ಕಳೆದ ಮೂರು ದಿನಗಳಿಂದಲೂ ಕೂಡ ಕರ್ನಾಟಕದಲ್ಲಿ ಘೋಸ್ಟ್ (Ghost) ಕೂಗು ಜೋರಾಗಿದೆ. ಒರಿಜಿನಲ್ ಗ್ಯಾಂಗ್ ಸ್ಟಾರ್ ಆಗಿ ಬಿಗ್ ಡ್ಯಾಡಿ ಬೆಳ್ಳಿ ಪರದೆ ಮೇಲೆ ರಾರಾಜಿಸುತ್ತಿದ್ದಾರೆ. ಶಿವರಾಜ್ ಕುಮಾರ್ (Shivaraj kumar) ಅವರ ಬಹು ನಿರೀಕ್ಷಿತ ಸಿನಿಮಾವಾದ ಘೋಸ್ಟ್ ಪ್ರೇಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸದೆ ಪೈಸಾ ವಸೂಲ್ ಮನೋರಂಜನೆ ಕೊಡುತ್ತಿದೆ.
ಈ ಸಕ್ಸಸ್ ಬೆನ್ನಲ್ಲೇ ಶಿವರಾಜ್ ಕುಮಾರ್ ಅವರಿಗೆ ಬರಪೂರ ಅಭಿನಂದನೆಗಳ ಜೊತೆ ಮಾಧ್ಯಮದವರ ಪ್ರಶ್ನೆಗಳು ಕೂಡ ಎದುರಾಗುತ್ತಿವೆ. ಯಾಕೆಂದರೆ ಎರಡು ದಿನಗಳ ಹಿಂದೆ ಶಿವಣ್ಣ ಅವರು ಮಲ್ಟಿಪ್ಲೆಕ್ಸ್ ಮೇಲೆ ಗರಂ ಆಗಿದ್ದರು ಅದಕ್ಕೆ ಸಂಬಂಧಿಸಿದ ಪ್ರಶ್ನೆ ಮತ್ತೆ ಶಿವಣ್ಣ ಅವರಿಗೆ ಎದುರಾಗಿದ್ದು ಮೀಡಿಯಾದವರ ಪ್ರಶ್ನೆಗೆ ನೇರವಾಗಿ ಈ ಬಾರಿ ಶಿವಣ್ಣ ನೇರವಾಗಿ ಉತ್ತರ ಕೊಟ್ಟಿದ್ದಾರೆ.
ಸಿನಿಮಾ ಸಂಬಂಧಿತ ಮಾತುಗಳು ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು ಎಲ್ಲರಿಗೂ ಧನ್ಯವಾದಗಳು ಎಂದು ಮಲ್ಟಿಪ್ಲೆಕ್ಸ್ ಗಳ ಬಗ್ಗೆ (clear Multiplex contreversy) ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮತ್ತು ಈ ಹಿಂದೆ ಅವರಾಡಿದ ಮಾತಿಗೆ ಸ್ಪಷ್ಟತೆ ನೀಡಿದ್ದಾರೆ.
ಬೇರೆ ಭಾಷೆ ಸಿನಿಮಾಗಳಿಗೆ ಶೋ ಕೊಡಬೇಡಿ ಅಥವಾ ಕಡಿಮೆ ಕೊಡಿ ಎಂದು ಹೇಳುತ್ತಿಲ್ಲ ಆದರೆ ಯಾವ ರೀತಿ ಸಂಬಾಳಿಸಬೇಕು ಎನ್ನುವುದು ಮಲ್ಟಿಪ್ಲೆಕ್ಸ್ ಓನರ್ಗಳಿಗೆ ಅರ್ಥ ಆಗಬೇಕು, ಈಗ ಅರ್ಥ ಮಾಡಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಫಿಲಂ ಚೇಂಬರ್ ಕಡೆಯಿಂದ ಕೂಡ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಮಾಲೀಕರಿಗೆ ಅರ್ಥ ಮಾಡಿಸುವ ಕೆಲಸ ಆಗುತ್ತಿದೆ, ಈಗ ಅವರಿಗೆ ಅರ್ಥವಾಗುತ್ತಿದೆ ಎಂದಿದ್ದಾರೆ.
