Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?

Posted on March 17, 2023 By Admin No Comments on ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?

 

ಡಾಕ್ಟರ್ ರಾಜಕುಮಾರ್ ಎಂದರೆ ಅಪರೂಪದ ಕಲಾವಿದರು. ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ಒಂದರ ಮೇಲೆ ಒಂದು ದಾಖಲೆಗಳನ್ನು ಬರೆದ ಸರದಾರ. ಭಾರತೀಯ ಚಲನಚಿತ್ರ ರಂಗದ ಶ್ರೇಷ್ಠ ನಟರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಇವರನ್ನು ಮೀರಿಸುವವರು ಯಾರು ಇಲ್ಲ ಎಂದರೆ ತಪ್ಪಾಗಲಾರದು. ಆದರೆ ಇವರ ದಾಖಲೆಯೊಂದನ್ನು ನಟಿ, ಮಾಲಾಶ್ರೀ ಅವರು ಅಳಿಸಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ಮಾಲಾಶ್ರೀ ಅವರು ಅಣ್ಣಾವ್ರ ದಾಖಲೆ ಮುರಿದು ಇತಿಹಾಸದ ಪುಟ ಸೇರಿದ್ದಾರೆ.

ಹಾಗಾದ್ರೆ ಅಪ್ಪಾಜಿಯ ಯಾವ ದಾಖಲೆಯನ್ನು ಮಾಲಾಶ್ರೀ ಅವರು ಹಿಂದಕ್ಕಿ ಮುನ್ನಡೆದಿರುವುದು ಎಂಬ ಪ್ರಶ್ನೆಯು ನಿಮ್ಮಲ್ಲಿಯೂ ಮೂಡಿರಬೇಕಲ್ಲವೇ…? ಅದಾವ ರೆಕಾರ್ಡ್, ಹೇಗೆ ಮಾಲಾಶ್ರೀ ಹೊಸ ರೆಕಾರ್ಡ್ ಬರೆದರು…. ಇಂತಹ ಸ್ವಾರಸ್ಯಮಯ ವಿಚಾರಗಳನ್ನು, ಬರಹವನ್ನು ಸಂಪೂರ್ಣವಾಗಿ ಓದುವುದರ ಮುಖಾಂತರ ತಿಳಿದುಕೊಳ್ಳಿ.

ಡಾಕ್ಟರ್ ರಾಜಕುಮಾರ್ ಅವರು ಸುಧೀರ್ಘ ಕಾಲದವರೆಗೆ ನಾಟಕಕಾರರಾಗಿ ಕಾರ್ಯನಿರ್ವಹಿಸಿದ ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು. 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಮೇಲೆ ಬದುಕಿನಲ್ಲಿ ಹೊಸ ತಿರುವನ್ನು ಕಂಡರು ಬಳಿಕ ಸಾಲು ಸಾಲು ಹಿಟ್ ಚಿತ್ರಗಳನ್ನು ಐತಿಹಾಸಿಕ, ಪೌರಾಣಿಕ, ಕಾದಂಬರಿ ಆಧಾರಿತ, ಸಾಹಸಮಯ ಎಂಬ ಭೇದವಿಲ್ಲದೆ ನೀಡಿ ಸಮಸ್ತ ಕನ್ನಡಿಗರ ಮನದಲ್ಲಿ ಅಚ್ಚಾದರು.

200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಪದ್ಮಭೂಷಣ, ಕೆಂಟುಕಿ ಕರ್ನಲ್, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕೆ, NTR ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ. ಸಿನಿ ಪ್ರಿಯರು ಇವರನ್ನು ಗಾನ ಗಂಧರ್ವ, ಬಂಗಾರದ ಮನುಷ್ಯ, ನಟ ಸಾರ್ವಭೌಮ, ಕನ್ನಡ ಕಂಠೀರವ ಹೀಗೆ ನಾನಾ ಹೆಸರುಗಳಿಂದ ಕರೆದು ಗೌರವಿಸುತ್ತದೆ.

ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕರ್ನಾಟಕದ ಮೂಲೆಮೂಲೆಗಳ ಮನೆ ಮಂದಿಗೆ ಪರಿಚಿತರಾದರು. ಕನಸಿನ ರಾಣಿ, ರಾಣಿ ಮಹಾರಾಣಿ, ಹೃದಯ ಹಾಡಿತು, ಸೋಲಿಲ್ಲದ ಸರದಾರ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಫಿಲಂ ಫೇರ್ ಅವಾರ್ಡ್, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಂದಿನ ಕಾಲದ ಬಹು ಬೇಡಿಕೆಯ ನಟಿ, ಮಾಲಾಶ್ರೀ. ದಿಟ್ಟ ಹೆಣ್ಣು, ಹಳ್ಳಿ ಹುಡುಗಿ, ಪೇಟೆ ಸುಂದರಿ, ಪೋಲೀಸ್ ಯಾವ ಪಾತ್ರವನ್ನಾದರೂ ಸಲೀಸಾಗಿ ಮಾಡುವ ಕಲೆ ಇವರದ್ದು.

