ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತಹ ಎಲ್ಲಾ ಅಂಶಗಳನ್ನು ತಿಳಿದುಕೊಂಡಿರಬೇಕು ಅದರಲ್ಲಿಯು ಜಮೀನಿನ ಪಹಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಜಮೀನು ತಮ್ಮದು ಎಂಬುದಕ್ಕೆ ಒಂದು ಪುರಾವೆ ಇರಬೇಕು ಅದುವೇ ಪಹಣಿ ಅಂದರೆ ಫಾರಂ 16 ಪಹಣಿಯಲ್ಲಿ 1 ರಿಂದ 16 ಕಾಲಂ ಗಳು ಇರುತ್ತವೆ ಪ್ರತಿಯೊಂದು ಕಾಲಂ ಗಳು ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುತ್ತದೆ.
ಪಹಣಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಕೃಷಿಗೆ ಸಂಬಂಧಿಸಿದಂತಹ ಎಲ್ಲ ದಾಖಲೆಗಳನ್ನು ಕೈ ಬರಹದಲ್ಲಿ ಇದ್ದ ಕಾರಣ ಸಾಮಾನ್ಯವಾಗಿ ತಪ್ಪುಗಳು ಆಗುತ್ತಿದ್ದವು. ಆದ್ದರಿಂದ ನಮ್ಮ ಜಮೀನಿನ ಪಹಣಿಯಲ್ಲಿ ಇರುವ ವಿಷಯಗಳು ಹಾಗೂ ಸರ್ವೆ ಆಫೀಸ್ ನಲ್ಲಿ ಇರುವಂತಹ ವಿಷಗಳಿಗೂ ತಾಳೆ ಹಾಕಿ ನೋಡಿದರೆ ರೈತರು ಕೆಲವೊಂದು ಗೊಂದಲಗಳಿಂದ ತಮ್ಮ ಜಮೀನಿನ ಪಹಣಿ ಕೂಡಿರುತ್ತಿತ್ತು.
ಪಹಣಿಯಲ್ಲಿ ಸರ್ವೆ ನಂಬರ್ ಅಥವಾ ಹಿಸ್ಸಾ ನಂಬರ್ ತಪ್ಪಾಗಿ ಬಂದಿರುತ್ತದೆ ಹೀಗೆ ತಪ್ಪಾಗಿ ಬಂದಿರುವ ಮಾಹಿತಿಗಳನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬೇಕು ಎಂಬುದು ಇಲ್ಲಿ ತಿಳಿಸುತ್ತಿದ್ದೇವೆ. ಕೃಷಿಕರಾದವರು ಈ ಸರ್ವೇ ನಂಬರ್ ನ ಅಂದರೆ ತಮ್ಮ ಜಮೀನಿಗೆ ಸಂಬಂಧಪಟ್ಟಂತಹ ಪಹಣಿಯ ಬಗ್ಗೆ ತಿಳಿದುಕೊಳ್ಳದೆ ಹೋದರೆ ಕೆಲವೊಮ್ಮೆ ಇದರಿಂದ ತೊಂದರೆಗಳು ಉಂಟಾಗಬಹುದು.
ತಪ್ಪಾದಂತಹ ಪಹಣಿಯಲ್ಲಿ ಹೊಸದಾಗಿ ತಿದ್ದುಪಡಿ ಮಾಡಿಕೊಳ್ಳಲು ನೀವು ಕೆಲವೊಂದು ದಾಖಲಾತಿಗಳನ್ನು ಮುಖ್ಯವಾಗಿ ಒದಗಿಸಬೇಕಾಗುತ್ತದೆ ಅವುಗಳು ಯಾವುದೆಂದು ನೋಡುವುದಾದರೆ ಸದರಿ ವರ್ಷದ ಪಹಣಿ ಹಾಗೂ ಹಳೆಯ ಕಾಲದ ಕೈಬರಹದ ಪಹಣಿಗಳು ಬೇಕಾಗುತ್ತದೆ ಈ ಪಹಣಿಗಳನ್ನು ನೀವು ನಿಮ್ಮ ತಹಶೀಲ್ದಾರ್ ಆಫೀಸ್ ನ ಮೂಲಕ ತೆಗೆದುಕೊಳ್ಳಬಹುದು ಹಾಗೆಯೇ ಆಧಾರ್ ಕಾರ್ಡ್, ನಿಮ್ಮ ಜಮೀನಿನ ನಕ್ಷೆ ಬೇಕಾಗುತ್ತದೆ ಜಮೀನಿಗೆ ಸಂಬಂಧಿಸಿದ ಎಲ್ಲಾ ಮೋಟೇಶನ್ ಪ್ರತಿಗಳು ಸಹ ಬೇಕಾಗುತ್ತದೆ ಈ ಮೋಟೇಶನ್ ಕಾಫಿಗಳು ಭೂಮಿ ಕೇಂದ್ರದಲ್ಲಿ ಸಿಗುತ್ತದೆ.
ಸದರಿ ಅರ್ಜಿಗಳನ್ನು ಪರಿಶೀಲನೆ ಮಾಡಲು ಮತ್ತು ಮುಂದಿನ ಕ್ರಮಕ್ಕಾಗಿ ಸರ್ವೇ ಆಫೀಸಿಗೆ ಕಳುಹಿಸಲಾಗುತ್ತದೆ ಸರ್ವೆ ಆಫೀಸ್ ಅಧಿಕಾರಿಗಳು ಅರ್ಜಿಯನ್ನು ಪರಿಶೀಲನೆ ಮಾಡಿ ಅದನ್ನು ಸದರಿ ಕಡತ ನಿರ್ವಹಿಸಲು ಅದನ್ನು ಕೆಳಹಂತದ ಅಧಿಕಾರಿಗಳಿಗೆ ನಿರ್ದೇಶಸುತ್ತದೆ ಸದರಿ ಅಧಿಕಾರಿಯು ಕಡತವನ್ನು ಕೂಲಂಕುಶವಾಗಿ ತಿಳಿದುಕೊಂಡು ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿ ಇರುವ ಎಲ್ಲಾ ಹಳೆಯ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಾರೆ.
ಕೆಲವೊಂದು ಸಂದರ್ಭಗಳಲ್ಲಿ ಬಹು ಮಾಲೀಕರ ಜೊತೆ ಸ್ಥಳ ಪರಿಶೀಲನೆಗೆ ಸಹ ಬರಬಹುದು ಹೀಗೆ ವಾಸ್ತವಿಕ ಹಾಗೂ ಹಳೆಯ ದಾಖಲೆಗಳ ಆಧಾರದ ಮೇಲೆ ವರದಿಯನ್ನು ಬರೆದು ಮುಂದಿನ ಕಾರ್ಯಕ್ರಮಕ್ಕಾಗಿ ಕಳುಹಿಸಿಕೊಡಲಾಗುತ್ತದೆ ಹೀಗೆ ಕಡತವು ನೇರವಾಗಿ ಭೂಮಿ ಕೇಂದ್ರಕ್ಕೆ ಹೋಗಿ ಅಲ್ಲಿ ಕಾರ್ಯಕರ್ತ ಗೊಳ್ಳುತ್ತದೆ ಇಲ್ಲಿ ಪಹಣಿಯಲ್ಲಿ ಇರುವ ತಿದ್ದುಪಡಿ ಕಾರ್ಯ ಮುಕ್ತಾಯಗೊಳ್ಳುತ್ತದೆ.
ಒಂದು ವೇಳೆ ನೀವು ಪಹಣಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಹಾಕಿದಾಗ ಅಧಿಕಾರಿಗಳು ತಿರಸ್ಕರಿಸಿದರೆ ಸಂಬಂಧಪಟ್ಟಂತಹ ರೈತರಿಗೆ ಕೈಬರಹದ ಮೂಲಕ ಕಳುಹಿಸಲಾಗುತ್ತದೆ. ಇಂತಹ ಕಾರಣಗಳಿಂದ ನಿಮ್ಮ ಜಮೀನಿಗೆ ಸಂಬಂಧಪಟ್ಟಂತಹ ಎಲ್ಲ ದಾಖಲಾತಿಗಳನ್ನು ಪತ್ರಗಳನ್ನು ನೀವು ನಿಮ್ಮ ಬಳಿ ಸೇಫಾಗಿ ಇಟ್ಟುಕೊಳ್ಳಬೇಕು.
ನಿಮ್ಮ ಜಮೀನಿಗೆ ಸಂಬಂಧಪಟ್ಟ ಹಾಗೆ ಪಹಣಿ ತಿದ್ದುಪಡಿಯನ್ನು ನೀವು ಅರ್ಜಿ ಸಲ್ಲಿಸಿ ಮಾಡಿಸಿಕೊಳ್ಳಬಹುದು ಬೇಕಾದಂತಹ ಮುಖ್ಯ ದಾಖಲಾತಿಗಳನ್ನು ಒದಗಿಸಿ ಯಾವುದಾದರೂ ತಿದ್ದುಪಡಿ ಮಾಡಿಸಿಕೊಳ್ಳುವ ಕೆಲಸವನ್ನು ನೀವು ನಿರ್ವಹಿಸಿಕೊಳ್ಳಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.