ಕನ್ನಡ ಚಿತ್ರರಂಗ ಬೇರೆಯಲ್ಲಾ ಡಾ. ರಾಜಕುಮಾರ್ (Dr. Rajkumar) ಬೇರೆಯಲ್ಲಾ ಎನ್ನುವ ರೀತಿ ನಾವು ರಾಜ್ ಕುಮಾರ್ ಅವರನ್ನು ಕಾಣುತ್ತೇವೆ. ಯಾಕೆಂದರೆ, ಕನ್ನಡ ಚಿತ್ರರಂಗವನ್ನು ಕಟ್ಟಿ ಈ ಹಂತಕ್ಕೆ ಬೆಳೆಸುವುದರಲ್ಲಿ ಅತಿ ದೊಡ್ಡ ಪಾತ್ರ ಅಣ್ಣಾವರದ್ದು. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಸಾಧನೆ ಅಪಾರ, ಈ ಕಾರಣಕ್ಕಾಗಿ ಅವರನ್ನು ಧ್ರುವತಾರೆ, ನಟಸಾರ್ವಭೌಮ, ಕನ್ನಡ ಕುಲ ತಿಲಕ ಇತ್ಯಾದಿ ಹೆಸರಿನಿಂದ ಕರೆಯುವುದು.
ಭಾಷೆ ಎನ್ನುವ ವಿಚಾರ ಬಂದಾಗ ಡಾ. ರಾಜ್ ಕುಮಾರ್ ಅವರನ್ನು ಎಷ್ಟು ಹಾಡಿ ಹೊಗಳಿದರು ಕೂಡ ಕಡಿಮೆಯೇ, ರಾಜಕೀಯ ವಿಚಾರದಿಂದ ಸದಾ ಅಂತರ ಕಾಯ್ದುಕೊಂಡಿದ್ದರು. ಕನ್ನಡ ವಿಚಾರ ಬಂದಾಗ ಅಣ್ಣಾವ್ರು ಎಂದೂ ಮುಂಚೂಣಿಯಲ್ಲಿ ಇರುತ್ತಿದ್ದರು. ಕನ್ನಡ ಪ್ರೇಮಿ ಮತ್ತು ತನ್ನ ಕಲಾರಾಧನೆಯನ್ನು ಕನ್ನಡಕ್ಕೆ ಮೀಸಲಿಟ್ಟಿದ್ದ ಇವರು ಒಂದೇ ಒಂದು ಪರಭಾಷೆ ಸಿನಿಮಾದಲ್ಲಿ ನಟಿಸಿ.
ಆ ಬಳಿಕ ತಾವೆಂದೂ ಇನ್ನೆಂದೂ ಬೇರೆ ಭಾಷೆಗಳಲ್ಲಿ ನಟಿಸುವುದಿಲ್ಲ ಕನ್ನಡಕ್ಕೆ ಮಾತ್ರ ಸೀಮಿತ ಎಂದು ಪ್ರತಿಜ್ಞೆ ಮಾಡಿ ಹಾಗೆಯೇ ನಡೆದುಕೊಂಡರು. ಅಣ್ಣಾವ್ರು ನಟಿಸಿದ್ದ ಆ ಒಂದು ಪರಭಾಷಾ ಸಿನಿಮಾ ಯಾವುದು ಮತ್ತು ಅವರು ಈ ರೀತಿ ಏಕೆ ನಿರ್ಧಾರ ಮಾಡಿದರು ಗೊತ್ತಾ?…
ಈ ಸುದ್ದಿ ನೋಡಿ:- ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!
ಎಲ್ಲರಿಗೂ ಗೊತ್ತಿರುವಂತೆ ಅಣ್ಣಾವ್ರ ಮೊದಲ ಚಿತ್ರ ಬೇಡರ ಕಣ್ಣಪ್ಪ (Bedara Kannappa) ಸಿನಿಮಾ 1954ರಲ್ಲಿ ತೆರೆಕಂಡಿತು. ಡಾ. ರಾಜ್ಕುಮಾರ್ (Dr. Rajkumar) ಹಾಗೂ ಪಂಡರಿಬಾಯಿ (Pandari Bai) ಜೋಡಿಯ ಈ ಚಿತ್ರವು ಸೂಪರ್ ಹಿಟ್ ಆಯಿತು. ಆ ಯಶಸ್ಸಿನಿಂದ ಪ್ರೇರಿತರಾಗಿ ಇದೇ ಕಥೆಯನ್ನು ತಮಿಳಿನಲ್ಲಿ ಅಲ್ಲಿನ ನೇಟಿವಿಟಿಗೆ ತಕ್ಕಂತೆ ಸ್ವಲ್ಪ ಬದಲಾಯಿಸಿ ಮತ್ತು ಒಂದು ಹಾಡನ್ನು ಹೆಚ್ಚಿಗೆ ಸೇರಿಸಿ ವೇಡನ್ ಕಣ್ಣಪ್ಪ (Vedan Kannappa) ಎಂದು ನಿರ್ಮಿಸಲಾಯಿತು, ಈ ಸಿನಿಮಾ ಕೂಡ ಹೆಸರಾಯಿತು.
ತೆಲುಗಿನಲ್ಲಿ ಮರು ನಿರ್ಮಾಣ ಮಾಡಲು ನಿರ್ಧರಿಸಿ ಕಾಳಹಸ್ತಿ ಮಹಾತ್ಯಂ (Kalahasti Mahatyam) ಎಂದು ಹೆಸರಿಡಲಾಯಿತು. ಇದರಲ್ಲಿ ಬಹಳ ವಿಶೇಷ ಸಂಗತಿ ಏನೆಂದರೆ ಈ ಚಿತ್ರದಲ್ಲಿ ಕೂಡ ಡಾ ರಾಜ್, ನಟಿ ಪಂಡರಿ ಬಾಯಿ, ಹಾಸ್ಯ ನಟ ನರಸಿಂಹ ರಾಜು, ರಾಜಾ ಸುಲೋಚನ, ಕುಶಲಾ ಕುಮಾರಿ, ಜಿವಿ ಅಯ್ಯರ್, ಸಂಧ್ಯಾ ಮುಂತಾದವರು ಸೇರಿದಂತೆ ಬಹುತೇಕರು ಕನ್ನಡದಲ್ಲಿ ನಟಿಸಿದವರೇ ಮತ್ತೆ ಬಣ್ಣ ಹಚ್ಚಿದ್ದರು.
ಈ ಚಿತ್ರವನ್ನು ಹೆಚ್ಎಲ್ಎನ್ ಸಿಂಹ (HLN Simha) ನಿರ್ದೇಶನ ಮಾಡಿದ್ದರು. ಡಾ. ರಾಜ್ ಕುಮಾರ್ ಅವರು ಕನ್ನಡ ಹೊರತುಪಡಿಸಿ ನಟಿಸಿದ ಬೇರೆ ಭಾಷೆಯ ಒಂದೇ ಒಂದು ಸಿನಿಮಾ ಎಂದರೆ ಅದು ಈ ಸಿನಿಮಾ ಮಾತ್ರ. ಆದರೆ, ಆ ಚಿತ್ರದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ತಾವು ಇನ್ನೆಂದೂ ಕನ್ನಡ ಸಿನಿಮಾಗಳನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಾಗೇ ಜೀವನಪೂರ್ತಿ ನಡೆದುಕೊಂಡರು.
ಈ ಸುದ್ದಿ ನೋಡಿ:- ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!
ಆದರೆ ಅಣ್ಣಾವ್ರು ಅಂದು ತೆಗೆದುಕೊಂಡ ನಿರ್ಧಾರಕ್ಕೆ ಕಾರಣ ಏನು ಎಂದು ಸ್ಪಷ್ಟವಾಗಿ ಮಾಹಿತಿ ಇಲ್ಲ. ತಮ್ಮ ಸೇವೆ ಏನಿದ್ದರೂ ಕನ್ನಡಕ್ಕೆ ಮೀಸಲಾಗಬೇಕು ಎನ್ನುವ ಅವರ ಆ ಧೃಡ ನಿರ್ಧಾರದ ಹಿಂದಿನ ಕಾರಣ ಏನೇ ಆಗಿದ್ದರು ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಮಾತ್ರ ಇದರಿಂದ ಸಾಕಷ್ಟು ಒಳ್ಳೆಯದಾಗಿತ್ತು.
ಇದಾದ ಬಳಿಕ ಅವರಿಗೆ ದೊಡ್ಡ ದೊಡ್ಡ ಬೇರೆ ಭಾಷೆಯ ಸ್ಟಾರ್ಗಳ ಜೊತೆ ನಟಿಸುವ ಮತ್ತು ಅತಿ ಹೆಚ್ಚು ಸಂಭಾವನೆಗೆ ನಟಿಸುವ ಅತಿಥಿ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಾಗಲು ಕೂಡ ಅಣ್ಣಾವ್ರು ಒಪ್ಪಿಕೊಳ್ಳದೆ ನಯವಾಗಿ ತಿರಸ್ಕರಿಸಿದ್ದನ್ನು ನಾವು ಎಂದೂ ಸ್ಮರಿಸಬಹುದು.