Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಶೋನಲ್ಲಿ ಸಿಕ್ಕ ಹಣವನ್ನು ದಾನ ಮಾಡಿದ ರಕ್ಷಕ್ ಬುಲೆಟ್.!

Posted on November 6, 2023 By Admin No Comments on ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಶೋನಲ್ಲಿ ಸಿಕ್ಕ ಹಣವನ್ನು ದಾನ ಮಾಡಿದ ರಕ್ಷಕ್ ಬುಲೆಟ್.!

 

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಾಸ್ ಡೈಲಾಗ್ ಗಳಿಂದಲೇ ಸಕ್ಕತ್ ಫೇಮಸ್ ಆಗಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 10ರಲ್ಲಿ (BB S10) ಕಂಟೆಸ್ಟೆಂಟ್ ಆಗಿ ಮನೆ ಸೇರಿದ್ದರು.

ಹೊರಗೆ ಇದ್ದಾಗ ಬುಲೆಟ್ ನಂತೆ ಡೈಲಾಗ್ ಹೊಡೆದು ಮನೋರಂಜಿಸುತ್ತಿದ್ದ ಅವರು ಒಳಗೂ ಕೂಡ ಅದೇ ರೀತಿಯ ಖಡಕ್ ಮಾತುಗಳಿಂದ ಆರಂಭದಲ್ಲಿ ಉತ್ತಮ ಪ್ಲೇಯರ್ ಎನಿಸಿಕೊಂಡು ಉತ್ತಮ ಪಟ್ಟಿ ಪಡೆದು ಒಂದು ಬಾರಿ ಮನೆಯ ಕ್ಯಾಪ್ಟನ್ ಕೂಡ ಆಗಿದ್ದರು.

ಆದರೆ ಬರು ಬರುತ್ತಾ ರಕ್ಷಕ್ ಗ್ರಾಫ್ ಇಳಿಯತೊಡಗಿತು. ಅಂತಿಮವಾಗಿ ಅವರ ಬಿಗ್ ಬಾಸ್ ಮನೆಯ ಜರ್ನಿ ನಾಲ್ಕನೇ ವಾರಕ್ಕೆ ಅಂತ್ಯವಾಗಿದೆ. ಬಹಳ ಚಿಕ್ಕ ವಯಸ್ಸಿಗೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ರಕ್ಷಕ್ ಬುಲೆಟ್ ಈ ವಾರದಲ್ಲಿ ಆಗಾಗ ನನ್ನಿಂದ ಆದಷ್ಟು ಎಫರ್ಟ್ ಹಾಕುತ್ತಿದ್ದೇನೆ ಇದನ್ನು ಮೀರಿ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ.

ನನಗೆ ಈ ಆಟವೇ ಅರ್ಥ ಆಗುತ್ತಿಲ್ಲ ಎಂದೆಲ್ಲ ಮಾತನಾಡಿದ್ದರು. ಬಹುಶಃ ಅದೇ ಅವರ ಆಟಕ್ಕೆ ಮುಳುವಾಯಿತೋ ಏನೋ ಈ ವಾರದ ಟಾಸ್ಕ್ಗಳಲ್ಲೂ ಅಷ್ಟೇನೂ ಕಾಣಿಸಿಕೊಳ್ಳದ ಕಾರಣಕ್ಕಾಗಿ ಮನೆಯಿಂದ ಹೊರ ಬಿದ್ದಿದ್ದಾರೆ (Eliminated). ಕೊನೆಯವರೆಗೂ ಕೂಡ ನಾನು ಆಚೆ ಹೋದರು ಚಿಂತೆ ಇಲ್ಲ ಎನ್ನುತ್ತಿದ್ದವರು.

ಸ್ಟೇಜ್ ಮೇಲೆ ತಮ್ಮ ಜರ್ನಿ ವಿಡಿಯೋ ಕ್ಲಿಪಿಂಗ್ (VT) ನೋಡುತ್ತಿದ್ದಂತೆ ಭಾವುಕರಾಗಿ ಬಿಗ್ ಬಾಸ್ ಮನೆಯನ್ನು ನಾಳೆಯಿಂದ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬುಲೆಟ್ ಪ್ರಕಾಶ್ ಅವರಿಗೆ ತಮ್ಮ ಮಗ ಕೂಡ ದೊಡ್ಡ ಹೀರೋ ಆಗಬೇಕು ಎನ್ನುವ ಆಸೆ ಇತ್ತು ಆದರೆ ರಕ್ಷಕ್ ಬಣ್ಣ ಹಚ್ಚುವ ಮುನ್ನವೇ ಬುಲೆಟ್ ಪ್ರಕಾಶ್ ಅವರು ಕಣ್ಮುಚ್ಚಿಕೊಂಡಿದ್ದರು.

ಕಳೆದ ವರ್ಷ ತೆರೆ ಕಂಡ ಗುರು ಶಿಷ್ಯರು ಸಿನಿಮಾದ (debut by Gurushishyaru Movie) ಮೂಲಕ ರಕ್ಷಕ್ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನಟ ಶರಣ್, ಪ್ರೇಮ್ ಮುಂತಾದ ಸ್ಟಾರ್ ಗಳ ಮಕ್ಕಳ ಜೊತೆ ರಕ್ಷಕ್ ಕೂಡ ಆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದು ಆಕ್ಷನ್ ಸಿನಿಮಾದಲ್ಲಿ ಸೋಲೋ ಹೀರೋ ಆಗಿ ಕಾಣಿಸಿಕೊಳ್ಳುವ ಆಸೆಯನ್ನು ಕೂಡ ಹೊಂದಿದ್ದಾರೆ.

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇದರ ಕುರಿತು ಗಾಳಿ ಸುದ್ದಿ ಕೂಡ ಹರಿದಾಡುತ್ತಿರುತ್ತದೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ರಕ್ಷಕ್ ಬುಲೆಟ್ ಅವರ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಆಟದಲ್ಲಿ ಪಡೆದ ಹಣವನ್ನು ಅವರು ಒಂದು ಸತ್ಕಾರಕ್ಕೆ ಬಳಸಿಕೊಂಡ (Social work) ಕಾರಣದಿಂದಾಗಿ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ರಕ್ಷಕ್ ಬುಲೆಟ್ ಅವರು ತಾವು ಬಿಗ್ ಬಾಸ್ ಮನೆಯಲ್ಲಿ ಸಂಪಾದನೆ ಮಾಡಿದ ಹಣದಿಂದ ಆಶ್ರಮವೊಂದರ ನಿರ್ಮಾಣಕ್ಕೆ 100 ಮೂಟೆ ಸಿಮೆಂಟ್ ಕೊಟ್ಟಿದ್ದಾರೆ. ಸ್ವತಃ ಆಶ್ರಮದ ಉಸ್ತುವಾರಿ ವಹಿಸಿಕೊಂಡಿರುವಂತಹ ನಕ್ಷತ್ರ ಎನ್ನುವವರು ಸಹ ಈ ವಿಡಿಯೋದಲ್ಲಿ ಕಾಣಿಸಿಕೊಂಡು ಇಷ್ಟು ಚಿಕ್ಕ ವಯಸ್ಸಿಗೆ ರಕ್ಷಕ್ ಗೆ ಇಷ್ಟು ಒಳ್ಳೆಯ ಮನಸ್ಸಿರುವುದು ನಿಜಕ್ಕೂ ಅಪರೂಪ.

ಈಗಿನ ಕಾಲದ ಮಕ್ಕಳಿಗೆ ಪಬ್ ಪಾರ್ಟಿ ಬಿಟ್ಟು ಬೇರೆ ಗೊತ್ತಿರುವುದಿಲ್ಲ. ಸಮಾಜದಲ್ಲಿ ಕ’ಷ್ಟದಲ್ಲಿರುವವರನ್ನು ನೋಡಿ ಉಳ್ಳವರು ಸಹಾಯ ಮಾಡಿದರೆ ಅವರು ಕೂಡ ಬದುಕುತ್ತಾರೆ ಸಾಧ್ಯವಾದಷ್ಟು ಜನ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ಆಶ್ರಮ ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡುವ ಮನಸ್ಸಿರುವವರು ಈ ಸಂಖ್ಯೆಗೆ ಕರೆ ಮಾಡಿ.
9535236199

Entertainment

Post navigation

Previous Post: ಬಿಗ್ ಬಾಸ್ ಸ್ಕ್ರಿಪ್ಟೆಡ್ ಸತ್ಯ ಬಿಚ್ಚಿಟ್ಟ ಹಳೆ ಸ್ಪರ್ಧಿ, ಸುದೀಪ್ ಸರ್ ಯಾಕೆ ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ಕೊಟ್ಟ ಕಿರಿಕ್ ಕೀರ್ತಿ.!
Next Post: 35 ಕಂಪನಿ ಓನರ್ ನಾನು ಎಂದ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme