ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಹಾಡುಗಳೇ ಹಾಗೆ ಕನ್ನಡದ ಎವರ್ಗ್ರೀನ್ ಸಾಂಗ್ ಗಳು ಎಂದು ಹೇಳಬಹುದು ಅದರಲ್ಲೂ ರವಿಚಂದ್ರನ್ ಅವರ ಸಿನಿಮಾದಲ್ಲಿರುವ ಹಂಸಲೇಖರವರ ರಚನೆ ಹಾಡುಗಳು ಕನ್ನಡ ಚಿತ್ರರಂಗ ಇರುವವರೆಗೂ ಕೂಡ ಶಾಶ್ವತವಾಗಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಇರುತ್ತವೆ.
ಈಗಂತೂ ಸೋಶಿಯಲ್ ಮೀಡಿಯಾ ಯುಗವಾಗಿರುವುದರಿಂದ ಯಾವ ಹಾಡು ಯಾವಾಗ ಟ್ರೆಂಡ್ ಆಗುತ್ತದೆ, ವೈರಲ್ ಆಗಿ ಬಿಡುತ್ತದೆ ಎಂದು ಊಹಿಸಲು ಅಸಾಧ್ಯ. ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಸಿನಿಮಾ ಹಾಡಾದ ಯಾರೆಲೇ ನಿನ್ನ ಮೆಚ್ಚಿದವನು, ಹೇಳೇ ಹುಡುಗಿ ಹೇಳೇ ಬೆಡಗಿ ಹಾಡಂತೂ ರೀಲ್ಸ್ ಮಾಡುವವರ ಮೊದಲನೇ ಆಯ್ಕೆಯಾಗಿ ಇರುತ್ತದೆ.
ರೀಲ್ಸ್ ಮಾಡುವ ಪ್ರತಿಯೊಬ್ಬರೂ ಕೂಡ ಪ್ರತಿಯೊಬ್ಬರೂ ಕೂಡ ಈ ಹಾಡಿಗೆ ರೀಲ್ಸ್ ಮಾಡೇ ಮಾಡಿರುತ್ತಾರೆ. ಈ ಹಾಡಿಗೆ ಭಿನ್ನವಿಭಿನ್ನ ರೀತಿಯಲ್ಲಿ ಅವರ ಕಲ್ಪನೆಯಂತೆ ರೀಲ್ಸ್ ಮಾಡುವುದನ್ನು ನೋಡುವುದೇ ಒಂದು ಚೆಂದ ಇದಕ್ಕೆ ಸೆಲೆಬ್ರೆಟಿಗಳು ಹೊರತೇನಲ್ಲ.
ಕಿರುತೆರೆ ಕಣ್ಮಣಿಯರು ಆಡಿಷನಲ್ ಆಗಿ ಸೀರೆಯುಟ್ಟು ಈ ಹಾಡಿಗೆ ಸೌಂದರ್ಯ ರವರನ್ನು ಅನುಕರಿಸಲು ಪ್ರಯತ್ನ ಪಟ್ಟಿದ್ದೇ ಪಟ್ಟಿದ್ದು ಮತ್ತು ಹುಡುಗರು ರಫ್ ಅಂಡ್ ಟಫ್ ಆಗಿ ರವಿಚಂದ್ರನ್ ಪ್ರೀತಿಯಿಂದ ನಲ್ಮೆಯ ಕೈ ಎಳೆದು ಹೇಳೆ ಹುಡುಗಿ ಹೇಳೇ ಬೆಡಗಿ ವೀರ ಧೀರ ಜೋಕುಮಾರ ನಾನು ತಾನೇ ಎಂದು ಕೇಳುತ್ತಲೇ ಇರುತ್ತಾರೆ.
ಈಗ ಅದೇ ಹಾಡಿಗೆ ಮನಸೋತು ಕನ್ನಡದ ಸ್ಟಾರ್ ನಟಿಯೊಬ್ಬರು ಅಂದವಾಗಿ ಸೀರೆ ಉಟ್ಟು ಮೈ ಬಳುಕುಸಿ ಸುದ್ದಿಯಾಗಿದ್ದಾರೆ. ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ್ಯಾಂಡಲ್ವುಡ್ ನಟಿ ಮನೆಮಗಳು ರಾಧಿಕಾ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುತ್ತಾರೆ.
