಆನಂದ ನೀಡುತ್ತದೆ ಈ ವಿಶಿಷ್ಟ ವೈಭವದ ಶಿಲೆಯು ಪ್ರಪಂಚದಲ್ಲೇ ವೈಶಿಷ್ಟ್ಯವನ್ನು ಹೊಂದಿದೆ. ಇನ್ನೂ ಈ ಏಕಶಿಲಾ ವಿಗ್ರಹವು 14 ಅಡಿ ಇದೆ ಜೊತೆಗೆ ಭೂದೇವಿಯು ತೊಡೆಯ ಮೇಲೆ ಕುಳಿತಿರುವುದು ಸುಮಾರು 3.5 ಅಡಿಯಷ್ಟು ಉದ್ದವಿದೆ.
ಅಲ್ಲದೆ ಸ್ವಾಮಿಯ ಒಂದು ಕೈಯಲ್ಲಿ ಶಂಖ ಇನ್ನೊಂದು ಕೈಯಲ್ಲಿ ಸುದರ್ಶನವನ್ನು ಇಟ್ಟುಕೊಂಡಿದ್ದಾರೆ ಹಾಗೆ ಎಡಗೈಯಲ್ಲಿ ಭೂದೇವಿಯನ್ನು ಹಿಡಿದುಕೊಂಡು ಬಲಗೈ ಅಭಿಯಾನ ಮುದ್ರೆಯಲ್ಲಿ ಇದೆ. ಸದ್ಯ ಈ ದೇವಸ್ಥಾನವು 2500 ವರ್ಷದ ಪುರಾತನವಾದದ್ದು ಎಂದು ನಂಬಿಕೆ ಇದೆ. ಇಲ್ಲಿ ದೇವರ ಆಸ್ಥಾನಕ್ಕಾಗಿ ಗೌತಮ ಮಹರ್ಷಿಗಳು ತಪಸನ್ನೇ ಮಾಡಿದ್ದರು ಎಂಬುವ ಮಾತು ಕೂಡ ಇದೆ. ಇದರ ಜೊತೆಗೆ ಹೊಯ್ಸಳರ ಅರಸ ಮೂರನೇ ವೀರಬಲ್ಲಾಳರು ಕಟ್ಟಿಸಿದರು ಎಂಬ ಮಾತು ಕೂಡ ಇರುವುದು ಸತ್ಯ.
ಸದ್ಯ ಇತ್ತೀಚಿಗೆ ಜನರು ಈ ದೇವಸ್ಥಾನದ ಬಳಿ ಇರುವ ಮಣ್ಣನ್ನು ಹಾಗೂ ಇಟಗಿಯನ್ನು ಪೂಜೆ ಮಾಡಿಸಿ ತೆಗೆದುಕೊಂಡು ಮನೆ ಕಟ್ಟಲು ಪ್ರಾರಂಭಿಸಿದರೆ ಯಾವುದೇ ವಿಜ್ಞಗಳಿಂದ ಸಮಗ್ರವಾಗಿ ಸುರಕ್ಷಿತವಾಗಿ ವೇಗವಾಗಿ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ ಹಾಗಾಗಿ ಜನರು ಇಲ್ಲಿಂದ ಇಟ್ಟಿಗೆಯನ್ನು ಹಾಗೂ ಮಣ್ಣನ್ನು ಪೂಜೆ ಮಾಡಿಸಿ ತೆಗೆದುಕೊಂಡು ಹೋಗುತ್ತಾರೆ.
ಇನ್ನು ಇಲ್ಲಿಗೆ ಭಕ್ತರು ಬಂದು ಅವರ ಕಷ್ಟಗಳನ್ನು ಇಲ್ಲಿ ಹೇಳಿಕೊಂಡರೆ ಶ್ರೀ ಮಹಾವಿಷ್ಣು ಭೂವರಹನಾದ ಸ್ವಾಮಿಯ ಅವತಾರದಲ್ಲಿ ಇವರ ಕಷ್ಟಗಳನ್ನು ಈಡೇರಿಸುತ್ತಾನೆ ಭಕ್ತರನ್ನು ಕಾಪಾಡುತ್ತಾನೆ ಇಲ್ಲಿ ಮೂಲತಃ ಭೂದೇವಿಯ ರಕ್ಷಣೆಗಾಗಿರುವುದರಿಂದ ಭೂಮಿಗೆ ಸಂಬಂಧಪಟ್ಟ ಎಲ್ಲ ಕಷ್ಟವೋ ಪರಿಹಾರವಾಗುತ್ತದೆ ಎಂಬುದೇ ಇಲ್ಲಿನ ಅರ್ಚಕರು ಹಾಗೂ ಜನರ ನಂಬಿಕೆ. ಇನ್ನು ಈ ದೇವಸ್ಥಾನದ ಮುಂದೆ ಅನ್ನದಾಸುಹಾವಿದ್ದು ಪ್ರತಿನಿತ್ಯ ದೇವಸ್ಥಾನದ ಮಂಡಳಿಯಿಂದ ಪ್ರತಿನಿತ್ಯ ಅನ್ನದಾಸೋಹವು ನಡೆಯುತ್ತದೆ.
ಇದು ವರಹನಾಥ ಸ್ವಾಮಿ ದೇವಸ್ಥಾನವು ಹೇಮಾವತಿ ಜಲಾಶಯದ ತೀರದಲ್ಲಿ ಇರುವುದರಿಂದ ಯಾವಾಗಲೂ ನೀರಿನ ತುಂಬಿರುತ್ತದೆ ಜಲಾಶಯದ ದೃಶ್ಯಾವಳಿವನ್ನು ನೋಡಲು ಅಲ್ಲಿಯೇ ಸಮೀಪದಲ್ಲಿ ಒಂದು ಮಂಟಪವನ್ನು ಮಾಡಿ ಜನರನ್ನು ಜಲಾಶಯದ ವೀಕ್ಷಣೆ ಮಾಡಲು ಅವಕಾಶವನ್ನು ನೀಡಿದ್ದಾರೆ. ಪ್ರಕೃತಿಯ ಸವಿಯನ್ನು ಸವಿಯುತ್ತಾ ದೇವಸ್ಥಾನಕ್ಕೆ ಬಂದು ತಮ್ಮ ಕಷ್ಟಗಳನ್ನು ಈಡೇರಿಸಿಕೊಂಡು ಹೋಗುವುದಕ್ಕೆ ಇದು ಬಹಳ ಸೂಕ್ತವಾದ ಜಾಗ ಎಂದರೆ ತಪ್ಪಾಗದು.