ಶ್ರೀನಗರ ಕಿಟ್ಟಿ (ShreeNagara Kitty) ಕನ್ನಡದ ಪೋಪ್ಯುಲಾರ್ ನಟ. ಒಂದು ಕಾಲದಲ್ಲಿ ಎಂಗೆಳೆಯರ ಡ್ರೀಮ್ ಬಾಯ್ ಆಗಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾರೆ. ಮಾಡಿದಷ್ಟು ಸಿನಿಮಾಗಳಲ್ಲೂ ಕೂಡ ವಿಭಿನ್ನ ಲುಕ್ ಗಳನ್ನು ಟ್ರೈ ಮಾಡಿ ಟೋನಿ, ಇಂತಿ ನಿನ್ನ ಪ್ರೀತಿಯ, ಒಲವೇ ಜೀವನ ಲೆಕ್ಕಾಚಾರ, ಸಂಜು ಮತ್ತು ಗೀತಾ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ಇತಿಹಾಸದಲ್ಲಿ ಒಂದು ಪ್ರಮುಖ ಪುಟ ಸೇರಿದ್ದಾರೆ.
ಸೆಲೆಬ್ರಿಟಿಯಾಗಿದ್ದರೂ ಕೂಡ ಇವರದ್ದು ಸಿಂಪಲ್ ಬದುಕು, ಆ ಕಾರಣಕ್ಕಾಗಿ ಇಂದು ಸುದ್ದಿಯಾಗಿದ್ದಾರೆ. ಈ ವಿಚಾರವನ್ನು ಹೇಳುವುದಕ್ಕೂ ಮುನ್ನ ಇವರ ಪತ್ನಿಯ ಬಗ್ಗೆ ಕೂಡ ಹೇಳಲೇಬೇಕಾಗುತ್ತದೆ. ಭಾವನ ಬೆಳಗೆರೆ (Wife Bhavana Belegere ) ಕರ್ನಾಟಕ ಕಂಡ ಶ್ರೇಷ್ಠ ಪ್ರತಿಭೆ ಅಕ್ಷರ ರಾಕ್ಷಸ ರವಿ ಬೆಳಗೆರೆ ಅವರ ಹಿರಿಯ ಮಗಳು.
ಶ್ರೀನಗರ ಕಿಟ್ಟಿ ಕೈ ಹಿಡಿದಿರುವ ಭಾವನೆ ಬೆಳೆಗೆರೆ ಕೂಡ ಈಗ ಸೆಲೆಬ್ರಿಟಿ. ಕಿರುತೆರೆಯಲ್ಲಿ ತಮ್ಮದೇ ಆದ ನೆಲೆ ಕಂಡುಕೊಂಡಿರುವ ಇವರು ಸೋಷಿಯಲ್ ಮೀಡಿಯಾ ಮೂಲಕ ಜನರ ಜೊತೆ ಕನೆಕ್ಟ್ ಆಗಿದ್ದಾರೆ ಮ. ತಮ್ಮದೇ ಆದ ಉದ್ಯಮದಲ್ಲಿ ತೊಡಗಿಕೊಂಡಿರುವ ಭಾವನ ರವಿ ಬೆಳಗೆರೆ ಮಗಳಾಗಿರುವ ಕಾರಣ ಬದುಕಿನಲ್ಲಿ ಸುಖ-ದುಃಖ ನೋವುನಲ್ಲಿ ನಲಿವವನ್ನು ಸಮಾನವಾಗಿ ತಿಳಿದವರು.
ಸೆಲೆಬ್ರಿಟಿಯಾಗಿದ್ದರು ಕೂಡ ಸಾಮಾನ್ಯರಂತೆ ಬದುಕಲು ಇಚ್ಚಿಸುತ್ತಾರೆ. ಹಾಗೆಯೇ ತಂದೆ ತಮ್ಮನ್ನು ಹೇಗೆ ಬೆಳೆಸಿದರು ಹಾಗೆ ತಮ್ಮ ಮಗಳಿಗೂ ಕೂಡ ಬದುಕನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಾರೆ. ಸದ್ಯಕ್ಕೆ ಭಾವನ ಬೆಳೆಗೆರೆ ಹಾಗೂ ಕಿಟ್ಟಿ ಮುದ್ದಿನ ಮಗಳು ಪರಿಣಿತಾ (daughter Parinitha) ಕೂಡ ಇದೇ ರೀತಿ ಬೆಳೆಯುತ್ತಿದ್ದಾರೆ. ಇದೇ ವಿಚಾರಕ್ಕಾಗಿ ಇಂದು ಏರ್ಪೋರ್ಟ್ ನಲ್ಲಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ದಸರಾ ರಜೆ ಎಂದರೆ ಎಲ್ಲರಿಗೂ ಸಂಭ್ರಮ ತಮ್ಮ ಇಷ್ಟವಾದ ಟೂರಿಂಗ್ ಪ್ಲೇಸ್ ಗಳಿಗೆ ಫ್ಯಾಮಿಲಿ ಜೊತೆ ಹೋಗಲು ಅಥವಾ ಅಜ್ಜ ಅಜ್ಜಿ ಮನೆಗೆ ಹೋಗಲು ಬೇಸಿಗೆ ರಜೆ, ದಸರಾ ಹಾಗಾಗಿ ಶಾಲೆಗೆ ಹೋಗುವ ಮಕ್ಕಳು ಕಾಯುತ್ತಿರುತ್ತಾರೆ. ಅದೇ ರೀತಿ ಪರಿಣಿತ ಕೂಡ ಪ್ರತಿ ವರ್ಷ ತಮಗೆ ರಜೆ ಬಂದಾಗ ತನ್ನನ್ನು ಫಾರಿನ್ ಟ್ರಿಪ್ ಗೆ (foreign trip) ಕರೆದುಕೊಂಡು ಹೋಗು ಎಂದು ಗೋಗರೆತಿದ್ದಂತೆ.
ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿಗೆ ಇದು ದೊಡ್ಡ ವಿಚಾರವೇ ಅಲ್ಲ, ಆದರೂ ಕೂಡ ಮಗಳಿಗೆ ಸಬೂಬು ಹೇಳಿಕೊಂಡು ಕಾಲ ನೂಕಿದ್ದಾರೆ. ಆದರೆ ಇದ್ದಕ್ಕಿದ್ದಂತೆ ನಿನ್ನೆ ಮಗಳನ್ನು ಏರ್ಪೋರ್ಟ್ ಗೆ ಕರೆದುಕೊಂಡು ಹೋಗಿದ್ದಾರೆ. ಮನೆಯಿಂದ ಹೊರಡುವಾಗ ದುಬೈ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿ ಕರೆದುಕೊಂಡ ಹೋದ ಪೋಷಕರು ಏರ್ಪೋರ್ಟ್ ನಲ್ಲಿ ಟ್ರಾವೆಲ್ಸ್ ಹಿಸ್ಟರಿ ಮತ್ತು ಟಿಕೆಟ್ ನೀಡುವ ಮೂಲಕ ದುಬೈ ಅಲ್ಲ USA ಪ್ರವಾಸ ಎಂದು ಸರ್ಪ್ರೈಸ್ ಕೊಟ್ಟಿದ್ದಾರೆ.
ಕ್ಷಣ ಕಾಲ ಅಲ್ಲೇ ತಬ್ಬಿಬ್ಬಾಗಿ ಹೋದ ಮಗಳು ತಕ್ಷಣವೇ ಅಪ್ಪನನ್ನು ಒಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ಯಾಕೆಂದರೆ ಅವರಿಗೆ ದುಬೈಗಿಂತ ನ್ಯೂಯಾರ್ಕ್ ಪ್ರವಾಸ ಹೋಗುವುದಕ್ಕೆ ಇಷ್ಟ ಇತ್ತು. ಅದನ್ನೇ ಹಲವು ದಿನಗಳಿಂದ ಕೇಳುತ್ತಿದ್ದರು. ಕೊನೆಗೂ ಅಪ್ಪ ಅಮ್ಮ ತಾನು ಕೇಳಿದ್ದಕ್ಕೆ ಒಪ್ಪಿಕೊಂಡಿದ್ದನ್ನು ಸಂತೋಷದ ಕಣ್ಣೀರಾಗಿ ಹೊರ ಹಾಕಿದ್ದಾರೆ.
ಅಲ್ಲೇ ಇದ್ದ ಸ್ಥಳೀಯರೊಬ್ಬರು ಇದೆಲ್ಲವನ್ನ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ಭಾವನ ಅವರು ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ವಿಡಿಯೋವನ್ನು ಹಂಚಿಕೊಂಡಿದ್ದಾರೆ.