Mokshitha Pai
ಕನ್ನಡದ 11ನೇ ಬಿಗ್ ಬಾಸ್ ಆವೃತ್ತಿಗೆ (Bigboss S-11) ಕಳೆದ ಭಾನುವಾರ ಅಂತಿಮ ತೆರೆ ಬಿದ್ದಿದೆ. ಕಾರ್ಯಕ್ರಮದ ವಿನ್ನರ್ ಆಗಿ ಹನುಮಂತು, ರನ್ನರ್ ಅಪ್ ಆಗಿ ತ್ರಿವಿಕ್ರಂ ಹೊರ ಬಿದ್ದಿದ್ದಾರೆ. ಅಲ್ಲದೆ ಈ ಬಾರಿಯ ಕಂಟೆಸ್ಟೆಂಟ್ ಗಳಾಗಿ ಮನೆ ಹೊಕ್ಕಿದ್ದ ಪ್ರತಿಯೊಬ್ಬರು ತಮ್ಮದೇ ಆದ ವಿಚಾರಗಳಿಂದ ಜನರ ಮನಸ್ಸಿಗೆ ಬಹಳ ಹತ್ತಿರವಾಗಿದ್ದಾರೆ.
ಹಾಗೇ ಸೀಸನ್ 11ರ 16ನೇ ಕಂಟೆಸ್ಟೆಂಟ್ ಆಗಿ ಮನೆ ಪ್ರವೇಶ ಮಾಡಿದ್ದ ಮೋಕ್ಷಿತ ಪೈ (Mokshitha Pai) ಅಲಿಯಾಸ್ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಪಾರು ಖ್ಯಾತಿಯ ಪಾರು (Paru Serial) ತಮ್ಮ ಸರಳತೆಯ ಮೂಲಕ ಮನೆ ಮಾತಾಗಿದ್ದಾರೆ. ತಮ್ಮ ಅರ್ಥ ಆಯ್ತಾ ಅರ್ಥ ಆಯ್ತಾ ಎಂಬ ಡೈಲಾಗ್ ಮೂಲಕ ಫೈಯರ್ ಬ್ರಾಂಡ್ ಆದ ಮೋಕ್ಷಿತ ತಮ್ಮದೇ ಶೈಲಿಯಲ್ಲಿ ಆಡಿ ನಾಲ್ಕನೇ ರನ್ನರ್ ಅಪ್ (4th place) ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಸಿಂಪಲ್ ಹುಡುಗಿ ತನ್ನ ಸ್ವೀಟ್ ಮಾತುಗಳ ಮೂಲಕವೇವತಮ್ಮ ತಂಟೆಗೆ ಬಂದವರಿಗೆ ಟಕ್ಕರ್ ಕೊಟ್ಟು ಕೊನೆ ದಿನದವರೆಗೂ ಕೂಡ ಫೈಟರ್ ಎನಿಸಿಕೊಂಡಿದ್ದರು. ಅದರಲ್ಲೂ ಆರಂಭದಲ್ಲಿ ಗೌತಮಿ ಹಾಗೂ ಮಂಜು ರವರ ಜೊತೆಗಿದ್ದ ಮೂರು ಜನರ ಸ್ನೇಹ ತಂಡ ಮತ್ತು ಸದಾ ಕಾಲ ತ್ರಿವಿಕ್ರಂ ಅವರನ್ನು ಅಪಾರ್ಥ ಮಾಡಿಕೊಂಡು ಸಿಡುಕು ತೋರುತ್ತಿದ್ದ ರೀತಿ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಹವಾ ಕ್ರಿಯೇಟ್ ಮಾಡಿತ್ತು.
ಆದರೆ ದೊಡ್ಮನೆ ಒಳಗೆ ಮೋಕ್ಷಿತ ಅವರು ಗಟ್ಟಿಗಿತ್ತಿ ಎನ್ನುವ ರೀತಿ ಬಿಂಬವಾಗುತ್ತಿದ್ದಂತೆ ಇತ್ತ ಕಿಡಿಗೇಡಿಗಳಿಂದ ಇವರ ಕುರಿತು ಹೊರಗೆ ಅ’ಪಪ್ರಚಾರ ಶುರುವಾಗಿತ್ತು. ಮಕ್ಕಳ ಕ’ಳ್ಳಿ ಎನ್ನುವ ಪಟ್ಟಿಯನ್ನು ಇವರ ಹಣೆಗೆ ಕಟ್ಟಿ ಅವರ ಕೆಲವು ಹಳೇ ವಿಡಿಯೋ ಕ್ಲಿಪ್ ಗಳನ್ನು ಹರಿಬಿಟ್ಟಿದ್ದರು. ಕುಟುಂಬಸ್ಥರು ಎಷ್ಟೇ ಇದನ್ನು ತಿಳಿ ಮಾಡಲು ಪ್ರಯತ್ನ ಪಟ್ಟಿದ್ದರು ಇನ್ನು ಅನೇಕರ ಮನಸ್ಸಿನಲ್ಲಿ ಕ್ಲಿಯರ್ ಆಗದ ವಿಷಯವಾಗಿದೆ.
ಈಗ ಖುದ್ದು ಹೊರ ಬಂದ ಮೇಲೆ ಮೋಕ್ಷಿತ ರವರೇ ಈ ಕಾಂಟ್ರವರ್ಸಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಅಲ್ಲದೆ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಒಂದು ಒಳ್ಳೆಯ ಕೆಲಸ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಮೋಕ್ಷಿತ ಅವರಿಗೆ ಆಡಿಸಂ (Autism) ಇಂದ ಬಳಸುತ್ತಿರುವ ಸಹೋದರ ಇದ್ದಾರೆ ಇಷ್ಟು ವರ್ಷದವರಿಗೆ ತಮ್ಮ ಸಹೋದರನನ್ನು ಮೋಕ್ಷಿತ ಪೈ ರವರು ಮಗನಂತೆ ಸಾಕಿದ್ದಾರೆ.
ತಮ್ಮ ತಮ್ಮನ ಮೇಲಿರುವ ಅಪಾರ ಅಕ್ಕರೆಯಿಂದ ಮೋಕ್ಷಿತ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಕಡೆಯಿಂದ ತಮ್ಮ ಹೆಸರಿಗೆ ಬಂದ ಹಣದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ವಿಶೇಷ ಚೇತನರ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ ಮತ್ತು ಇದೇ ಸಂದರ್ಭದಲ್ಲಿ ಮಕ್ಕಳ ಕ’ಳ್ಳಿ ಎಂದು ಅ’ಪಪ್ರಚಾರ ಮಾಡಿದವರಿಗೆ ತಿರುಗೇಟು ಸಹಾ ನೀಡಿದ್ದಾರೆ.
ಈ ಬಗ್ಗೆ ತಾವೇ ಸ್ವತಃ ಮಾತನಾಡಿರುವ ಮೋಕ್ಷಿತ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಕಹಿ ಘಟನೆ ಇದ್ದೇ ಇರುತ್ತದೆ, ಅದೇ ರೀತಿ ನನ್ನ ಬದುಕಲ್ಲೂ ಒಂದು ಕಹಿ ಘಟನೆ ನಡೆದಿತ್ತು, ಮತ್ತು ಇದಕ್ಕೆ ಆಗಲೇ ಕ್ಲಾರಿಟಿ ಕೂಡ ಸಿಕ್ಕಿದೆ. ಅದೆಲ್ಲಾ ಈಗ ಮುಗಿದು ಹೋದ ವಿಚಾರ, ಇನ್ನು ಅದರ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ ಅರ್ಥ ಆಯ್ತಾ ಎಂದು ಹೇಳಿದ್ದಾರೆ.