ಕೇಂದ್ರ ಸರ್ಕಾರವು ಕೃಷಿಗೆ ಹಾಗೂ ರೈತರಿಗೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ ಕೇಂದ್ರ ಸರ್ಕಾರ ಕೆಲವೊಂದು ಕಠಿಣ ನಿರ್ಧಾರಗಳನ್ನು ಸಹ ಕೈಗೊಳ್ಳಬೇಕಾಗುತ್ತದೆ. ಕೃಷಿಗೆ ಸಂಬಂಧಪಟ್ಟ ಹಾಗೆ ಕೆಲವೊಂದು ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಇದು ರೈತರಿಗೆ ತುಂಬಾ ಉಪಯುಕ್ತವಾದಂತಹ ಒಂದು ಯೋಜನೆ. 5 ಗಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ ಮಾರಾಟ ಮಾಡಿದರೆ ಪೋಡಿ ಅಥವಾ 11 ಈ ನಕ್ಷೆ ದೊರೆಯುವುದಿಲ್ಲ ಇಂತಹದೊಂದು ಆದೇಶವನ್ನು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಶ್ ಮೌತ್ ಗಿಲ್ ಹೊರಡಿಸಿದ್ದಾರೆ.
ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು 3 ಗಂಟೆಗೆ ಇಳಿಕೆ ಮಾಡಲಾಗಿದೆ ಈ ನಾಲ್ಕು ಜಿಲ್ಲೆಗಳಲ್ಲಿ ಮೂರು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶ ಇಲ್ಲ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಯನ್ನು ಸರ್ಕಾರ ನಿಗದಿ ಮಾಡಿದೆ ಕೃಷಿ ಉದ್ದೇಶಕ್ಕೆ ಉಪಯೋಗಿಸುವ ಭೂಮಿಯ ಸರ್ವೇ ನಂಬರ್ ಗಳಲ್ಲಿ ಗರಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ ಇದಕ್ಕೆ ಕಾರಣ ತುಂಡು ತುಂಡು ಭೂಮಿ ಮಾರಾಟ ಅಥವಾ ರೆವೆನ್ಯೂ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ನಗರಾಭಿವೃದ್ಧಿ ಕಾಯ್ದೆ ಅಡಿಯಲ್ಲಿ ನಿಯಮ ಬದ್ಧವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಗಳನ್ನು ಸೈಟು ಅಥವಾ ಕಟ್ಟಡಗಳಿಗಾಗಿ ಪರಿವರ್ತಿಸುತ್ತಿದ್ದಾರೆ.
ಕೃಷಿ ಉದ್ದೇಶಕ್ಕೆ ಬಳಸುವ ಬದಲು ಸೈಟುಗಳನ್ನಾಗಿ ಬಳಸಲಾಗುತ್ತಿದೆ ಕಂದಾಯ ಲೇಔಟ್ ನಿರ್ಮಿಸಿ ಗುಂಟೆಗಳ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ತುಂಡುಭೂಮಿಯಾಗಿ ಮಾರಾಟ ಮಾಡುತ್ತಿದ್ದಾರೆ ಇಂತಹ ಪ್ರವೃತ್ತಿಯನ್ನು ನಗರ ಪ್ರದೇಶಗಳ ಸುತ್ತಮುತ್ತ ಹೆಚ್ಚಾಗಿ ನಡೆಯುತ್ತಿದೆ ನಗರೀಕರಣ ಸಾಧ್ಯವಾಗದೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ರಸ್ತೆ, ಒಳಚರಂಡಿ ನೀರು ಇತ್ಯಾದಿ ಪೂರೈಸಲು ಕಷ್ಟಕರವಾಗುತ್ತಿದೆ ಇಂತಹ ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲ ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ ಗಳನ್ನು ಸೃಷ್ಟಿಸುವುದು ಕಷ್ಟವಾಗಿದೆ ಅದಕ್ಕಾಗಿ ಇದನ್ನು ಪಡೆಯುವ ಉದ್ದೇಶಕ್ಕಾಗಿ ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ತಡೆ ನೀಡಿದೆ.
ಸಣ್ಣ ರೈತರಿಗೆ ಇನ್ನಷ್ಟು ಸಮಸ್ಯೆ ಕನಿಷ್ಠ 5 ಗುಂಟೆ ಜಮೀನು ಮಾರಾಟದ ಆದೇಶ ತಂದ ರೈತರಿಗೆ ಕಂಟಕವಾಗಲಿದೆ ರೆವಿನ್ಯೂ ಬಡಾವಣೆಗಳಲ್ಲಿ ಒಂದು ಗುಂಟೆಗಿಂತ ಕಡಿಮೆ ವಿಸ್ತರಣವನ್ನು ಒಂದು ಸೈಟ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ ಒಂದು ಗುಂಟೆ ಅಥವಾ ಕಂದಾಯ ಲೇಔಟ್ ಕಠಿಣವಾಗಿ ಹಾಕಬಹುದಾಗಿತ್ತು ಈ ಆದೇಶದಿಂದ ಸಣ್ಣ ರೈತರಿಗೆ 5 ಗುಂಟೆಗಿಂತ ಕಡಿಮೆ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ.
ಐದು ಗುಂಟೆಗಿಂತ ಕಡಿಮೆ ಭೂಮಿಯನ್ನು ಯಾರೆಲ್ಲ ಮಾರಾಟ ಮಾಡಬಹುದು ಯಾರಿಗೆಲ್ಲ ವಿನಾಯಿತಿ ಇದೆ ಎಂದು ನೋಡುವುದಾದರೆ. ಹೊಸ ಆದೇಶಕ್ಕೂ ಮೊದಲು ಸರ್ವೇ ನಂಬರ್ ಅಥವಾ ಪಹಣಿಗಳಲ್ಲಿ ಗರಿಷ್ಠ ವಿಸ್ತಿರ್ಣ ಕ್ಕಿಂತ ಕಡಿಮೆ ವಿಸ್ತೀರ್ಣ ಇದ್ದರೆ ಮುಂದುವರೆಯಲಿದೆ ಅಂತಹ ಸರ್ವೆ ನಂಬರ್ ಮತ್ತು ಪಹಣಿಗಳು ಮಾನ್ಯವಾಗಿರುತ್ತದೆ ಒಂದು ವೇಳೆ ಪಿತ್ರಾರ್ಜಿತವಾಗಿ ಅಥವಾ ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಪೋಡಿ ರಚಿಸಬಹುದು
ಜೊತೆಗೆ ಈಗಾಗಲೇ ಪಹಣಿಗಳಲ್ಲಿ ದಾಖಲಾದ ಮತ್ತು ಅಸ್ತಿತ್ವದಲ್ಲಿ ಇರುವ ಮಾಲೀಕರ ಹಕ್ಕುಗಳ ಪ್ರಕಾರ ಫೋಡಿಯನ್ನು ಗರಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದರೂ ಅನುಮೋದಿಸಲಾಗುತ್ತದೆ. ಈ ಮೇಲೆ ತಿಳಿಸಿದಂತಹ ಕಾರಣಗಳಿಂದಾಗಿ ಕೇಂದ್ರ ಸರ್ಕಾರವು 5 ಗುಂಟೆಗಿಂತ ಕಡಿಮೆ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎನ್ನುವಂತಹ ಉದ್ದೇಶವನ್ನು ಒಳಗೊಂಡಿದೆ ಇದರ ಅಡಿಯಲ್ಲಿ ಯಾರು ಸಹ ಕೃಷಿಗೆ ಸಂಬಂಧಪಟ್ಟಂತಹ ಭೂಮಿಯನ್ನು ಐದು ಗುಂಟೆಗಿಂತ ಕಡಿಮೆ ವಿಸ್ತೀರ್ಣದಲ್ಲಿ ಮಾರಾಟ ಮಾಡಬಾರದು ಹಾಗೆ ಏನಾದರೂ ಕೃಷಿ ಭೂಮಿಯನ್ನು ಐದು ಗುಂಟೆಗಿಂತ ಕಡಿಮೆ ಮಾರಾಟ ಮಾಡಿದ್ದೆ ಆದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.