ಆಗಾಗ ಟ್ರೆಂಡಿಂಗ್ ನಲ್ಲಿರುವ ಮ್ಯೂಸಿಕ್ ಗಳಿಗೆ ಸ್ಟೆಪ್ ಹಾಕಿ ಮಿಂಚು ಹರಿಸುತ್ತಾರೆ ಈಗ ಕನ್ನಡದ ರವಿಮಾಮನ ಹಾಡಿಗೆ ಸೊಂಟ ಕುಣಿಸಿ ಸುದ್ದಿಯಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಸೌಂದರ್ಯದ ಗಣಿ ಅಷ್ಟೇ ಚೆನ್ನಾಗಿ ಅಭಿನಯವನ್ನು ಅರೆದು ಕುಡಿದಿರುವ ಅಭಿನೇತ್ರಿ. ಇದೇ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಕನ್ನಡ ಮತ್ತು ತಮಿಳು ತೆಲುಗು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿ.
ಆದರೆ ಕಥೆಗಳ ಆಯ್ಕೆಯಲ್ಲಿ ಈಗ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಧಮಯಂತಿ ಬಳಿಕ ಇವರ ಭೈರಾದೇವಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಯಿದ್ದು ತಮಿಳುನಲ್ಲಿಯೂ ಕೆಲ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೇ ಜನವರಿಯಲ್ಲಿ ಇವರ ನಮಗಾಗಿ ಎನ್ನುವ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ, ಸದ್ದಿಲ್ಲದೇ ಈ ಸಿನಿಮಾಗಳ ಶೂಟಿಂಗ್ ನಡೆಸುತ್ತಿರುವ ಇವರು ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ಕನ್ನಡದ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ.
ಎಲ್ಲ ಎಂಗೆಳೆಯರ ನೆಚ್ಚಿನ ಹಾಡಾದ ರವಿಮಾಮನ ಈ ಹಾಡಿಗೆ ನಾಚಿ ನೀರಾಗಿ ಎಕ್ಸ್ಪ್ರೆಶನ್ ತೋರಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಭರತನಾಟ್ಯ ಮತ್ತು ಬೆಲ್ಲಿ ಡ್ಯಾನ್ಸ್ ನಲ್ಲಿ ಪರಿಣತಿ ಹೊಂದಿದ್ದಾರೆ. ಹೆಚ್ಚಾಗಿ ಇವರ ರೀಲ್ ಗಳಲ್ಲಿ ಹಾಗೂ ಡ್ಯಾನ್ಸ್ಗಳಲ್ಲಿ ಬೆಲ್ಲಿ ಡ್ಯಾನ್ಸ್ ಸ್ಟೆಪ್ಸ್ ಕಾಣಬಹುದು.
ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಇದ್ದಾರೆ, ಪ್ರತಿ ರೀಲ್ಸ್ ಗೂ ಅತಿಹೆಚ್ಚಿನ ಲೈಕ್ಸ್ ಮತ್ತು ಕಾಮೆಂಟ್ಗಳು ಬರುತ್ತಿವೆ. ನೀವು ಕೂಡ ರಾಧಿಕಾ ಕುಮಾರಸ್ವಾಮಿ ಅವರ ಫ್ಯಾನ್ ಆಗಿದ್ದರೆ ತಪ್ಪದೆ ಈ ಅಂಕಣದ ಕೆಳಗೆ ಅವರ ಅಭಿನಯದ ಕನ್ನಡದ ಯಾವ ಚಿತ್ರ ನಿಮಗೆ ಇಷ್ಟ ಮತ್ತು ಮುಂದಿನ ಯಾವ ಚಿತ್ರಕ್ಕಾಗಿ ಕಾಯುತ್ತಿದ್ದೀರಿ ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.