ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬ ಜನರು ಸಹ ಎಲ್ಲರೂ ಉತ್ತಮವಾದಂತಹ ವಿದ್ಯಾಭ್ಯಾಸವನ್ನು ಪಡೆದುಕೊಂಡು ದೊಡ್ಡ ದೊಡ್ಡ ಕೆಲಸದಲ್ಲಿಯೇ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ ಕೆಲವೊಂದಷ್ಟು ಜನ ವಿದ್ಯಾಭ್ಯಾಸದಲ್ಲಿ ಚೆನ್ನಾಗಿ ಮುಂದುವರೆದು ಅದರ ಮೂಲಕ ಅವರಿಗೆ ತಕ್ಕಂತೆ ಕೆಲವೊಂದು ಕೆಲಸವನ್ನು ಮಾಡುತ್ತಿರುತ್ತಾರೆ.
ಆದರೆ ಇನ್ನೂ ಕೆಲವೊಬ್ಬರು ಜಮೀನುಗಳಲ್ಲಿ ಕೆಲಸವನ್ನು ಮಾಡುವುದಾಗಿರ ಬಹುದು ಹೀಗೆ ಹಲವಾರು ಹಣವನ್ನು ಸಂಪಾದನೆ ಮಾಡುವಂತಹ ಕೆಲಸದ ದಾರಿಯನ್ನು ಹಿಡಿದುಕೊಂಡು ಆ ಒಂದು ಕೆಲಸವನ್ನು ಮಾಡುವುದರ ಮೂಲಕ ಹಣ ಸಂಪಾದನೆ ಮಾಡುತ್ತಿರುತ್ತಾರೆ. ಅದೇ ರೀತಿಯಾಗಿ ಕೆಲವೊಂದಷ್ಟು ಜನ ವಾಹನಗಳನ್ನು ಓಡಿಸುವುದರ ಮೂಲಕ ಅವರು ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ.
ಅದರಲ್ಲೂ ಇಂತಹ ಕೆಲವೊಂದಷ್ಟು ಜನ ವಾಹನಗಳನ್ನು ಕಲಿತಿರುತ್ತಾರೆ. ಆದರೆ ಅವರಿಗೆ ಅವರದೇ ಆದಂತಹ ಒಂದು ಸ್ವಂತ ಆಟೋರಿಕ್ಷವನ್ನಾಗಿ ಅಥವಾ ಗೂಡ್ಸ್ ಆಟಗಳನ್ನಾಗಲಿ ಕಾರ್ ಇಂತಹ ವಾಹನಗಳನ್ನು ಖರೀದಿ ಮಾಡಲು ಹಣ ಇರುವುದಿಲ್ಲ. ಅದಕ್ಕಾಗಿ ಅವರು ಬೇರೆಯವರ ಮೂಲಕ ಸಾಲವನ್ನು ಪಡೆದು ಅದರಿಂದ ಆ ಒಂದು ವಾಹನಗಳನ್ನು ಖರೀದಿ ಮಾಡುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನ ತಮ್ಮ ಪರಿಶ್ರಮದಿಂದ ಹೆಚ್ಚು ಕೆಲಸ ಮಾಡುವುದರ ಮೂಲಕ ಅದರಲ್ಲಿ ಹಣ ಸಂಪಾದನೆ ಮಾಡಿ ಆ ಒಂದು ಸಾಲವನ್ನು ತೀರಿಸಿಕೊಳ್ಳುತ್ತಿರುತ್ತಾರೆ.
ಆದರೆ ಇನ್ನೂ ಕೆಲವೊಂದಷ್ಟು ಜನ ಆ ಒಂದು ಹಣವನ್ನು ಬೇರೆಯವರಿಂದ ಪಡೆಯಲು ಸಹ ಸಾಧ್ಯವಾಗುತ್ತಿರುವುದಿಲ್ಲ. ಅಂತಹ ಸಮಯದಲ್ಲಿ ಬಡ ಜನರಿಗೆ ಸರ್ಕಾರ ಏನಾದರೂ ಸಹಾಯ ಮಾಡುತ್ತದ ಎನ್ನುವಂತಹ ಆಲೋಚನೆಯಲ್ಲಿ ಇರುತ್ತಾರೆ. ಹೌದು ಈ ಬಾರಿ ಸರ್ಕಾರ ಈ ಒಂದು ಆದೇಶವನ್ನು ಹೊರಡಿಸಿದ್ದು ವಾಹನವನ್ನು ಖರೀದಿ ಮಾಡುವವರಿಗೆ ಎರಡುವರೆ ಲಕ್ಷ ಸಬ್ಸಿಡಿ ಹಣವನ್ನು ಸರ್ಕಾರದ ವತಿಯಿಂದ ನೀಡುತ್ತಿದ್ದಾರೆ.
ಹೌದು ಈ ಒಂದು ಅಧಿ ಸೂಚನೆ ಈಗಾಗಲೇ ಹೊರಡಿಸಿದ್ದು. ಪ್ರತಿಯೊಬ್ಬರೂ ಕೂಡ ಈ ಒಂದು ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾದರೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳೋಣ. ಈ ಯೋಜನೆಯನ್ನು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವತಿಯಿಂದ ರಾಷ್ಟ್ರೀಕೃತ / ಪರಿಶಿಷ್ಟ ಬ್ಯಾಂಕುಗಳ ಸಂಯೋಗದೊಂದಿಗೆ ಪ್ರಾರಂಭ ಮಾಡಲಾಗಿದೆ.
ಪ್ಯಾಸೆಂಜರ್ ಆಟೋರಿಕ್ಷಾ, ಗೂಡ್ಸ್ ವಾಹನ, ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕ್ಗಳಿಂದ ಸಾಲವನ್ನು ಅನುಮೋದಿಸಿದ ಫಲಾನುಭವಿಗಳಿಗೆ 33% ರಷ್ಟು ಸಬ್ಸಿಡಿ ಅಥವಾ ಗರಿಷ್ಠ ರೂ.2.5 ಲಕ್ಷ ಸಾಲವನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಕೂಡ ಸಮಾಂತರ ಆದ್ಯತೆಯನ್ನು ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಖರೀದಿಸಿದ ವಾಹನವನ್ನು ಸಾಲದ ಅವಧಿ ಮುಕ್ತಾಯಗೊಳ್ಳುವವ ರೆಗೂ ಖರೀದಿಸಿದ ವಾಹನವನ್ನು ಇತರರಿಗೆ ಮಾರಾಟ ಮಾಡಬಾರದು.
ಫಲಾನುಭವಿಯು KMDC ಜಿಲ್ಲಾ ಕಛೇರಿಗೆ ರಸ್ತೆ ತೆರಿಗೆ ಮತ್ತು ವಿಮೆಯ ಬಗ್ಗೆ ಪೋಷಕ ದಾಖಲೆಗಳೊಂದಿಗೆ ಮಾಹಿತಿಯನ್ನು ಒಪ್ಪಿಸಬೇಕು. KMDC ಮೂಲಕ ಸಬ್ಸಿಡಿ ಪಡೆದ ವಾಹನದ ಮೇಲೆ “KMDC ನಿಂದ ಸಬ್ಸಿಡಿ ಮಾಡಲಾಗಿದೆ” ಎಂದು ಪ್ರದರ್ಶಿಸಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಬೇಕಾಗಿರುವ ಅರ್ಹತೆಗಳು.
ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರ ವಯೋಮಿತಿ ಕನಿಷ್ಠ 18 ವರ್ಷ ಮತ್ತು 55 ವರ್ಷ ಮೀರಿರಬಾರದು
* ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
* ಅರ್ಜಿದಾರರು ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
* ಅರ್ಜಿದಾರರ ವಯೋಮಿತಿ ಕನಿಷ್ಠ 18 ವರ್ಷ ಮತ್ತು 55 ವರ್ಷ ಮೀರಿರಬಾರದು.
* ಅರ್ಜಿದಾರರ ವಾರ್ಷಿಕ ಕುಟುಂಬ ಆದಾಯವು 4.50 ಲಕ್ಷ ರೂ ಒಳಗೆ ಇರಬೇಕು.
* ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ/ಕೇಂದ್ರ/ಸರ್ಕಾರಿ ಸಾರ್ವಜನಿಕ ವಲಯದ ಯಾವುದೇ ಘಟಕದಲ್ಲಿ ಉದ್ಯೋಗಿಯಾಗಿರಬಾರದು.
* ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಹೊಂದಿದವರ ಆಗಿರಬೇಕು.
* ಅರ್ಜಿದಾರರು KMDC ಯಲ್ಲಿ ಸಾಲ ಡೀಫಾಲ್ಟರ್ ಆಗಿರಬಾರದು.
ದಾಖಲೆಗಳು?
* ಪಾಸ್ಪೋರ್ಟ್ ಗಾತ್ರದ 2 ಫೋಟೋ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಡ್ರೈವಿಂಗ್ ಲೈಸೆನ್ಸ್
* ಫಲಾನುಭವಿ ಮತ್ತು ಅವನ/ಅವಳ ಕುಟುಂಬದ ಸದಸ್ಯರು ವಾಹನ ಖರೀದಿಸಲು ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯದಿರುವ ಬಗ್ಗೆ ಫಲಾನುಭವಿಯಿಂದ ಅಫಿಡವಿಟ್.
* ಸಾಲದ ಅವಧಿಯಲ್ಲಿ ಈ ಯೋಜನೆಯಡಿಯಲ್ಲಿ ಪಡೆದ ವಾಹನವನ್ನು ವರ್ಗಾವಣೆ ಮಾಡದಿರುವ ಬಗ್ಗೆ ಅಫಿಡವಿಟ್.
* ಬ್ಯಾಂಕ್ ಪಾಸ್ ಬುಕ್ ನ ಪ್ರತಿ.
* ಸ್ವಯಂ ಘೋಷಣೆ ನಮೂನೆ
ಕರ್ನಾಟಕ ಸರಕಾರದಿಂದ ಅನುಷ್ಠಾನಗೊಳಿಸದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.