ತಮಿಳು ಚಿತ್ರ ಒಂದಕ್ಕೆ ತಮಿಳುನಾಡಿನಲ್ಲಿ 150 ರೂ. ಟಿಕೆಟ್ ಇದ್ದರೆ ಕರ್ನಾಟಕದಲ್ಲಿ 900ರೂ. ಇಂದ 950ರೂ. ವರೆಗೆ ವಸೂಲಿ ಮಾಡುತ್ತಾರೆ ಆದರೆ ಕನ್ನಡ ಚಿತ್ರಗಳಾದರೆ ಇದು ಕಡಿಮೆ ದರವಿರುತ್ತದೆ ಇದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಶಿವರಾಜ್ ಕುಮಾರ್ ರವರು ಮಲ್ಟಿಪ್ಲೆಕ್ಸ್ ನಲ್ಲಿ ನೋಡಿದಾಗ ಸೌಂಡ್ ಎಫೆಕ್ಟ್ ಚೆನ್ನಾಗಿರಬಹುದು, ಹೆಚ್ಚಿನ ಖುಷಿ ಕೊಡಬಹುದು ಆದರೆ ಈ ರೀತಿ ಭೇದ ಭಾವ ಮಾಡಬಾರದು.
ಡಿಫ್ರೆನ್ಸ್ ಏನಿದೆ, ಪಾಪ್ ಕಾರ್ನ್ ತಿನ್ನುತ್ತಾ ಕೋಕ್ ಕುಡಿಯುತ್ತಾ ನೋಡುತ್ತಾರೆ ಅಷ್ಟೇ. ಸಿನಿಮಾ ಚೆನ್ನಾಗಿ ರನ್ ಆಗುತ್ತಿದೆ ಕಲೆಕ್ಷನ್ ಆಗುತ್ತಿದೆ ಎಂದರೆ ಎರಡು ಮೂರು ದಿನದಲ್ಲಿ ಆಗುವುದು 20 ದಿನಗಳವರೆಗೆ ಆಗಲಿ ಈ ಹಿಂದೆ ಇದ್ದ ಟ್ರೆಂಡ್ ಮರಳಿ ಬರಲಿ 3 ವಾರ, ಐವತ್ತು ದಿನ, ನೂರು ದಿನ ಆ ಅವಕಾಶ ಮಾಡಿಕೊಡಬೇಕು, ಓಲ್ಡ್ ಇಸ್ ಗೋಲ್ಡ್ ಆ ದಿನಗಳು ವಾಪಸ್ ಬರಲಿ.
ಮಲ್ಟಿಪ್ಲೆಕ್ಸ್ ಎಂದ ತಕ್ಷಣ ಅವರಿಗೆ ಎರಡು ಕೊಂಬು ಬರುವುದಿಲ್ಲ, PVR ಅವರಿಗೆ ಕೊಂಬು ಇದ್ದರೆ ಅದನ್ನು ಅವರು ಒಳ್ಳೆಯದಕ್ಕೆ ಬಳಸಬೇಕು ಅದರಿಂದ ಬೇರೆಯವರಿಗೆ ತಿವಿಯಲು ಹೋಗಬಾರದು, ಇದಕ್ಕೆ ನಿಯಂತ್ರಣ ಹಾಕುವ ಬಗ್ಗೆ ಮಾತುಕತೆ ನಡೆಯುತ್ತಿದೆ. ತಮಿಳುನಾಡು ಆಂಧ್ರಪ್ರದೇಶ ಇಲ್ಲೆಲ್ಲ ಸರ್ಕಾರವೇ ಇದನ್ನು ನಿಯಂತ್ರಣ ಮಾಡುತ್ತಿದೆ ಇಲ್ಲೂ ಕೂಡ ಅದೇ ರೀತಿ ಪ್ರಕ್ರಿಯೆ ಆಗಬೇಕು ಎಂದು ನಾನು ಕೇಳುತ್ತೇನೆ ನಿಧಾನವಾಗಿಯಾದರೂ ಇದು ಆಗುತ್ತದೆ ಎಂದಿದ್ದಾರೆ.
ತಮಗೆ ಯಾವ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಇಷ್ಟ ಎಂದು ಕೇಳಿದ್ದಕ್ಕೆ ನಾವು ಸಿಂಗಲ್ಸ್ ಸ್ಕ್ರೀನ್ ನೋಡಿಕೊಂಡೆ ಬೆಳೆದವರು ಹಾಗಾಗಿ ಅದೇ ಹೆಚ್ಚು ಇಷ್ಟ ಆಗುತ್ತದೆ. ಮಲ್ಟಿಪ್ಲೆಕ್ಸ್ ಗೂ ಹೋಗುತ್ತೇವೆ ಆದರೆ ಸಿಂಗಲ್ ಸ್ಕ್ರೀನ್ ಹೆಚ್ಚು ಇಷ್ಟ ಎಂದಿದ್ದಾರೆ ಆ ಮಾತಿಗೆ ಅಲ್ಲಿ ನೆರೆದಿದ್ದವರೆಲ್ಲಾ ಸಿಳ್ಳೆ ಚಪ್ಪಾಳೆ ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.