ನಟಿ ಪ್ರಿಯಾಂಕಾ ಉಪೇಂದ್ರ (actress Priyanka Upendra ) ಅವರು ಅಪ್ರತಿಮ ಸುಂದರಿ, ಅಷ್ಟೇ ಅಭಿನಯ ಚತುರೆ ಕೂಡ. ಇದೇ ಕಾರಣಕ್ಕಾಗಿ ಇಂದು ದೇಶದ ಹೆಸರಾಂತ ಎಲ್ಲಾ ಚಿತ್ರರಂಗದಲ್ಲೂ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡಿಗರ ಹೆಮ್ಮೆಯ ನಟ ಮತ್ತು ನಿರ್ದೇಶಕ ಉಪೇಂದ್ರ (actor and director Upendra wife) ಅವರನ್ನು ಕೈ ಹಿಡಿಯುವ ಮೂಲಕ ಕನ್ನಡತಿ ಆಗಿ ಬೆಂಗಳೂರಿನಲ್ಲಿ ಈಗ ನೆಲೆಯೂರಿದ್ದಾರೆ.
ಪ್ರಿಯಾಂಕ ಉಪೇಂದ್ರ ಅವರಿಗೆ ಉಪೇಂದ್ರ ಅವರ ನಿರ್ದೇಶನದ ಎಚ್ಟುಓ (H2O) ಸಿನಿಮಾ ಮೊದಲ ಸಿನಿಮಾ ಆಗಿತ್ತು. ಪ್ರಯೋಗಾತ್ಮಕ ಸಿನಿಮಾ ಆಗಿದ್ದ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ, ಉಪೇಂದ್ರ ಮತ್ತು ಪ್ರಭುದೇವ್ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಕಾವೇರಿ (Kaveri role) ಎನ್ನುವ ಪಾತ್ರ ಪ್ರಿಯಾಂಕ ಉಪೇಂದ್ರ ಅವರಿಗೆ ಹೆಚ್ಚಿನ ಫೇಮಸ್ ತಂದು ಕೊಟ್ಟಿತ್ತು. ಈ ಸಿನಿಮಾದ ಸಕ್ಸಸ್ ಕಾರಣ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಯಾಗಿ ಅಭಿನಯಿಸುವ ಆಫರ್ ಪಡೆದುಕೊಂಡರು.
ಶಿವರಾಜಕುಮಾರ್, ವಿಷ್ಣುವರ್ಧನ್, ರವಿಚಂದ್ರನ್ ಮುಂತಾದ ಸ್ಟಾರ್ ನಟರೊಂದಿಗೆ ನಟಿಸುವ ಅದೃಷ್ಟ ಈ ಸಿನಿಮಾ ತಂದು ಕೊಟ್ಟಿದ್ದಲ್ಲದೇ ವೈಯಕ್ತಿಕವಾಗಿ ಕೂಡ ಸಿನಿಮಾ ಬಹಳ ದೊಡ್ಡ ಲಾಭ ಮಾಡಿಕೊಟ್ಟಿತ್ತು. ಅದೇನೆಂದರೆ ಆ ಸಿನಿಮಾ ಆರಂಭದಲ್ಲಿ ಸ್ನೇಹವಾಗಿ ಆರಂಭವಾಗಿದ್ದ ಉಪೇಂದ್ರ ಮತ್ತು ಪ್ರಿಯಾಂಕ ಅವರ ಸ್ನೇಹ ಮುಗಿಯೋ ಅಷ್ಟರಲ್ಲಿ ಪ್ರೀತಿಯಾಗಿ ಬದಲಾಗಿ ಹೋಗಿತ್ತು. ಕನ್ನಡದ ಕಡೆ ಆಗ ತಾನೆ ತನ್ನ ಪಾದ ಬೆಳೆಸಿದ್ದ ಪ್ರಿಯಾಂಕ ಉಪೇಂದ್ರ ಅವರಿಗೆ ಉಪೇಂದ್ರ ಅವರ ಸಲಹೆ ಮತ್ತು ಮಾರ್ಗದರ್ಶನದಿಂದ ಅವರು ಆ ಸಿನಿಮಾದಲ್ಲಿ ಅಷ್ಟು ಚೆನ್ನಾಗಿ ಕಾಣಿಸಿಕೊಳ್ಳಲು ಮತ್ತು ಅಭಿನಯಿಸಲು ಸಾಧ್ಯವಾಯಿತು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಉಪೇಂದ್ರ ಅವರ ವ್ಯಕ್ತಿತ್ವಕ್ಕೆ ಫಿದಾ ಆದ ಪ್ರಿಯಾಂಕ ನಂತರ ವಿವಾಹವಾಗಿ ಈಗ ಐಶ್ವರ್ಯ ಮತ್ತು ಆಯುಷ್ ಎನ್ನುವ ಇಬ್ಬರು ಮಕ್ಕಳನ್ನು ಪಡೆದು ಸುಖಿ ಸಂಸಾರದಲ್ಲಿ ಸಂತೋಷವಾಗಿದ್ದಾರೆ. ಆದರೆ ಕನ್ನಡದ ಮತ್ತೊಂದು ಸಿನಿಮಾ ಇಂದ ಪ್ರಿಯಾಂಕ ಉಪೇಂದ್ರ ಅವರು ಅಷ್ಟೇ ನೋವನ್ನು ಸಹ ಅನುಭವಿಸಿದ್ದಾರಂತೆ. ಆ ಸಿನಿಮಾ ರವಿಚಂದ್ರನ್ (Ravichandran) ಅವರ ಜೊತೆ ಅಭಿನಯಿಸಿದ ಮಲ್ಲ (Malla) ಸಿನಿಮಾ. H2o ಆದ ತಕ್ಷಣ ಮಲ್ಲ ಸಿನಿಮಾದಿಂದ ಪ್ರಿಯಾಂಕ ಉಪೇಂದ್ರ ಅವರಿಗೆ ಆಫರ್ ಬರುತ್ತದೆ.
ಮಲ್ಲ ಸಿನಿಮಾದ ಹೀರೋ ರವಿಚಂದ್ರನ್ ಅವರು ಎಂದು ಗೊತ್ತಾದ ತಕ್ಷಣ ಪ್ರಿಯಾಂಕ ಉಪೇಂದ್ರ ಅವರು ಈ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ರವಿಚಂದ್ರನ್ ಅವರು ತಮ್ಮ ಎಲ್ಲಾ ಸಿನಿಮಾದಲ್ಲೂ ಕೂಡ ನಟಿಮಣಿಯರನ್ನು ಸುಂದರವಾಗಿ ತೋರಿಸುತ್ತಾರೆ ಹಾಗಾಗಿ ಈ ಅವಕಾಶ ಸಿಕ್ಕಿದ್ದೇ ಅದೃಷ್ಟ ಎಂದು ಅವರು ಭಾವಿಸಿಕೊಂಡು ಭಯದಿಂದಲೇ ಅಡಿಷನ್ ಅಲ್ಲಿ ಪಾಲ್ಗೊಳ್ಳುತ್ತಾರೆ. ಹೈಟ್ ಕಮ್ಮಿ ಇದ್ದ ಕಾರಣ ಇವರು ಸೆಲೆಕ್ಟ್ ಆಗುವುದೇ ಅನುಮಾನ ಇತ್ತು, ಆದರೆ ಅದೃಷ್ಟದಿಂದ ಈಕೆ ಆ ಚಾನ್ಸ್ ಪಡೆದುಕೊಂಡರು ನಂತರ ಪಟ್ಟ ಪಾಡು ಅಷ್ಟಿಷ್ಟಲ್ಲ.
ಯಾಕೆಂದರೆ ಆಗ ಸಂಪೂರ್ಣವಾಗಿ ಪ್ರಿಯಾಂಕ ಉಪೇಂದ್ರ ಅವರು ಕನ್ನಡ ಕಲಿತಿರಲಿಲ್ಲ, ರವಿಚಂದ್ರನ್ ಅವರು ಉದ್ದುದ್ದ ಡೈಲಾಗ್ ಗಳನ್ನು ಕೊಡುತ್ತಿದ್ದರಂತೆ ಹಾಗಾಗಿ ಆ ಎಲ್ಲಾ ಸ್ಕ್ರಿಪ್ಟ್ ಅನ್ನು ಕಲಿತು ಅಭಿನಯಿಸುವುದಕ್ಕೆ ಬಹಳ ಕಷ್ಟ ಆಗಿತ್ತಂತೆ. ಆದರೂ ತಂಡದ ಎಲ್ಲರ ಸಹಾಯದಿಂದ ನನ್ನ ಬೆಸ್ಟ್ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ. ಜೊತೆಗೆ ಈ ಸಿನಿಮಾದಲ್ಲಿ ಅವರು ಎರಡು ಶೇಡ್ ಅಲ್ಲಿ ಕಾಣಿಸಿಕೊಂಡಿದ್ದರು ಅದನ್ನು ಯಶಸ್ವಿಯಾಗಿ ನಿಭಾಯಿಸಿ ಇಂದಿಗೂ ಪ್ರಿಯಾಂಕ ಉಪೇಂದ್ರ ಎಂದರೆ ಮಲ್ಲ ಸಿನಿಮಾ ಎಂದು ಹೇಳುವಷ್ಟು ಆ ಸಿನಿಮಾದಿಂದ ಹೆಸರು ಮಾಡಿದರು.
ಒಂದು ಸಮಯದಲ್ಲಿ ಪ್ರಿಯಾಂಕ ಉಪೇಂದ್ರ ಮತ್ತು ಉಪೇಂದ್ರ ಅವರ ದಾಂಪತ್ಯದ ನಡುವೆ ಮಲ್ಲ ಸಿನಿಮಾ ಕಾರಣದಿಂದಾಗಿ ಬಿರುಕು ಎದ್ದಿದೆ ಎನ್ನುವ ಸುದ್ದಿಗಳು ಹಬ್ಬಿದವು. ಆದರೆ ಈ ಬಗ್ಗೆ ಎಲ್ಲೂ ಉಪೇಂದ್ರ ಅವರಾಗಲಿ ಪ್ರಿಯಾಂಕ ಉಪೇಂದ್ರ ಅವರಾಗಲಿ ಹೇಳಿಕೊಂಡಿರಲಿಲ್ಲ. ಹಾಗಾಗಿ ಇದನ್ನು ಗಾಳಿ ಮಾತು ಎಂದು ತೂರಿ ಬಿಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಕಾಣಿಸಿಕೊಂಡ ಬೋಲ್ಡ್ ನಟನೆ (Bold scene contreversy) ಬಗ್ಗೆ ಮತ್ತು ಹಾಡುಗಳಿಗೆ ಕಾಣಿಸಿಕೊಂಡ ಹಸಿ ಬಿಸಿ ದೃಶ್ಯಗಳ ಬಗ್ಗೆ ಪ್ರಿಯಾಂಕ ಉಪೇಂದ್ರ ಅವರನ್ನು ಪ್ರಶ್ನಿಸಿದರೆ. ಅದು ಆ ಸಿನಿಮಾಗೆ ಅವಶ್ಯಕತೆ ಇತ್ತು, ಅದು ನನಗೆ ಸ್ವಲ್ಪ ಮುಜುಗರ ಉಂಟುಮಾಡಿದ್ದು ನಿಜ, ಆದರೆ ನಟಿಯಾಗಿ ಆ ಪಾತ್ರಕ್ಕೆ ನ್ಯಾಯ ದಕ್ಕಿಸುವುದು ನನ್ನ ಕರ್ತವ್ಯ, ಹಾಗಾಗಿ ಅಂತಹ ಪಾಠಗಳನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಸ್ಪಷ್ಟನೆ ಕೊಡುತ್ತಾರೆ.