ಬಿಗ್ ಬಾಸ್ (Bigboss) ರಿಯಾಲಿಟಿ ಶೋಗಳ ಸರದಾರ, ಕನ್ನಡ ಸೇರಿದಂತೆ ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಈ ಶೋ ನಡೆಯುತ್ತಿದೆ. ಇದು ಶುರುವಾದಾಗಲಿಂದಲೂ ಕೂಡ ಜನರಿಗೆ ಒಂದು ಗುಮಾನಿ ಇದ್ದೇ ಇದೆ. ಇದು ಸ್ಕ್ರಿಪ್ಟೆಡ್ ಶೋ (Scripted show) ನಾ? ಎಂದು ಇದಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಪರ ಹಾಗೂ ವಿರೋಧ ಚರ್ಚೆ ಆಗುತ್ತದೆ ಇರುತ್ತದೆ.
ಅನೇಕ ಬಾರಿ ಕಾರ್ಯಕ್ರಮದ ತಂಡ ಸೇರಿದಂತೆ ಹಳೆಯ ಸ್ಪರ್ಧಿಗಳು ಕೂಡ ಇದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಈಗಮತ್ತೊಮ್ಮೆ ಅದೇ ಸುದ್ದಿ ಬಗ್ಗೆ ಸೀಸನ್ 4ರ ಸ್ಪರ್ಧಿ ಕಿರಿಕ್ ಕೀರ್ತಿ (Kirik Keerthi) ಕೂಡ ಮಾತನಾಡಿದ್ದಾರೆ. ಈ ಬಾರಿ ಅವರು ಬಿಗ್ ಬಾಸ್ ಶೋ ಹೇಗೆ ಸ್ಕ್ರಿಪ್ಟೆಡ್ ಎನ್ನುವುದರ ಬಗ್ಗೆ ವಿಷಯ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಟಾಸ್ಕ್ ಗಳನ್ನು ಕೊಡುತ್ತಾರೆ ಇದು ಮಾತ್ರ ಸ್ಕ್ರಿಪ್ಟೆಡ್ ಆದರೆ ನಾವು ಅದನ್ನು ನಿಭಾಯಿಸುತ್ತೇವೆ ಎನ್ನುವುದನ್ನು ನಮ್ಮ ತಿಳುವಳಿಕೆಗೆ ಬಿಟ್ಟಿದ್ದು. ಅದನ್ನು ಯಾರು ಹೀಗೆ ಮಾಡಿ ಹಾಗೆ ಮಾಡಿ ಎಂದು ಹೇಳುವುದಿಲ್ಲ, ಹೇಳಲಾಗುವುದು ಇಲ್ಲ ಹಾಗಾಗಿ ಇದು ಸ್ಕ್ರಿಪ್ಟೆಡ್ ಅಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಸೀಸನ್ 10 ರ ಬಗ್ಗೆ ಹೇಳುವುದಾದರೆ ಮೂರನೇ ವಾರದ ಪಂಚಾಯಿತಿಯಲ್ಲಿ ಮನೆಮಂದಿಗೆ ದಸರಾ ಗಿಫ್ಟ್ ಕೊಟ್ಟು ಚುರುಕು ಮುಟ್ಟಿಸಿದ್ದರು. ಆದರೆ ವಿನಯ್ ಅವರನ್ನು ಮಾತ್ರ ಸ್ಪಷ್ಟವಾದ ಫೈನಲಿಸ್ಟ ಎಂದಿದ್ದರು. ಜೊತೆಗೆ ಅವರಿಗೆ ಸಿಕ್ಕ ಆನೆ ಗಿಫ್ಟ್ ಜೊತೆ ಬಂದ ಸಂದೇಶವನ್ನು ಸರಿಯಾಗಿ ಹೇಳಲಿಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು.
ವಿನಯ್ (Vinay) ಅವರನ್ನು ಕ್ಲಾಸ್ ತೆಗೆದುಕೊಳ್ಳುವುದಕ್ಕೆ ಎಷ್ಟು ವಿಚಾರಗಳಿತ್ತು ಆದರೂ ಇಲ್ಲಿ ಎಲ್ಲರೂ ಒಂದೇ ಸಮಯದಲ್ಲಿ ನೋಡುವುದಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಕಿರಿಕ್ ಕೀರ್ತಿಯವರು ಈಗ ಉತ್ತರ ಕೊಟ್ಟಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದ ವಾರಾಂತ್ಯದ ಎಪಿಸೋಡ್ ನಲ್ಲಿ ಸುದೀಪ್ ಸರ್ (Suddep) ಎಲರನ್ನು ಗಮನಿಸುವುದಿಲ್ಲ ಅಥವಾ ಮಾತನಾಡಿಸುವುದಿಲ್ಲ ಎನ್ನುವುದು ಸುಳ್ಳು. ಕೆಲವೊಮ್ಮೆ ಯಾರನ್ನಾದರೂ ಸುಮ್ಮನಿರಲು ಬಿಟ್ಟಿದ್ದಾರೆ ಎಂದರೆ ಅದು ಕೂಡ ಜಾಣತನ. ಅವರ ಹಳ್ಳ ಅವರೇ ತೋಡಿಕೊಳ್ಳಬೇಕು ಎಂದು ಬಿಟ್ಟಿರುತ್ತಾರೆ, ಅವರಾಗಿ ತಗಲಾಕಿಕೊಂಡಾಗ ಅವರಿಗೆ ಕ್ಲಾಸ್ ಇರುತ್ತದೆ.
ಅದನ್ನು ಈ ವಾರ ನಾವೆಲ್ಲ ನೋಡಿದ್ದೇವೆ. ಬಿಗ್ ಬಾಸ್ ಶೋ ಗೆ ಹೋಗಿರುವುದು ಜೇನಿನಗೂಡು ನಾವೆಲ್ಲ ಎಂದು ಇರಲು ಅಲ್ಲ, ಮನೋರಂಜನೆ ಜೊತೆಗೆ ಕಾಂಪಿಟೇಶನ್ ಗಾಗಿ. ಅಲ್ಲಿ ಸ್ಪರ್ಧಿಗಳು ಅವರವರ ನಡುವಯೇ ಗೋಡೆ ಕಟ್ಟಿಕೊಂಡಿರುತ್ತಾರೆ, ಒಂದೇ ವಾರಕ್ಕೆ ಮನೆಯಲ್ಲಿ ಕ್ಯಾಮೆರಾಗಳು ಇದೆ ಎನ್ನುವುದನ್ನು ಕೂಡ ಮರೆಯುತ್ತಾನೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗಲಾಟೆ ಆಗಲೆಂದು ಬಿಗ್ ಬಾಸ್ ಟಾಸ್ಕ್ ಕೊಡುತ್ತಾರೆ ಎಂದು ತಿಳಿದುಕೊಳ್ಳುವುದು ತಪ್ಪು ಮನೋರಂಜನೆ ಹಾಗೂ ಕುತೂಹಲ ಮುಖ್ಯವಾಗಿರುತ್ತದೆ. ಆಗ ತಾನೇ TRP ಹೆಚ್ಚಾಗಿ ಅವರಿಗೂ ಜಾಹೀರಾತು ಬರುವುದು. ಹಾಗಾಗಿ ಈ ರೀತಿ ಟಾಸ್ಕ್ ಡಿಸೈನ್ ಮಾಡಲಾಗಿರುತ್ತದೆ ಹೊರತು ಹೀಗೇ ಮಾಡಿ ಎಂದು ಹೇಳುವುದಿಲ್ಲ ಎಂದು ಕಿರಿಕ್ ಕೀರ್ತಿ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.