ಇತ್ತೀಚಿನ ದಿನಗಳಲ್ಲಿ ಹಣಕಾಸಿನ ಬೆಲೆ ಹೆಚ್ಚಾಗುತ್ತಿದ್ದಂತೆ ಪ್ರತಿಯೊಬ್ಬ ರಿಗೂ ಕೂಡ ಪ್ರತಿಯೊಂದು ವಸ್ತುವಿನ ಮೇಲೆ ಹಾಗೆಯೇ ಆಸ್ತಿಯ ಮೇಲೆ ಆಸೆಗಳು ಹೆಚ್ಚಾಗುತ್ತಿದೆ ಎಂದೇ ಹೇಳಬಹುದು. ಅದೇ ರೀತಿ ಯಾಗಿ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದರೂ ಸಹ ತವರಿನ ಆಸ್ತಿಯನ್ನು ಪಡೆದುಕೊಳ್ಳಬೇಕು ಎಂದರೆ. ಕೆಲವೊಂದಷ್ಟು ಹಕ್ಕುಗಳನ್ನು ಅಂದರೆ ಅವರು ತಮ್ಮ ಜವಾಬ್ದಾರಿಗಳನ್ನು ಮರೆಯ ಬಾರದು.
ಅದೇ ರೀತಿ ಕೆಲವೊಂದಷ್ಟು ವಿಧಾನಗಳನ್ನು ಅವರು ಅನು ಸರಿಸಬೇಕಾಗುತ್ತದೆ ಹಾಗೇನಾದರೂ ಅವರು ಆ ಜವಾಬ್ದಾರಿಗಳನ್ನು ಮರೆತರೆ ಆ ಒಂದು ತವರಿನ ಆಸ್ತಿಯನ್ನು ಪಡೆದುಕೊಳ್ಳುವಂತಹ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ತವರಿನ ಆಸ್ತಿಯನ್ನು ಪಡೆದುಕೊಳ್ಳುವಂತಹ ಹೆಣ್ಣು ಮಕ್ಕಳು ಯಾವ ಒಂದು ವಿಚಾರವಾಗಿ ಯಾವ ರೀತಿಯಾದಂತಹ ಜವಾಬ್ದಾರಿಗಳನ್ನು ಹೊಂದಿರಬೇಕಾಗುತ್ತದೆ.
ಹಾಗೆಯೇ ನೀವು ಯಾವ ರೀತಿಯ ವಿಧಾನವನ್ನು ಜವಾಬ್ದಾರಿಯನ್ನು ನೀವು ಅನುಸರಿಸದೇ ಇದ್ದರೆ ತಂದೆಯ ಆಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ಹಾಗಾದರೆ ಮೊದಲನೇದಾಗಿ ಯಾವ ಯಾವ ಜವಾಬ್ದಾರಿಗಳನ್ನು ಹೆಣ್ಣು ಮಕ್ಕಳು ಹೊಂದಿರಬೇಕಾಗುತ್ತದೆ ಎನ್ನುವ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಹಿಂದೂ ಉತ್ತರಾಧಿಕಾರಿ ಕಾಯ್ದೆಯಲ್ಲಿ 2005ಕ್ಕೂ ಮೊದಲು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಹಕ್ಕು ಇರಲಿಲ್ಲ. 2005ರ ತಿದ್ದುಪಡಿಯ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಕೂಡ ಸಮಾನವಾದ ಹಕ್ಕುದಾರರು ಎಂದು ಬರುತ್ತದೆ. 2005ರ ನಂತರ ಕೆಲವೊಂದಷ್ಟು ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಬರಬೇಕು ಎಂದು ಕೋರ್ಟ್ ಮೆಟ್ಟಿಲೇರುತ್ತಾರೆ. ಈಗ ತಂದೆಯ ಸ್ವಯಾರ್ಜಿತ ಆಸ್ತಿ ಇರುತ್ತದೆ ಎಂದುಕೊಳ್ಳೋಣ.
ಅದನ್ನು ತನ್ನ ಒಬ್ಬ ಮಗಳಿಗೆ ದಾನ ಪತ್ರದ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡಿರುತ್ತಾರೆ. ಮತ್ತು ಅವಳ ಜೊತೆಯಲ್ಲಿಯೇ ಇರುತ್ತಾರೆ ದಾನವಾಗಿ ಆಸ್ತಿಯನ್ನು ಕೊಡುವಂತಹ ಸಂದರ್ಭದಲ್ಲಿ ತಂದೆ ತಾಯಿ ಗಳು ನಾವು ಇರುವ ತನಕ ನಮ್ಮನ್ನು ನೀನು ನೋಡಿಕೊಳ್ಳುವುದೇ ಆದಲ್ಲಿ ನಿನಗೆ ಈ ಆಸ್ತಿಯ ಸಂಪೂರ್ಣವಾದ ಹಕ್ಕು ಇರುತ್ತದೆ. ಹಾಗೇನಾದರೂ ಆ ಹೆಣ್ಣು ಮಗಳು ಅವರ ತಂದೆ ತಾಯಿಗಳನ್ನು ಆಸ್ತಿ ಪಡೆದ ನಂತರ ಅವರನ್ನು ದೂರ ಮಾಡುವುದರಿಂದ ಅವರ ತಂದೆ ತಾಯಿಗಳು ಕೋರ್ಟ್ ಮೆಟ್ಟಿಲೇರಿ ಕೇಸ್ ಫೈಲ್ ಮಾಡುವುದರ ಮೂಲಕ ಆ ಒಂದು ಆಸ್ತಿಯನ್ನು ಹಿಂಪಡೆಯಬಹುದಾಗಿರುತ್ತದೆ.
ಮೇಲೆ ಹೇಳಿದಂತೆ ಮಕ್ಕಳು ತನ್ನ ತಂದೆ ತಾಯಿಯ ಆಸ್ತಿಯನ್ನು ಪಡೆದ ನಂತರ ಇಂಥ ಕೆಲವೊಂದು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗು ತ್ತದೆ. ಹಾಗೇನಾದರೂ ನೀವು ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದೆ ಇದ್ದಂತಹ ಸಂದರ್ಭದಲ್ಲಿ ಆ ತಂದೆ ತಾಯಿಗಳು ಅವರ ಆಸ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು ಆದರಿಂದ ಈ ಒಂದು ವಿಚಾರವಾಗಿ ಹೆಣ್ಣು ಮಕ್ಕಳು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಇದು ಕೇವಲ ಹೆಣ್ಣು ಮಕ್ಕಳಿಗೆ ಅನ್ವಯ ಆಗುವುದಿಲ್ಲ ಬದಲಿಗೆ ಗಂಡು ಮಕ್ಕಳಿಗೂ ಸಹ ಈ ಒಂದು ಜವಾಬ್ದಾರಿ ಗಳು ಅನ್ವಯವಾಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕ ಳಾಗಲಿ ಇಂತಹ ಕೆಲವೊಂದು ಜವಾಬ್ದಾರಿಗಳನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಇದು ಜವಾಬ್ದಾರಿ ಎನ್ನುವುದಕ್ಕಿಂತ ಅವರ ಕರ್ತವ್ಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.