ನಟ ಅರ್ಜುನ್ ಸರ್ಜಾ (Arjun Sarja) ದಕ್ಷಿಣ ಕನ್ನಡದ ಹೆಸರಾಂತ ನಟ. ಡಾ. ರಾಜ್ ಕುಮಾರ್ ಸಮಕಾಲಿನ ನಟ ಶಕ್ತಿಪ್ರಸಾದ್ (Shakthi Prasad) ಅವರ ಪುತ್ರ. ಬಾಲ ನಟನಾಗಿಯೇ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ಇವರು ನಂತರದಲ್ಲಿ ಪ್ರತಾಪ್, ಪ್ರೇಮಾಗ್ನಿ, ಅಳಿಮಯ್ಯ ಸಿನಿಮಾಗಳ ಮೂಲಕ ಮನೆ ಮನೆ ಮಾತಾದರು.
ಆಂಜನೇಯನ ಪರಮ ಭಕ್ತರಾದ ಇವರು ಆಕ್ಷನ್ ಕಿಂಗ್ (Action King) ಎಂದೆ ಹೆಸರು ಪಡೆದರು. ಕನ್ನಡದಲ್ಲಿ ಹೀರೋ ಆಗಿ ಮಿಂಚುತ್ತಿದ್ದ ಇವರಿಗೆ ನಿಧಾನವಾಗಿ ತಮಿಳಿನಲ್ಲೂ ಕೂಡ ಅವಕಾಶಗಳು ಬಂತು. ಕಾಲಿವುಡ್ ನಲ್ಲಿ (Collywood) ಪೂರ್ತಿ ಪ್ರಮಾಣದಲ್ಲಿ ತೊಡಿಸಿಕೊಂಡ ಇವರು ಅಲ್ಲಿನ ಟಾಪ್ ಹೀರೋಗಳಲ್ಲಿ ಒಬ್ಬರಾಗಿ ಮಿಂಚಿದರು ಇಂದಿಗೂ ಕೂಡ ಅಲ್ಲೇ ನೆಲೆ ಕಂಡುಕೊಂಡಿರುವ ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಬಹುಭಾಷಾ ಕಲಾವಿದನೆನಿಸಿದ್ದಾರೆ.
ನಟ ಅರ್ಜುನ್ ಸರ್ಜಾ ಅವರು ಸಿನಿಮಾ ಬಗ್ಗೆ ಅತ್ಯಂತ ಒಲವು ಹೊಂದಿದ್ದು, ಸಿನಿಮಾ ಮೂಲದವರಾದ ಆಶಾ ರಾಣಿ (Wife Asharani also actress ) ಅವರನ್ನೇ ವಿವಾಹವಾಗಿದ್ದಾರೆ. ಅವರದ್ದು ಕಲಾವಿದರ ಕುಟುಂಬ ಎಂದೇ ಹೇಳಬಹುದು ಅಲ್ಲದೆ ತಮ್ಮ ಸಹೋದರಿಯ ಮಕ್ಕಳಾದ ಚಿರಂಜೀವಿ ಸರ್ಜಾ ಹಾಗೂ ಅರ್ಜುನ್ ಸರ್ಜಾ ಅವರನ್ನು ನಾಯಕನಟರನ್ನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಲಾಂಚ್ ಮಾಡಿದ್ದಾರೆ.
ತಮ್ಮ ಮಗಳು ಐಶ್ವರ್ಯ ಸರ್ಜಾ (Daughter Aishwarya Sarja) ಅವರಿಗೂ ಕೂಡ ಸಿನಿಮಾದಲ್ಲಿ ಅಭಿನಯಿಸಲು ಪ್ರೋತ್ಸಾಹಿಸಿ ತಮ್ಮದೇ ಹೋಂ ಪ್ರೊಡಕ್ಷನ್ ನಲ್ಲಿ ಕನ್ನಡದಲ್ಲಿ ಪ್ರೇಮ ಬರಹ (Premabaraha movie) ಎನ್ನುವ ಸಿನಿಮಾ ಕೂಡ ಮಾಡಿದರು. ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ಕಿರುತೆರೆ ಕಾರ್ಯಕ್ರಮಗಳ ನಿರೂಪಕನಾಗಿ ಹೆಸರು ಮಾಡಿರುವ ಅರ್ಜುನ್ ಸರ್ಜಾ ಅವರು ಈಗ ಕಲಾವಿದರ ಕುಟುಂಬಕ್ಕೆ ತಮ್ಮ ಮಗಳನ್ನು ಧಾರೆ ಎರೆದು ಕೊಡುತ್ತಿದ್ದಾರೆ.
ತಮಿಳಿನ ಖ್ಯಾತ ಹಾಸ್ಯನಟ ತಂಬಿ ರಾಮಯ್ಯ (Thambi Ramaih) ಐಶ್ವರ್ಯ ಸರ್ಜಾ ಅವರನ್ನು ಮನೆ ತುಂಬಿಸಿಕೊಳ್ಳುತ್ತಿದ್ದಾರೆ. ಹಾಸ್ಯ ನಟನಾಗಿ, ನಿರ್ದೇಶಕನಾಗಿ, ಸ್ಕ್ರಿಪ್ ರೈಟರ್ ಆಗಿ ಹೆಸರು ಮಾಡಿರುವ ಇವರ ಕಿರಿಯ ಪುತ್ರನಾದ ಉಮಾಪತಿಯವರು (Son Umapathy) ಕೂಡ ನಾಯಕನಟನಾಗಿ ಹಾಗೂ ಕೊರಿಯೋಗ್ರಾಫರ್ ಆಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ನಿರೂಪಣೆ ಮಾಡುತ್ತಿದ್ದ ಸರ್ವೈವರ್ (Surviver reality show) ಎನ್ನುವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಇವರು ಈ ಕಾರ್ಯಕ್ರಮದ ಮೂಲಕ ಅರ್ಜುನ್ ಪುತ್ರಿ ಐಶ್ವರ್ಯ ಕಣ್ಣಿಗೆ ಬಿದ್ದಿದ್ದಾರೆ. ಬಳಿಕ ಇವರಿಬ್ಬರ ನಡುವೆ ಪ್ರೀತಿ ಅಂಕುರವಾಗಿ ಮದುವೆ ಹಂತಕ್ಕೆ ಬಂದು ನಿಂತಿದೆ.
ಕಳೆದ ವಾರವಷ್ಟೇ ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರ ಕುಟುಂಬವೇ ನಿರ್ಮಿಸಿರುವ ಆಂಜನೇಯನ ದೇವಸ್ಥಾನದಲ್ಲಿ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಐಶ್ವರ್ಯ ಸರ್ಜಾ ಮತ್ತು ಉಮಾಪತಿ ಅವರ ನಿಶ್ಚಿತಾರ್ಥ ಏರ್ಪಟ್ಟಿದೆ. ಪರಸ್ಪರ ಇಬ್ಬರು ಉಂಗುರ ಬದಲಾಯಿಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದೆ.
ಬಲವಾದ ಮೂಲಗಳ ಮಾಹಿತಿ ಪ್ರಕಾರ ಶೀಘ್ರವಾಗಿ ಇವರಿಬ್ಬರ ಕಲ್ಯಾಣ ನೆರವೇರಲಿದ್ದು 2024ರ ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಮದುವೆ ದಿನಾಂಕ ಗೊತ್ತಾಗಿದೆಯಂತೆ ಇದರ ನಡುವೆ ಈ ಜೋಡಿ ಬಗ್ಗೆ ಮತ್ತೊಂದು ವಿಚಾರ ಹರಿದಾಡುತ್ತಿದೆ.
ಐಶ್ವರ್ಯ ಸರ್ಜಾ ಅವರನ್ನು ತಮ್ಮ ಕುಟುಂಬದ ಸೊಸೆಯಾಗಿ ಮಾಡಿಕೊಳ್ಳುವುದಕ್ಕೆ ತಂಬಿ ರಾಮಯ್ಯ ಅವರು ಒಂದು ಕಂಡೀಶನ್ ಹಾಕಿದ್ದು ಇನ್ನು ಮುಂದೆ ಆಕೆ ಸಿನಿಮಾದಲ್ಲಿ ನಟಿಸಬಾರದು ಎಂದು ಹೇಳಿದ್ದಾರಂತೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ ಆದರೆ ಹೀಗೊಂದು ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ ಉಪೇಂದ್ರ ಸಹೋದರನ ಪುತ್ರಿ ನಿರಂಜನ್ ಜೊತೆ ಐಶ್ವರ್ಯ ಸರ್ಜಾ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದಕ್ಕೆ ಅರ್ಜುನ್ ಸರ್ಜಾ ಅವರೇ ಆಕ್ಷನ್ ಕಟ್ ಹೇಳುವುದಲ್ಲದೆ ಹಣ ಕೂಡ ಹೂಡುತ್ತಿದ್ದಾರೆ ಎನ್ನುವ ಸುದ್ದಿ ಬಲವಾಗಿತ್ತು ಈ ಎರಡರಲ್ಲಿ ಯಾವುದು ನಿಜವಾಗುತ್ತದೆ ಕಾದು ನೋಡೋಣ.