ಡಾ. ರಾಜಕುಮಾರ ಅವರ ಚಲನಚಿತ್ರಗಳು 50ಕ್ಕೂ ಅಧಿಕ ಬಾರಿ ರೀಮೇಕ್ ಆಗಿವೆ. ಇವರ 35 ಸಿನಿಮಾಗಳು ಒಂಭತ್ತು ಭಾಷೆಗಳಲ್ಲಿ ಮರು ನಿರ್ಮಾಣವಾಗಿವೆ. ಇದೊಂದು ದಾಖಲೆಯಾದರೆ, ಜೇಮ್ಸ್ ಬಾಂಡ್ ಮೇಲೆ ಪೂರ್ಣ ಪ್ರಮಾಣದಪಾತ್ರವನ್ನು ನಿರ್ವಹಿಸಿದ ಭಾರತದಲ್ಲಿ ಮೊದಲ ನಟ ಎನಿಸಿಕೊಂಡಿದ್ದಾರೆ. ಭಾರತೀಯ ಸಿನಿಮಾದ ಶತಮಾನೋತ್ಸವದ ವೇಳೆಯಲ್ಲಿ ಭಾರತೀಯ ಸಿನಿಮಾದ 25 ಶ್ರೇಷ್ಠ ನಟನಾ ಪ್ರದರ್ಶನಗಳ ಪಟ್ಟಿಯಲ್ಲಿ ಇವರದೊಂದು ಚಿತ್ರವು ಸೇರಿದೆ. ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಅತ್ಯಂತ ಜನಪ್ರಿಯ ನಟ ಎಂಬ ಹೊಗಳಿಕೆಗೆ ಪಾತ್ರರಾದ ಮೊದಲ ಕನ್ನಡಿಗ ಅಣ್ಣಾವ್ರು.

ಡಾಕ್ಟರ್ ರಾಜಕುಮಾರ್ ಅವರು ತಮ್ಮ ಪ್ರತಿಭೆಯಿಂದ ಒಂದರ ಹಿಂದೊಂದು ಚಿತ್ರವನ್ನು ಮಾಡುತ್ತಾ ಚಿತ್ರೀಕರಣದಲ್ಲಿ ಇರುತ್ತಿದ್ದರು. ಇವರು ಒಂದೇ ವರ್ಷದಲ್ಲಿ 18 ಸಿನಿಮಾಗಳಲ್ಲಿ ಅಭಿನಯಿಸಿ, ಎಲ್ಲವೂ ಅದೇ ವರುಷದಲ್ಲಿ ಬಿಡುಗಡೆಯಾಗಿ ತೆರೆಕಂಡಿತ್ತು. ಚಂದನವನದ ಅಪರೂಪದ ದಾಖಲೆ ಇದಾಗಿತ್ತು. ಇದನ್ನು ಅಳಿಸಿ ಹೊಸ ದಾಖಲೆ ಬರೆದವರು ಮಾಲಾಶ್ರೀ. ಹೌದು. ಪ್ರೇಮ, ಸಂಸಾರಿಕ, ಮಹಿಳಾ ಕೇಂದ್ರೀಕೃತ ಚಿತ್ರಗಳಲ್ಲಿ ಹೆಚ್ಚಾಗಿ ಬಣ್ಣ ಹಚ್ಚುತ್ತಿದ್ದ ಇವರು ಒಂದೇ ವರ್ಷದಲ್ಲಿ 19 ಸಿನಿಮಾಗಳಲ್ಲಿ ನಟಿಸಿದ್ದು, ಎಲ್ಲವೂ ಅದೇ ವರುಷದಲ್ಲಿ ಬಿಡುಗಡೆಯಾಗಿ ಪ್ರದರ್ಶನ ನೀಡಿದ್ದವು.

cinema news Tags:Dr Raj, Malashree

Post navigation

Previous Post: ಶಮಿಕಾನಾ ಯಾವ್ದೇ ಕಾರಣಕ್ಕೂ ನನ್ನ ತಂಗಿ ಅಂತ ಒಪ್ಪಿಕೊಳ್ಳಲ್ಲ ಅಂದ ನಿಖಿಲ್, ಇದಕ್ಕೆ ಪ್ರತಿಯಾಗಿ ಖಡಕ್ ಹೇಳಿಕೆ ನೀಡಿದ ರಾಧಿಕಾ ಕುಮಾರಸ್ವಾಮಿ ಏನದು ಗೊತ್ತ.?
Next Post: ನಟ ಪೊನ್ನಾಂಬಳಂ ಆರೋಗ್ಯದಲ್ಲಿ ಸಮಸ್ಯೆ ಎಂದಾಗ ಮೆಗಾಸ್ಟಾರ್ ಚಿರಂಜೀವಿ ನೀಡಿದ ಹಣವೆಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme