ಬಿಗ್ ಬಾಸ್ (Bigboss) ರಿಯಾಲಿಟಿ ಶೋಗಳ ಸರದಾರ, ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಪ್ರಸಾರವಾಗುವ ಕಾರ್ಯಕ್ರಮ. ಈ ಟಿವಿ ಶೋ ಕಿರುತೆರೆ ಜನತೆಗೆ ಇಷ್ಟವಾಗಲು ಹತ್ತಾರು ಕಾರಣಗಳಿವೆ. ಒಂದೇ ಮನೆಯಲ್ಲಿ 17 ಸೆಲೆಬ್ರೆಟಿಗಳು 24 ಗಂಟೆಯೂ ಕ್ಯಾಮರದ ಎದುರಿಗೆ ಕಾಣಿಸಿಕೊಳ್ಳುವ ಕಾರಣ ನಮ್ಮಿಷ್ಟದ ತಾರೆಗಳು ಅವರ ವೈಯಕ್ತಿಕ ಜೀವನದಲ್ಲಿ ಹೇಗಿರುತ್ತಾರ.
ಎಂದು ಮತ್ತು ಯಾವ ಯಾವ ಮನಸ್ಥಿತಿಯವರು ಯಾವ ಯಾವ ಸಿಚುವೇಶನ್ ಗಳಲ್ಲಿ ಹೇಗೆ ರಿಯಾಕ್ಟ್ ಮಾಡುತ್ತಾರೆ, ಯಾರು ಮಾಡಿದ್ದು ಸರಿ ಯಾರು ಮಾಡಿದ್ದು ತಪ್ಪು, ನಾವು ಆ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೇವು ಎನ್ನುವುದನ್ನು ಹೊರಗಡೆ ಕೂತು ಲೆಕ್ಕಾಚಾರ ಹಾಕುವ ಮನಸ್ಥಿತಿಯನ್ನು ಕೂಡ ಆಟವಾಡಿಸುವ ಆಟ ಇದು.
99 ದಿನಗಳ ಕಾಲ ಎಲ್ಲಾ ಕಂಟೆಸ್ಟೆಂಟ್ಗಳ ಜೊತೆಗೆ ಇದ್ದು ಅವರನ್ನು ಗೆಲ್ಲುವುದರ ಜೊತೆಗೆ ಹೊರಗಿನವರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡವರಿಗೆ ಗೆಲುವಿನ ಕಿರೀಟ ಹಾಗೂ 50 ಲಕ್ಷಗಳ ಬಂಪರ್ ಕ್ಯಾಶ್ ಸಿಗುತ್ತದೆ. ನಮ್ಮ ಭಾರತ ದೇಶದಲ್ಲಿ ಹೇಳುವುದಾದರೆ ಹಿಂದಿಯಲ್ಲಿ ಮೊಟ್ಟಮೊದಲಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಬಂತು.
ನಂತರ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಿಗೆ ಕನ್ನಡ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಯಿತು ಬಿಗ್ ಬಾಸ್ ಈಗ ಯಶಸ್ವಿಯಾಗಿ ತನ್ನ 10ನೇ ಆವೃತ್ತಿಯಲ್ಲಿದೆ. ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಫೇಮಸ್ ಆಗುವುದಕ್ಕೆ ವಿಶೇಷವಾದ ಎಕ್ಸ್ಟ್ರಾ ಕಾರಣ ಎಂದರೆ ಅದನ್ನು ಹೋಸ್ಟ್ ಮಾಡುತ್ತಿರುವ ಕಿಚ್ಚ ಸುದೀಪ್ (Big Boss Kannada host Kicha Sudeep) . ವಾರಂತ್ಯದಲ್ಲಿ ರಾಜಿ ಪಂಚಾಯಿತಿ ಮಾಡಿ ವಾತಾವರಣ ತಿಳಿಗೊಳಿಸುವ ಸುದೀಪ್ ಅವರ ನಿರೂಪಣೆ ಇನ್ನಷ್ಟು ಜನ ಬಿಗ್ ಬಾಸ್ ನೋಡುವುದಕ್ಕೆ ಕಾರಣವಾಗಿದೆ.
ಕನ್ನಡದ ಹೆಸರಾಂತ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ಮತ್ತು ಪರಭಾಷೆಗಳನ್ನು ಕೂಡ ತಮ್ಮ ಐಡೆಂಟಿಟಿ ಕಂಡುಕೊಂಡಿರುವ ಕಿಚ್ಚ ಸುದೀಪ್ ಅವರು ವಾರದ ಎರಡು ಎಪಿಸೋಡ್ ಗಳಲ್ಲಿ ಕಾಣಿಸಿಕೊಳ್ಳುತ್ತಾರ. ಶನಿವಾರದ ಪಂಚಾಯಿತಿ ಕಟ್ಟೆ ಹಾಗೂ ಸೂಪರ್ ಸಂಡೇ ವಿತ್ ಸುದೀಪ ಎನ್ನುವ ಎಪಿಸೋಡ್ ಗಳನ್ನು ಕಿಚ್ಚ ಸುದೀಪ್ ತಮ್ಮದೇ ಶೈಲಿಯಲ್ಲಿ ನಿಭಾಯಿಸುವುದು ಆಟ ಆಡಿದವರು ಮಾತ್ರವಲ್ಲದೆ ನೋಡುಗರಲ್ಲೂ ಕೂಡ ಎಚ್ಚರಿಕೆ ಹಾಗೂ ಸಮಾಧಾನ ಎರಡನ್ನು ಇರುತ್ತದೆ.
ಮನಸ್ತಾಪವಿದ್ದವರ ನಡುವೆ ಬಾಂಧವ್ಯ ಬೆಸೆಯುವಂತೆ ಮಾಡುವುದು, ಅನುಮಾನ ಪಟ್ಟವರಿಗೆ ಸರಿ ಉತ್ತರ ಕೊಟ್ಟು ಸರಿ ತಪ್ಪು ಕನ್ಫ್ಯೂಷನ್ ಕ್ಲಿಯರ್ ಮಾಡುವುದು, ಅಸಹಾಯಕವಾಗಿ ಸೋತವರಿಗೆ ಗೆಲ್ಲುವ ಛಲ ಧೈರ್ಯ ತುಂಬುವುದು, ಕಳಪೆಗೆ ಪಾಠ ಮನ ಗೆದ್ದವರಿಗೆ ಚಪ್ಪಾಳೆ ಹೀಗೆ ಹೊರಗಿನವರ ಅಭಿಪ್ರಾಯ ಅನಿಸಿಕೆಗಳನ್ನು ಒಳಗಿನವರಿಗೆ ಬಹಳ ನಾಜೂಕಾಗಿ ತಲುಪಿಸುವ ಈ ಕಿಚ್ಚ ತನ್ನ ಸಾರಥ್ಯಕ್ಕೆ ಪಡೆಯುವ ಸಂಭಾವನೆ ಎಷ್ಟು ಎನ್ನುವುದು ಕುತೂಹಲದ ವಿಷಯ. ಹೇಳಿ ಕೇಳಿ ಕನ್ನಡದ ಸ್ಟಾರ್ ಹೀರೋ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ಕೂಡ ಬೇಡಿಕೆಯಲ್ಲಿರುವ ನಟ.
ಸತತವಾಗಿ ಬ್ಯುಸಿ ಶೆಡ್ಯೂಲ್ ಇದ್ದರೂ ಕೂಡ ಸಾಧ್ಯವಾದಷ್ಟು ಕೆಲವೊಂದು ಸೀಸನ್ ಗಳಲ್ಲಿ ಒಂದು ವಾರವು ಮಿಸ್ ಮಾಡದ ರೀತಿ ಬಿಗ್ ಬಾಸ್ ವೇದಿಕೆಗೆ ಬರುವ ಕಿಚ್ಚ ಸುದೀಪ್ ಅವರು 2015ರಲ್ಲಿ ಮುಂದಿನ ಐದು ವರ್ಷಗಳಿಗಾಗಿ 20 ಕೋಟಿ ಸಂಭಾವನೆ (Remuneration) ಪಡೆದಿದ್ದರು ಎನ್ನುವುದನ್ನು ಒಂದು ಮೂಲ ಹೇಳುತ್ತದೆ ಮತ್ತು ಈ ಅಗ್ರಿಮೆಂಟ್ 2020ಕ್ಕೆ ಮುಗಿದಿರುವುದರಿಂದ ತದನಂತರದ ಸೀಜನ್ ಗಳಿಗೆ ತಮ್ಮ ಸಂಭಾವನೆ ಇನ್ನಷ್ಟು ಹೆಚ್ಚಿಸಿದ್ದಾರೆ ಎನ್ನುವುದು ಕೂಡ ಕೇಳಿಬಂದಿದೆ ಆದರೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ.